ನವದೆಹಲಿ: ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ರಾಮಾಯಣ ಮಹಾಕಾವ್ಯಕ್ಕೆ ಹಾಗೂ ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿಯನ್ನು (Rahul Gandhi) ಶ್ರೀರಾಮನಿಗೆ ಹೋಲಿಸಬಹುದು ಎಂದು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ (Salman Khurshid) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಉತ್ತರ ಭಾಗದಲ್ಲಿ ಚಳಿಯು ಅಧಿಕವಿದ್ದು, ಅದನ್ನು ತಾಳಲಾರದೇ ನಾವು ಜಾಕೆಟ್ ಅಥವಾ ಸ್ವೇಟರ್‌ಗಳನ್ನು ಬಳಸುತ್ತಿದ್ದೇವೆ. ಆದರೆ ರಾಹುಲ್ ಗಾಂಧಿ ಅವರು ಇಂತಹ ವಾತಾವರಣದಲ್ಲಿ ಕೇವಲ ಟೀಶರ್ಟ್ ಮೂಲಕ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ರಾಹುಲ್ ಗಾಂಧಿ ಅವರು ಅತಿಮಾನುಷ ಶಕ್ತಿಯುಳ್ಳ ವ್ಯಕ್ತಿ ಎಂಬುದು ತಿಳಿಯುತ್ತದೆ ಎಂದು ಹೇಳಿದರು.
Advertisement
Advertisement
ರಾಮನು ತೆರಳಲು ಸಾಧ್ಯವಾಗದಿರುವ ಪ್ರದೇಶಗಳಿಗೆ ಸಹೋದರ ಭರತ ಪಾದುಕೆಗಳನ್ನು ತೆಗೆದುಕೊಂಡು ಹೋಗಿ ಸಂಚಾರ ಮಾಡಿದಂತೆ ಕಾಂಗ್ರೆಸ್ ಪಕ್ಷ ಕೂಡ ಯಾತ್ರೆ ತೆರಳದಿರುವ ಪ್ರದೇಶಗಳಿಗೆ ಹೋಗಿ ಪ್ರಚಾರ ಮಾಡಲಾಗುವುದು. ಸದ್ಯ ರಾಹುಲ್ ಗಾಂಧಿ ಅವರು ತಪಸ್ಸಿನ ಕಡೆಗೆ ಗಮನಹರಿಸಿರುವ ಸಂತ ಎಂದು ಹೊಗಳಿದರು.
Advertisement
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೊರೊನಾ (Corona) ಮಾರ್ಗಸೂಚಿಯನ್ನು ಅನುಸರಿಸಬೇಕೆಂದು ರಾಹುಲ್ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿ, ಕೋವಿಡ್ ಬಗ್ಗೆ ಕಾಂಗ್ರೆಸ್‍ಗೆ ವಿಶೇಷ ಮಾರ್ಗಸೂಚಿ ಇರಲು ಸಾಧ್ಯವಿಲ್ಲ. ಸಾರ್ವತ್ರಿಕ ಮಾರ್ಗಸೂಚಿಗಳನ್ನು ನೀಡಿದಾಗ ಪಕ್ಷವು ನಿಯಮಗಳನ್ನು ಅನುಸರಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು
Advertisement
ಯಾವುದೇ ವೈಜ್ಞಾನಿಕ ಮಾರ್ಗಸೂಚಿಯನ್ನು ಈ ದೇಶಕ್ಕೆ ಅನ್ವಯಿಸಿದರೆ, ಅದು ನಮಗೂ ಅನ್ವಯಿಸುತ್ತದೆ. ಆದರೆ ಕೊರೊನಾ ಕಾಂಗ್ರೆಸ್‍ಗಷ್ಟೇ ಬರುತ್ತದೆ, ಬಿಜೆಪಿಗೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾರಾದರೂ ಮಾರ್ಗಸೂಚಿಯನ್ನು ಅನುಸರಿಸಿದರೆ, ನಾವು ಅನುಸರಿಸುತ್ತೇವೆ. ಆದರೆ ಇಂದು ಯಾವುದೇ ಮಾರ್ಗಸೂಚಿಯೂ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಯಾವುದೇ ಕಠಿಣ ಸಂದರ್ಭ ಎದುರಾದರೂ ಆರೋಗ್ಯ ಇಲಾಖೆ ಸನ್ನದ್ಧ: ಸುಧಾಕರ್