ನವದೆಹಲಿ: ನಾಲ್ವರು ಮುಖ್ಯಮಂತ್ರಿಗಳು (Chief Ministers) ಓಡಾಡಿದ ಕಾರನ್ನು ಅತಿ ಹೆಚ್ಚು ಬಿಡ್ ಮಾಡಿ ಕಾಂಗ್ರೆಸ್ ನಾಯಕ (Congress Leader) ಟಿ.ಆರ್ ರಾಮಪ್ಪ ಅವರು ಖರೀದಿಸಿದ್ದಾರೆ.
ಕರ್ನಾಟಕ ಭವನದಲ್ಲಿ ಅವಧಿ ಮುಕ್ತಾಯಕ್ಕೆ ಬಂದಿದ್ದ ಕಾರ್‌ಗಳನ್ನು ಹರಾಜು ಮಾಡಲಾಗುತ್ತಿತ್ತು. ಈ ಹರಾಜಿನಲ್ಲಿದ್ದ ಹೊಂಡಾ ಸಿಆರ್‌ವಿ ಕಾರ್ (Honda CRV Car) ಅನ್ನು 2.10 ಲಕ್ಷ ರೂ.ಗಳಿಗೆ ಬಿಡ್ ಮಾಡಿ ಖರೀದಿ ಮಾಡಿದ್ದಾರೆ. ಇದನ್ನೂ ಓದಿ: ಜನರಿಗೆ ಮತ್ತೆ ದರ ಏರಿಕೆಯ ಬರೆ – ಬೆಂಗಳೂರಿನಲ್ಲಿ ಕಾಫಿ, ಟೀ ಬೆಲೆ ಏರಿಕೆ
- Advertisement
2010ರ ಹೊಂಡಾ ಜಿಆರ್‌ವಿ ಕಾರನ್ನು ಕರ್ನಾಟಕ ಭವನದಲ್ಲಿ ಕರ್ತವ್ಯಕ್ಕೆ ನಿಯೋಜಿಸಿತ್ತು, ಈ ಕಾರ್ ನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಡಿ.ವಿ ಸದಾನಂದಗೌಡ, ಜಗದೀಶ್ ಶೆಟ್ಟರ್, ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾದ ಅವಧಿಯಲ್ಲಿ ಸಂಚರಿಸಿದ್ದರು. ಇದನ್ನೂ ಓದಿ: ಪ್ರಸಿದ್ಧ ವಿದೇಶಿ ವೈದ್ಯರಂತೆ ನಟಿಸಿ ಹಾರ್ಟ್ ಆಪರೇಷನ್ – ನಕಲಿ ವೈದ್ಯನ ಹುಚ್ಚಾಟಕ್ಕೆ 7 ಜನ ಬಲಿ
- Advertisement
ಈ ಕಾರ್ ಅವಧಿ ಮುಕ್ತಾಯಗೊಂಡ ಹಿನ್ನಲೆ ಅದನ್ನು ಸಾರ್ವಜನಿಕ ಹರಾಜು ಪ್ರಕ್ರಿಯೆಗೆ ಇಡಲಾಗಿತ್ತು. ಸರ್ಕಾರಿ ಮೌಲ್ಯ 1.35 ಲಕ್ಷ ರೂ. ನಿಗಧಿ ಪಡಿಸಲಾಗಿತ್ತು. 2 ಲಕ್ಷ ರೂ.ವರೆಗಿನ ಕಾರಿಗೆ ಬಿರುಸಿನ ಬಿಡ್ಡಿಂಗ್ ನಡೆಯಿತು. ಎರಡು ಲಕ್ಷದ ಬಳಿಕ 2.10 ಲಕ್ಷ ರೂ.ಗೆ ನೇರವಾಗಿ ಬಿಡ್ ಮಾಡುವ ಮೂಲಕ ಕಾರ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟಿ.ಆರ್ ರಾಮಪ್ಪ ಅವರು ಕೋಲಾರ ಮೂಲದವರು, ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಅವರು ಹಲವು ಸಚಿವರಿಗೆ ಅತ್ಯಾಪ್ತರಾಗಿದ್ದಾರೆ. ನಾಲ್ವರು ಮುಖ್ಯಮಂತ್ರಿಗಳ ಓಡಾಡಿದ್ದು ಇದು ಅದೃಷ್ಟದ ಕಾರ್ ಹೀಗಾಗಿ ಖರೀದಿ ಮಾಡಿದ್ದೇನೆ ಎಂದು ಟಿ.ಆರ್ ರಾಮಪ್ಪ ಅವರು ಹೇಳಿದರು. ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ವರ್ಮಾ ಪ್ರಮಾಣ ವಚನ ಸ್ವೀಕಾರ