ನಮ್ಮ ಅಂತಿಮ ಗುರಿ 2024ರ ಲೋಕಸಭಾ ಚುನಾವಣೆ- ವಿರೋಧ ಪಕ್ಷಗಳಿಗೆ ಸೋನಿಯಾ ಕರೆ

Public TV
3 Min Read
sonia gandhi

ನವದೆಹಲಿ: ನಮ್ಮೆಲ್ಲರ ಅಂತಿಮ ಗುರಿ 2024ರ ಲೋಕಸಭಾ ಚುನಾವಣೆ ಆಗಿರಬೇಕು ಎಂದು ವಿರೋಧ ಪಕ್ಷಗಳಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.

ಈ ಕುರಿತು ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ವಿರೋಧ ಪಕ್ಷಗಳಿಗೆ ಕರೆ ನೀಡಿದ್ದಾರೆ. ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶರತ್ ಪವಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ವೇಳೆ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಸಂಸತ್‍ನಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ನನಗೆ ವಿಶ್ವಾಸವಿದೆ. ಇದರ ಹೊರತಾಗಿಯೂ ದೊಡ್ಡ ಮಟ್ಟದ ರಾಜಕೀಯ ಯುದ್ಧವನ್ನು ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

ನಮ್ಮ ಅಂತಿಮ ಗುರಿ 2024ರ ಲೋಕಸಭಾ ಚುನಾವಣೆ, ಈ ಕುರಿತು ವ್ಯವಸ್ಥಿತವಾಗಿ ಯೋಜನೆ ರೂಪಿಸುವುದನ್ನು ಪ್ರಾರಂಭಿಸಬೇಕಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಚಳುವಳಿಯ ಮೌಲ್ಯಗಳು ಮತ್ತು ಸಂವಿಧಾನದ ತತ್ವ, ನಿಬಂಧನೆಗಳನ್ನು ನಂಬುವ ಸರ್ಕಾರವನ್ನು ನೀಡುವ ಉದ್ದೇಶದಿಂದ ಯೋಜನೆ ರೂಪಿಸಬೇಕು ಎಂದು ಹೇಳಿದ್ದಾರೆ.

ಸಭೆಯ ಬಳಿಕ ಪ್ರತಿಪಕ್ಷಗಳು ಹೇಳಿಕೆ ಬಿಡುಗಡೆ ಮಾಡಿದ್ದು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು. ಜಮ್ಮು ಕಾಶ್ಮೀರದಲ್ಲಿನ ಎಲ್ಲ ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಬೇಕು. ಕೇಂದ್ರ ಸೇವೆಗಳ ಜಮ್ಮು ಕಾಶ್ಮೀರ ಕೇಡರ್ ಸೇರಿದಂತೆ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಬೇಕು. ಆದಷ್ಟು ಬೇಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಕರೆ ನಿಡಿವೆ.

ಮುಂಗಾರು ಅಧಿವೇಶನದ ಕುರಿತು ಹೇಳಿಕೆ ನೀಡಿರುವ ವಿರೋಧ ಪಕ್ಷಗಳು, ಪೆಗಾಸಸ್ ಹಾಗೂ ಕೃಷಿ ಕಾನೂನುಗಳ ಕುರಿತು ಗಲಾಟೆ ಎಬ್ಬಿಸಲಾಗಿತ್ತು. ಮಹಿಳಾ ಸಂಸದೆಯರು ಸೇರಿದಂತೆ ಸಂಸದರು ಮಾರ್ಷಲ್‍ಗಳಿಂದ ಗಾಯಗೊಂಡಿರುವ ಅಭೂತಪೂರ್ವ ದೃಶ್ಯಗಳಿಗೆ ಸಂಸತ್ತು ಸಾಕ್ಷಿಯಾಗಿತ್ತು. ಪ್ರತಿಪಕ್ಷಗಳು ನಿರ್ಣಾಯಕ ಸಮಸ್ಯೆಗಳನ್ನು ಎತ್ತುವ ಹಕ್ಕನ್ನು ನಿರಾಕರಿಸುವುದರ ಜೊತೆಗೆ ಸರ್ಕಾರವೂ ಅಡ್ಡಪಡಿಸುತ್ತಿತ್ತು ಎಂದು ಹೇಳಿವೆ.

ಸಭೆಯಲ್ಲಿ ಯಾರ್ಯಾರು ಭಾಗವಹಿಸಿದ್ದರು?
ಡಿಎಂಕೆಯ ಎಂ.ಕೆ.ಸ್ಟಾಲಿನ್, ಟಿಎಂಸಿಯ ಮಮತಾ ಬ್ಯಾನರ್ಜಿ, ಜೆಎಂಎಂನ ಹೇಮಂತ್ ಸೋರೆನ್, ಶಿವಸೇನೆಯ ಉದ್ಧವ್ ಠಾಕ್ರೆ, ಎನ್‍ಸಿಪಿಯ ಶರದ್ ಪವಾರ್, ಲೋಕತಾಂತ್ರಿಕ ಜನತಾದಳದ ಶರದ್ ಯಾದವ್, ಸಿಪಿಐ(ಎಂ)ನ ಸೀತಾರಾಮ್ ಯಚೂರಿ ಭಾಗವಹಿಸಿದ್ದರು. ಎಸ್‍ಪಿಯಿಂದ ಯಾರೂ ಭಾಗವಹಿಸಿರಲಿಲ್ಲ. ಒಟ್ಟು 19 ಪಕ್ಷಗಳ ಪ್ರತಿನಿಧಿಗಳು ಸೋನಿಯಾ ಗಾಂಧಿಯವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *