ಮಂಗಳೂರು: ಕೈ ನಾಯಕರ ವಿರುದ್ಧ ನೇರವಾಗಿ ಗುಡುಗುತ್ತಿದ್ದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಮೇಲೆ ಕಾಂಗ್ರೆಸ್ ನಾಯಕರಿಗೆ ಈಗ ಪ್ರೀತಿ ಉಕ್ಕಿ ಹರಿದಿದೆ.
ನಗರದ ಟಿಎಂಎಪೈ ಹಾಲ್ ನಲ್ಲಿ ನಡೆದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ವೇಳೆ ಆಗಮಿಸಿದ್ದ ಪೂಜಾರಿ ಅವರ ಕಾಲು ಮುಟ್ಟಿ ಮುಖಂಡರು ನಮಸ್ಕರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಬಿಲ್ಲವ ಮತಗಳ ಮೇಲೆ ಕಣ್ಣಿಟ್ಟಿದೆಯಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಇದೀಗ ಉದ್ಭವಿಸಿದೆ.
Advertisement
Advertisement
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ ಪೂಜಾರಿ ಕಾಲಿಗೆ ಬಿದ್ದರು. ಇನ್ನು ರಾಹುಲ್ ಗಾಂಧಿ ಕೂಡ ಕಾರ್ಯಕ್ರಮ ಮುಗಿಯೋವರೆಗೂ ಪೂಜಾರಿ ಜೊತೆಗಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ
Advertisement
ಸರಣಿ ಟೀಕೆಗಳ ಪರಿಣಾಮವಾಗಿ ಪಕ್ಷದ ಚಟುವಟಿಕೆಗಳಿಂದಲೇ ಹಿರಿಯ ನಾಯಕ ಜನಾರ್ದನ ಪೂಜಾರಿಯನ್ನು ಕಾಂಗ್ರೆಸ್ ನಾಯಕರು ದೂರ ಇರಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಪ್ರೆಸ್‍ಮೀಟ್‍ಗೆ ಬಳಸಿಕೊಳ್ಳಲು ಸಹ ಅವಕಾಶ ನೀಡಿರಲಿಲ್ಲ. ಆದ್ರೆ ಈಗ ಚುನಾವಣೆ ಬಂದ ಕಾರಣ ಕಾಂಗ್ರೆಸ್ ನಾಯಕರು ಪೂಜಾರಿಗೆ ಎಲ್ಲಿಲ್ಲದ ಗೌರವ ನೀಡಿದ್ದು ವಿಶೇಷವಾಗಿತ್ತು.
Advertisement
Congress President @RahulGandhi launches the #NavaKarnatakaManifesto in Mangaluru. #JanaAashirwadaYatre pic.twitter.com/wNyer0OxKZ
— Congress (@INCIndia) April 27, 2018