ಬೆಳಗಾವಿ: ಸಿಎಂ (CM) ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ಕೊಟ್ಟಿದಕ್ಕೆ ಖುಷಿ ಪಡೋರು ಕಾಂಗ್ರೆಸ್ (Congress) ನಾಯಕರೇ ಎಂದು ಸಂಸದ ಜಗದೀಶ್ ಶೆಟ್ಟರ್ (Jagadeesh Shettar) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ (Belagavi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶ (Bangladesh) ಮಾದರಿಯಲ್ಲಿ ರಾಜಭವನದ ದಾಳಿ ಬಗ್ಗೆ ಐವಾನ್ ಡಿಸೋಜಾ (Ivan Dsouza) ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮನಸ್ಥಿತಿ ಮತ್ತು ಸಂಸ್ಕ್ರತಿ ಯಾವ ರೀತಿ ಇದೆ ಅನ್ನೋದಕ್ಕೆ ಐವಾನ ಡಿಸೋಜಾ ಹೇಳಿಕೆಯೇ ಸಾಕ್ಷಿ ಎಂದಿದ್ದಾರೆ.ಇದನ್ನೂ ಓದಿ: ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇಫ್
ಕಾಂಗ್ರೆಸ್ ಪಕ್ಷದವರು ಎಲ್ಲದಕ್ಕೂ ತಯಾರಿದ್ದಾರೆ. ಅದಕ್ಕಾಗಿಯೇ ತಪ್ಪು ಮಾಡಿದ್ದಾರೆ. ಆದ ಕಾರಣ ಇಂದು ಅಪರಾಧಿ ಸ್ಥಾನದಲ್ಲಿದ್ದಾರೆ. ಕೋರ್ಟು, ಕಚೇರಿ ಮೇಲೆ ನಿಮಗೆ ನಂಬಿಕೆ ಇದೆಯೋ ಇಲ್ವೋ ಆದರಿಂದ ಅವರು ಇದನ್ನೆಲ್ಲಾ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಎಲ್ಲ ರೀತಿಯಲ್ಲೂ ದಂಗೆ ಮಾಡಲು ಕಾಂಗ್ರೆಸ್‌ನವರು ತಯಾರಿದ್ದಾರೆ. ಬಾಂಗ್ಲಾದ ಬಗ್ಗೆ ಮಾತನಾಡೋದು ತಪ್ಪು, ಅಲ್ಲಿ ಆಗಿರೋದು ತಪ್ಪು. ಆದರೆ ಇದೇ ರೀತಿ ಮಾಡಿದ್ರೆ ಜನರೆ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌ನವರು ಮನೆಗೆ ಓಡಿ ಹೋಗುವ ಪರಿಸ್ಥಿತಿ ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಮುಡಾ (MUDA) ಕೇಸ್‌ನ ಎಲ್ಲಾ ಫೈಲ್ ನೋಡಿದ್ದೇನೆ. ಕೃಷಿ ಭೂಮಿ ಎಂದು ತೋರಿಸಿದ್ದಾರೆ. ಖರೀದಿಸಿದ ಹಾಗೇ ಭೂಮಿಯನ್ನು ೫೦:೫೦ ಅನುಪಾತದಲ್ಲಿ ಹಂಚಿಕೆ ಮಾಡಬೇಕಿತ್ತು. ಕಾನೂನು ಉಲ್ಲಂಘನೆ ಮಾಡಿ ಬೇರೆ ಕಡೆ ೧೪ ಜಾಗ ತೆಗೆದುಕೊಂಡಿದ್ದಾರೆ. ಚುನಾವಣೆ ಅಫಿಡವಿಟ್‌ನಲ್ಲಿ ಕಡಿಮೆ ಹಣ ತೋರಿಸಿದ್ದಾರೆ. ಮುಡಾ ಅಧಿಕಾರಿಗಳು ರಾಜ್ಯ ಸರ್ಕಾರ ಅನುಮತಿ ಇಲ್ಲದೇ ತಾವೇ ಹಂಚಿಕೆ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ತಪ್ಪು ಮಾಡಿರುವುದು ಹೌದು. ಮುಂದೆ ಅವರಿಗೆ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ ಎಂದು ಕಿಡಿಕಾರಿದ್ದಾರೆ.
ನಿರಾಣಿ, ಜೊಲ್ಲೆ ಯಾವುದೇ ಅಧಿಕಾರದಲ್ಲಿ ಇಲ್ಲ. ಈಗ ಹೆಚ್.ಡಿ ಕುಮಾರಸ್ವಾಮಿ (H.D.Kumarswami) ಕೇಂದ್ರ ಸಚಿವರಾಗಿದ್ದಾರೆ. ವಿಧಾನಸಭೆಯಲ್ಲಿ ಅಂದಿನ ವಿರೋಧ ಪಕ್ಷದ ನಾಯಕರು ಯಾಕೆ ಮಾತನಾಡಲಿಲ್ಲ? ಆಗ ಬಿಜೆಪಿ (BJP) ಸರ್ಕಾರದ ಸಚಿವರು ಏನಾದ್ರು ಅನುಮತಿ ಕೊಟ್ಟಿದ್ದರೆ, ಅದು ಕಾನೂನು ಬಾಹಿರ ಆಗುತ್ತಿತ್ತು ಎಂದು ಶೆಟ್ಟರ್ ಹೇಳಿದ್ದಾರೆ.ಇದನ್ನೂ ಓದಿ: ನೈತಿಕತೆ ಇದ್ದರೆ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ಕೊಡಲಿ: ಎಸ್.ಆರ್.ಹಿರೇಮಠ್
ನಾವು ಸಿದ್ದರಾಮಯ್ಯನವರ ಹಿಂದೆ ಇದ್ದೇವೆ, ಅವರ ಹೋರಾಟಕ್ಕೆ ಬೆಂಬಲಸುತ್ತೇವೆ ಎನ್ನುವವರು ಒಳಗೊಳಗೆ ಖುಷಿ ಪಡುತ್ತಾರೆ. ಅವರೆಲ್ಲಾ ಕಾಂಗ್ರೆಸ್ ನಾಯಕರೇ. ಅದರ ಪರಿಣಾಮ ಏನು ಅಂತಾ ಸ್ವಲ್ಪದರಲ್ಲೇ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಕ್ಕಪಕ್ಕದಲ್ಲಿರುವವರೇ ದಾಖಲೆ ಬಿಡುಗಡೆ ಮಾಡಿದ್ರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಕೊಟ್ಟಿದ್ದಾರೋ, ಬಿಟ್ಟಿದ್ದಾರೋ ಅನ್ನೋದನ್ನು ನಾನು ಯಾಕೆ ಹೇಳಬೇಕು? ಅದು ಈಗ ಹೊರಗಡೆಗೆ ಬಂದಿದೆ, ಖುಷಿ ಪಡೋರು ಜಾಸ್ತಿ ಇದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.