ಮೈಸೂರು: ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ದೋಸ್ತಿ ಪಕ್ಷದಲ್ಲಿನ ಮುನಿಸು ಮತ್ತೊಮ್ಮೆ ಎದ್ದು ಕಾಣಿಸಿದ್ದು, ಮೈಸೂರು-ಚಾಮರಾಜನಗರದ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ಸಮಾರಂಭಕ್ಕೆ ಬಂದಿರಲಿಲ್ಲ. ಇದೀಗ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಾಂಗ್ರೆಸ್ ಸಚಿವರು ಗೈರುಹಾಜರಾಗಿದ್ದಾರೆ.
ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾದ ಪ್ರಮುಖ ಆಕರ್ಷಣೆಯಾಗಿವೆ. ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ. ಅರಮನೆಯ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಜೆಡಿಎಸ್ ಸಚಿವರುಗಳು ಹಾಗೂ ಬಿಜೆಪಿ ಶಾಸಕರಷ್ಟೇ ಭಾಗಿಯಾಗಿದ್ದಾರೆ. ದಸರಾ ಉದ್ಘಾನೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ವರೆಗೂ ಕಾಂಗ್ರೆಸ್ ಸಚಿವರು ಗೈರಾಗಿದ್ದಾರೆ. ಇದನ್ನು ಓದಿ: ದಸರಾ ಉದ್ಘಾಟನಾ ಸಮಾರಂಭದಲ್ಲೂ ದೋಸ್ತಿ ಪಕ್ಷದ ಮುನಿಸು ಬಹಿರಂಗ!
Advertisement
Advertisement
ಸಚಿವೆ ಜಯಮಾಲ ಹೊರತು ಪಡಿಸಿ ಇನ್ನುಳಿದ ಕಾಂಗ್ರೆಸ್ ಸಚಿವರು ದಸರಾದಿಂದ ದೂರ ಉಳಿದಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಹಾಗೂ ದಸರಾ ಉದ್ಘಾಟಕಿ ಸುಧಾಮೂರ್ತಿ ಉಪಸ್ಥಿತರು ಹಾಜರಾಗಿದ್ದರು. ಸಿಎಂ ಜೊತೆಗೆ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎನ್.ಮಹೇಶ್, ಜಯಮಾಲ, ಶಾಸಕರಾದ ಅಶ್ವಿನ್, ರಾಮದಾಸ್, ಹರ್ಷವರ್ಧನ್, ಮಹದೇವ್, ಕೆ.ಟಿ.ಶ್ರೀಕಂಠೇಗೌಡ ಸಾಥ್ ನೀಡಿದರು.
Advertisement
ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲೂ ಜೆಡಿಎಸ್ ಸಚಿವರು, ಶಾಸಕರ ಓಡಾಟ ಜೋರಾಗಿತ್ತು. ಆದರೆ ಕಾಂಗ್ರೆಸ್ಸಿನ ಕೆಲ ನಾಯಕರು ಮುನಿಸಿಕೊಂಡಿದ್ದು, ಯಾರೊಬ್ಬರೂ ದಸರಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಯಮಾಲ ಅವರನ್ನು ಹೊರತು ಪಡಿಸಿ ಯಾವೊಬ್ಬ ಕೈ ನಾಯಕ ವೇದಿಕೆಯಲ್ಲಿ ಕಾಣಿಸಿಲ್ಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv