ಮೈಸೂರು: ನಾವು ಯಾವತ್ತೂ ಸುಳ್ಳು ಆಶ್ವಾಸನೆ ನೀಡುವುದಿಲ್ಲ. ನಮ್ಮ ಕೈಯಲ್ಲಿ ಆಗದೇ ಇದ್ದರೆ ಆಗಲ್ಲ ಅಂತಾ ನೇರವಾಗಿ ಹೇಳುತ್ತೇವೆ. ನಮ್ಮ ಕೈಯಲ್ಲಿ ಮಾಡುವ ಕೆಲಸ ಆಗಿದ್ದರೆ ಅದನ್ನು ಖಂಡಿತಾ ಮಾಡುತ್ತೇವೆ. ನಾವು ಯಾವತ್ತೂ ನಿಮಗೆ ಸುಳ್ಳು ಹೇಳುವುದಿಲ್ಲ. ಸುಳ್ಳು ಆಶ್ವಾಸನೆ ಕೊಡುವುದಿಲ್ಲ ಎಂದು ಕೈ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಉದ್ಘಾಟನೆ ಬಳಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಏಳಿಗೆಗೆ ಮಹಿಳೆಯರು ಮಾತ್ರ ಕಾರಣರು. ರಾಜ್ಯದ ಅಭಿವೃದ್ಧಿ ಆಗಿರೋದು ಮಹಿಳೆಯರಿಂದ. ಗೃಹಲಕ್ಷ್ಮಿ ಯೋಜನೆ ಅದು ಜನರ ಯೋಜನೆ. ಈ ಯೋಜನೆ ರೂಪಿಸಿರುವುದು ಯಾವುದೇ ಥಿಂಕ್ ಟ್ಯಾಂಕರ್ಸ್ ಗಳಲ್ಲ, ಬಂಡವಾಳಶಾಯಿಗಳಲ್ಲ. ನಿಮ್ಮಿಂದಲೇ ನಿಮಗಾಗಿ ರೂಪವಾದ ಯೋಜನೆ ಇದಾಗಿದೆ ಎಂದರು.
ಚುನಾವಣೆ ಮೊದಲು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ (Comgress Guarantee Card) ನೀಡಿತ್ತು. ಕಾಂಗ್ರೆಸ್ ನಾಯಕರು ಏನ್ ಹೇಳುತ್ತಾರೋ ಅದನ್ನು ಮಾಡುತ್ತಾರೆ. ನುಡಿದಂತೆ ಕಾಂಗ್ರೆಸ್ ನಾಯಕರು ನಡೆಯುತ್ತಾರೆ. ಪ್ರತಿ ತಿಂಗಳು ಇನ್ನು ಮುಂದೆ ಎಲ್ಲಾ ಮಹಿಳೆಯರ ಅಕೌಂಟ್‍ಗೆ 2 ಸಾವಿರ ಹಣ ಬರುತ್ತದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬಗ್ಗೆ ಹೇಳಿದ್ದೆವು. ಅದನ್ನು ಈಗ ಅನುಷ್ಠಾನ ಮಾಡಿದ್ದೇವೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆ (Annabhagya Scheme) ಅಡಿ ಪ್ರತಿ ಕಾರ್ಡ್‍ಗೂ 10 ಕೆ.ಜಿ ಅಕ್ಕಿ ಕೊಡುತ್ತಿದ್ದೇವೆ. 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಟ್ಟಿದ್ದೇವೆ. 5 ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳು ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಮಾಡಿದ್ದೇವೆ. ಗ್ಯಾರಂಟಿ ಜಾರಿಯ ಹಿಂದೆ ಅಳವಾದ ಮರ ಎಷ್ಟೆ ದೊಡ್ಡದು ಇದ್ದರೂ ಅದರ ಬೇರು ಗಟ್ಟಿ ಇರದೆ ಇದ್ದರೆ ಪ್ರಯೋಜನವಿಲ್ಲ. ಯಾವತ್ತಿಗೂ ಮರದ ಬುಡ ಗಟ್ಟಿಯಾಗಿರಬೇಕು. ಯಾವತ್ತಿಗೂ ಮನೆಯ ಬುನಾದಿ ಬಹಳ ಗಟ್ಟಿಯಾಗಿರಬೇಕು ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatre) ಬಹಳಷ್ಟು ಮಹಿಳೆಯರ ಜೊತೆ ಸಂವಾದ ಮಾಡಿದ್ದೇವೆ. ಆಗ ಮಹಿಳೆಯರು ಬೆಲೆ ಏರಿಕೆ ಬಿಸಿಯ ಬಗ್ಗೆ ನನಗೆ ಹೇಳಿದ್ದರು. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಬಿಸಿ ತಟ್ಟುವುದು ಮಹಿಳೆಯರಿಗೆ. ಈ ರಾಜ್ಯದ ಬುನಾದಿ ಮಹಿಳೆಯರು. ಮಹಿಳೆಯರು ಸದೃಢವಾಗದ ಹೊರತು ರಾಜ್ಯ ಸದೃಢವಾಗಲ್ಲ. ಮರದ ಬುಡ ಹೇಗೆ ಕಣ್ಣಿಗೆ ಕಾಣುವುದಿಲ್ಲವೋ ಅದೇ ರೀತಿ ನಾರಿ ಶಕ್ತಿಯೂ ಕಣ್ಣಿಗೆ ಕಾಣುವುದಿಲ್ಲ ಎಂದರು.
