ನವದೆಹಲಿ: ದ್ರೌಪದಿ ಮುರ್ಮು ಅವರಂಥಹ ರಾಷ್ಟ್ರಪತಿಯನ್ನು ಯಾವ ದೇಶವೂ ಹೊಂದಬಾರದು. ಚಮಚಾಗಿರಿಗೂ ಒಂದು ಮಿತಿ ಇದೆ ಎಂದು ಕಾಂಗ್ರೆಸ್ ನಾಯಕ, ಲೋಕಸಭಾ ಮಾಜಿ ಸಂಸದ ಡಾ. ಉದಿತ್ ರಾಜ್ ಟೀಕಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಬಗ್ಗೆ ಕಾಂಗ್ರೆಸ್ (Congress) ನಾಯಕರ ಅವಹೇಳನ ಮುಂದುವರಿದಿದೆ. ಕಾಂಗ್ರೆಸ್ ನಾಯಕ, ಲೋಕಸಭಾ ಮಾಜಿ ಸಂಸದ ಡಾ. ಉದಿತ್ ರಾಜ್ (Udit Raj) ಟ್ವೀಟ್ ಮಾಡಿ ರಾಷ್ಟ್ರಪತಿ ಮುರ್ಮುಗೆ ಚಮಚಾಗಿರಿ ಎಂದು ಹೇಳಿದ್ದಾರೆ.
Advertisement
My statement as regard to Draupadi Murmuji is mine & nothing to do with Congress. pic.twitter.com/bL0QhuD21B
— Dr. Udit Raj (@Dr_Uditraj) October 6, 2022
Advertisement
ಟ್ವೀಟ್‍ನಲ್ಲಿ ಏನಿದೆ?: ದ್ರೌಪದಿ ಮುರ್ಮು ಅವರಂಥಹ ರಾಷ್ಟ್ರಪತಿಯನ್ನು ಯಾವ ದೇಶವೂ ಹೊಂದಬಾರದು. ಚಮಚಾಗಿರಿಗೂ ಒಂದು ಮಿತಿ ಇದೆ. ಶೇ.70ರಷ್ಟು ಜನ ಗುಜರಾತ್‍ನಿಂದ ತಯಾರಾಗುವ ಉಪ್ಪನ್ನು ತಿಂತಾರೆ ಅನ್ನೋ ಮಾತಿದೆ. ಹಾಗಂತ, ಉಪ್ಪನ್ನೇ ತಿಂದು ಬದುಕೋಕೆ ಆಗುತ್ತಾ..? ಅಂತ ಟೀಕಿಸಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ದಲಿತರ ವಿರೋಧಿ, ದ್ವೇಷ ಹಬ್ಬಿಸುವ ಸರ್ಕಾರ: ರಾಹುಲ್ ಗಾಂಧಿ
Advertisement
Advertisement
ಇದಕ್ಕೆ ಬಿಜೆಪಿಗರು (BJP) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆ ಆಘಾತಕಾರಿ, ದುರಾದೃಷ್ಟ ಅಂತ ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಕಿಡಿಕಾರಿದರು. ಅಧೀರ್ ರಂಜನ್ ಚೌಧರಿ ಕೂಡ ರಾಷ್ಟ್ರಪತ್ನಿ ಅಂತ ಟೀಕಿಸಿದ್ದರು. ಇದು ಕಾಂಗ್ರೆಸಿಗರ ಬುಡಕಟ್ಟು ಜನರ ವಿರೋಧಿಗಳ ಮನಸ್ಥಿತಿ ತೋರುತ್ತದೆ ಅಂತ ಸಂಬೀತ್ ವಾಗ್ದಾಳಿ ನಡೆಸಿದ್ದರು.
ತಕ್ಷಣವೇ ಕ್ಷಮೆಯಾಚಿಸಬೇಕು ಅಂತ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಉದಿತ್ ರಾಜ್‍ಗೆ ನೊಟೀಸ್ ಕಳಿಸಿದೆ. ಟೀಕೆಗಳು ಹೆಚ್ಚಾದ ಬೆನ್ನಲ್ಲೇ ಇವತ್ತು ಮತ್ತೆ ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿರುವ ಉದಿತ್ ರಾಜ್, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಮುರ್ಮು ಅವರು ಆದಿವಾಸಿ ಹೆಸರಿನಲ್ಲಿ ಬಂದಿದ್ದಾರೆ. ಆದರೆ, ಅವರು ದೀರ್ಘಕಾಲ ಆದಿವಾಸಿಯಾಗಿ ಉಳಿಯಲ್ಲ. ಎಸ್‍ಸಿ/ ಎಸ್‍ಟಿಗಳು ಉನ್ನತ ಸ್ಥಾನಮಾನ ಅಲಂಕರಿಸಿದ ಬಳಿಕ ತಮ್ಮ ಸಮುದಾಯದ ಬಗ್ಗೆ ಕಿವುಡರು, ಮೂಗರಾಗಿರುತ್ತಾರೆ. ಈ ಬಗ್ಗೆ ನನ್ನ ಹೃದಯ ಹಿಂಡುತ್ತದೆ ಅಂತ ಉದಿತ್ ರಾಜ್ ಸಮಜಾಯಿಷಿ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ದಲಿತರ ವಿರೋಧಿ, ದ್ವೇಷ ಹಬ್ಬಿಸುವ ಸರ್ಕಾರ: ರಾಹುಲ್ ಗಾಂಧಿ