– ಶುಗರ್ ಪೇಶೆಂಟ್, ನಮನ್ನು ಬಿಟ್ಬಿಡಿ
– ಹೆಣ್ಣು ಮಕ್ಕಳು, ವಯಸ್ಸಾದವರೂ ಇದ್ದಾರೆ ಬಿಟ್ಬಿಡಿ
ಬೆಂಗಳೂರು: ಮೈತ್ರಿ ಸರ್ಕಾರ ಸದನದಲ್ಲಿ ಮಂಡಿಸಿದ್ದ ವಿಶ್ವಾಸ ಮತಯಾಚನೆ ಹಲವು ಹೈಡ್ರಾಮಾಗಳ ನಡುವೆ ಮೈತ್ರಿ ಪಕ್ಷದ ಶಾಸಕರು ಸದನವನ್ನು ಮಂಗಳವಾರಕ್ಕೆ ಮುಂದೂಡಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಒಪ್ಪದ ಸಂದರ್ಭದಲ್ಲಿ ಸದನದಲ್ಲಿ ಗದ್ದಲ ಮೂಡಿಸುವ ಪ್ರಯತ್ನ ನಡೆಸಿದರು.
ದೋಸ್ತಿ ನಾಯಕರು ಇಂದು ಕೂಡ ಕಲಾಪದಲ್ಲಿ ವಿಶ್ವಾಸಮತಯಾಚನೆ ಮಾಡಲು ಅಸಮ್ಮತಿ ಸೂಚಿಸಿದರು. ಚರ್ಚೆ ನಡೆಸಬೇಕು ಎಂದು ಸಮಯಾವಕಾಶ ಪಡೆದ ನಾಯಕರೇ ಅಂತಿಮವಾಗಿ ಸ್ಪೀಕರ್ ಎಷ್ಟೇ ಮನವಿ ಮಾಡಿದರು ಚರ್ಚೆಗೆ ಸಹಕಾರ ನೀಡದೆ ಗದ್ದಲಕ್ಕೆ ಕಾರಣರಾದರು.
Advertisement
Advertisement
ಸಂಜೆ 6.20ರ ಸಮಯದಲ್ಲಿ 10 ನಿಮಿಷಗಳ ಕಾಲ ಮುಂದೂಡಿದ ಕಲಾಪ 8.30ರ ವೇಳೆಗೆ ಆರಂಭವಾಗಿತ್ತು. ಆ ಬಳಿಕ ದೋಸ್ತಿ ನಾಯಕರು ಕಲಾಪ ಮುಂದೂಡಿಕೆಗೆ ಸದನದಲ್ಲಿ ಘೋಷಣೆ ಕೂಗಿದರು. ಇಷ್ಟಾದರು ತಾವು ಸದನ ನಡೆಸಿಯೇ ಸಿದ್ಧ ಎಂದು ಹೇಳಿದ್ದ ಸ್ಪೀಕರ್ ಸದನ ಮುಂದುವರಿಸಿದರು. ಆದರೆ ಚರ್ಚೆಗೆ ಒಪ್ಪಿಗೆ ನೀಡಿದ ದೋಸ್ತಿ ಶಾಸಕರು, ಸದನದಲ್ಲಿ ಮಹಿಳಾ ಶಾಸಕಿಯರು, ಡಯಾಬಿಟಿಸ್ ಇರುವ ಶಾಸಕರು ಇದ್ದಾರೆ. ಅವರ ದೃಷ್ಠಿಯಿಂದ ಆದರೂ ಸದನ ಮುಂದೂಡಿ ಎಂದು ಗದ್ದಲ ಮೂಡಿಸಿದರು.
Advertisement
ದೋಸ್ತಿ ಶಾಸಕರ ನಡೆಗೆ ಒಪ್ಪಿಗೆ ಸೂಚಿಸಿದ ಬಿಎಸ್ ಯಡಿಯೂರಪ್ಪ ಅವರು, ಇಲ್ಲೇ ಊಟದ ವ್ಯವಸ್ಥೆ ಮಾಡಿ, ರಾತ್ರಿ 1 ಗಂಟೆಯಾದ್ರೂ ಕೂರುತ್ತೇವೆ ಎಂದರು ಸ್ಪೀಕರ್‍ಗೆ ಮನವಿ ಮಾಡಿದರು. ಮುಂದುವರೆದು ಊಟ ಇಲ್ಲದಿದ್ದರು ಪರವಾಗಿಲ್ಲ ಮತಕ್ಕೆ ಹಾಕಿ ಎಂದು ಮತ್ತೊಮ್ಮೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸ್ಪೀಕರ್ ಅವರು ನಾನು ಮಾನಸಿಕವಾಗಿ ಸಿದ್ಧನಿದ್ದೇನೆ ಎಂದು ಒಪ್ಪಿಗೆ ಸೂಚಿಸಿದರು.
Advertisement
ರೇವಣ್ಣ, ಅನಿತಾ ಕುಮಾರಸ್ವಾಮಿ ಹೊರಟರು ಬಹುತೇಕ ಮೈತ್ರಿ ಸರ್ಕಾರ ಶಾಸಕರು ಹೊರಟಿದ್ದಾರೆ. ಶುಗರ್ ನಿಂದ ಬಳಲುತ್ತಿದ್ದ ಶಾಸಕರು ಇದ್ದಾರೆ, ಹೊಟ್ಟೆ ಹಸಿವಾಗುತ್ತಿದೆ ಬಿಟ್ಟು ಬಿಡಿ. ಇನ್ನು 2 ದಿನಗಳು ಮುಂದೂಡಿದರು ಏನೂ ಆಗಲ್ಲ. ಲೋಕಸಭೆಯಲ್ಲಿ ವಿಶ್ವಾಸ ಮತ್ತಕ್ಕೆ 11 ದಿನಗಳು ತೆಗೆದುಕೊಂಡಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡರು ಮನವಿ ಮಾಡಿದರು. ಇತ್ತ ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಹಲವು ನಾಯಕರು ಶಾಸಕರು ಮತ್ತಷ್ಟು ಚರ್ಚೆ ನಡೆಸಬೇಕಿದೆ ಎಂದು ಸದನ ಮುಂದೂಡಲು ಮನವಿ ಮಾಡಿದರು. ಆದರೆ ತಾವು ಇಂದೇ ವಿಶ್ವಾಸ ನಡೆಸಲು ಮಾತು ಕೊಟ್ಟ ಕಾರಣದಿಂದ ವಚನ ಭ್ರಷ್ಟರಾಗುತ್ತೇವೆ ಎಂಬ ಕಾರಣದಿಂದ ಸದನ ಮುಂದೂಡುವ ದೋಸ್ತಿ ಶಾಸಕರ ಮನವಿ ಒಪ್ಪಿಗೆ ಸೂಚಿಸಲಿಲ್ಲ.