– ಮಹಿಳಾ ಆಕಾಂಕ್ಷಿತರ ಮೇಲೆ ದೌರ್ಜನ್ಯ
ತುಮಕೂರು: ವಿಧಾನಸಭೆ ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ತುಮಕೂರು ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರಲ್ಲಿ ಈಗ ಜಟಾಪಟಿ ಶುರುವಾಗಿದೆ. ತುರುವೇಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗೀತಾ ರಾಜಣ್ಣ ಅವರ ಮೇಲೆ ವಸಂತಕುಮಾರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಕಳೆದ ಗುರುವಾರ ನಡೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ವಸಂತಕುಮಾರ್ ಬೆಂಬಲಿಗರು ಹಲ್ಲೆ ನಡೆಸಿದ ವಿಡಿಯೋ ಈಗ ಬಹಿರಂಗವಾಗಿದೆ. ತಾಲೂಕು ಯೂತ್ ಕಾಂಗ್ರೆಸ್ ಚುನಾಚಣೆಯಲ್ಲಿ ಗೀತಾ ರಾಜಣ್ಣ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ ವಸಂತಕುಮಾರ್ ಬೆಂಬಲಿಗರು ಗೀತಾ ರಾಜಣ್ಣರ ಮೇಲೆ ಹಲ್ಲೆ ನಡೆಸಿದ್ದಾರೆ.
ಹತ್ತಾರು ಯುವಕರ ಗುಂಪಿನ ದಾಳಿಯಿಂದಾಗಿ ಗೀತಾ ಅಲ್ಲೇ ಕುಸಿದುಬಿದ್ದಿದ್ದಾರೆ. ಬಳಿಕ ಅಲ್ಲಿದ್ದ ಇತರೆ ಕಾರ್ಯಕರ್ತರು ನೀರು ಕೊಟ್ಟು ಸಮಾಧಾನ ಮಾಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ವಿಧಾನ ಪರಿಷತ್ ಸದಸ್ಯ ಲಕ್ಷ್ಮೀ ನಾರಾಯಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದ ಸಮಾರಂಭದಲ್ಲಿ ಓರ್ವ ಮಹಿಳಾ ಆಕಾಂಕ್ಷಿತರ ಮೇಲೆ ದೌರ್ಜನ್ಯ ನಡೆದಿದೆ.
https://youtu.be/UTZVn2T7ZfE