ಈ ರಾಜ್ಯದ ಬುನಾದಿ ಈ ರಾಜ್ಯದ ಮಹಿಳೆಯರು. ಇದು ಐತಿಹಾಸಿಕ ಸಮಾರಂಭ. ರಾಜ್ಯದ 12 ಸಾವಿರ ಕಡೆ ಈ ಕಾರ್ಯಕ್ರಮ ನಡೆಯತ್ತಿದೆ. ನುಡಿದಂತೆ ನಾವು ನಡೆದಿದ್ದೇವೆ. ಇವತ್ತು ರಕ್ಷಾ ಬಂಧನ. ಇಂತಹ ದಿನ ಮಹಿಳೆಯರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಕೇಂದ್ರ ಸರ್ಕಾರ ಕೋಟ್ಯಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಎರಡು-ಮೂರು ಸ್ನೇಹಿತರು ಇದ್ದಾರೆ ಅವರಿಗಾಗಿ ಮಾತ್ರ ಆ ಸರ್ಕಾರ ಇದೆ. ರಾಜ್ಯದ ನಮ್ಮ ಸರ್ಕಾರ ಬಡವರ ಪರ ಇದೆ. ಬಡವರು, ಹಿಂದುಳಿದವರ ಪರ ಸರ್ಕಾರ ಇದೆ. ಈಗ ಕರ್ನಾಟಕದ ಮಾದರಿ ದೇಶದ ಎಲ್ಲಡೆ ಕಾಣುತ್ತಿದೆ. ದೇಶಕ್ಕೆ ಒಂದು ಮಾರ್ಗವನ್ನು ಕರ್ನಾಟಕ ಸರ್ಕಾರ ನೀಡಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಈ ಗ್ಯಾರಂಟಿ ಕಾರ್ಡ್ ನೋಡಿದ ಮೇಲೆ ಇವುಗಳ ಜಾರಿ ಅಸಾಧ್ಯ ಅಂತಾ ಹೇಳಿತ್ತು. ಪ್ರಧಾನ ಮಂತ್ರಿಗಳೇ ಕಾಂಗ್ರೆಸ್ ಸುಳ್ಳು ಹೇಳುತ್ತಿರುವುದು ಅಂತಾ. ಇವತ್ತು ಕರ್ನಾಟಕದ ಜನರ ಮುಂದೆ ಸತ್ಯ ಕಾಣುತ್ತಿದೆ. ಭಾರತದ ದೇಶದಲ್ಲೆ ಅತ್ಯಂತ ದೊಡ್ಡ ಯೋಜನೆ ಇದು. ವಿಶ್ವದಲ್ಲೇ ಯಾವ ಪ್ರದೇಶದ ಸರ್ಕಾರವೂ ಮಹಿಳೆಯರಿಗೆ ಇಷ್ಟು ಪ್ರಮಾಣದ ಹಣ ನೀಡಿಲ್ಲ ಎಂದು ಹೇಳಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]