ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಮಾಜಿ ಪ್ರಧಾನಿ, ಅಜ್ಜಿ ಇಂದಿರಾ ಗಾಂಧಿ ಅವರ 102ನೇ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಕವಿತೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇಂದಿರಾ ಗಾಂಧಿ ಅವರ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ, ನಾನು ತಿಳಿದಿರುವ ಧೈರ್ಯಶಾಲಿ ಮಹಿಳೆಯ ನೆನಪಿಗಾಗಿ ಎಂಬ ಶೀರ್ಷಿಕೆ ಅಡಿ ಕವನ ಹಂಚಿಕೊಂಡಿದ್ದಾರೆ. ಈ ಮೂಲಕ ಇಂಗ್ಲೀಷ್ ಕವಿ ವಿಲಿಯಂ ಅರ್ನೆಸ್ಟ್ ಹೆನ್ಲಿ ಅವರ ಇನ್ವಿಕ್ಟಸ್ ಎಂಬ ಕವನದ ಮೂಲಕ ಪ್ರಿಯಾಂಕ ಅಜ್ಜಿಗೆ ನಮನ ಸಲ್ಲಿಸಿದ್ದಾರೆ.
Advertisement
In memory of the bravest woman I have known. #IndiraGandhi
“In the fell clutch of circumstance
I have not winced nor cried aloud.
Under the bludgeonings of chance
My head is bloody, but unbowed. pic.twitter.com/ifmXkighYo
— Priyanka Gandhi Vadra (@priyankagandhi) November 19, 2019
Advertisement
ಸನ್ನಿವೇಶದ ಕುಸಿತದಲ್ಲಿ ನಾನು ಗೆದ್ದಿಲ್ಲ ಅಥವಾ ಗಟ್ಟಿಯಾಗಿ ಅಳಲಿಲ್ಲ. ಅವಕಾಶದ ಹೊಡೆತಗಳ ಅಡಿ ನನ್ನ ತಲೆ ರಕ್ತಸಿಕ್ತವಾಗಿದೆ. ಆದರೆ ತಲೆ ಬಾಗುವುದಿಲ್ಲ ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿದ್ದಾರೆ.
Advertisement
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅನೇಕ ಮುಖಂಡರು ದಿವಂಗತ ನಾಯಕಿ ಇಂದಿರಾ ಗಾಂಧಿ ಅವರಿಗೆ ಇಂದು ಬೆಳಗ್ಗೆ ಗೌರವ ನಮನ ಸಲ್ಲಿಸಿದ್ದಾರೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಕಮಲಾ ನೆಹರೂ ದಂಪತಿ ನವೆಂಬರ್ 19, 1917ರಂದು ಇಂದಿರಾ ಗಾಂಧಿ ಜನ್ಮ ನೀಡಿದ್ದರು. ಇಂದಿರಾ ಗಾಂಧಿ ದೇಶ ಪ್ರಥಮ ಹಾಗೂ ಏಕೈಕ ಮಹಿಳಾ ಪ್ರಧಾನಿಯಾಗಿ ಜನವರಿ 1966ರಿಂದ ಮಾರ್ಚ್ 1977ರವರೆಗೆ ಆಡಳಿತ ನಡೆಸಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಪ್ರಧಾನಿ ಸ್ಥಾನ ತಪ್ಪಿಸಿಕೊಂಡಿದ್ದ ಇಂದಿರಾ ಗಾಂಧಿ 1980ರ ಜನವರಿಯಿಂದ ಮತ್ತೆ ಅಧಿಕಾರಕ್ಕೆ ಬಂದಿದ್ದರು. ಆದರೆ 1984ರ ಅಕ್ಟೋಬರ್ 31ರಂದು ಅವರ ಮೇಲೆ ಅಂಗ ರಕ್ಷಕರು ಗುಂಡಿನ ದಾಳಿ ನಡೆಸಿ, ಹತ್ಯೆಗೈದಿದ್ದರು.
Advertisement
Congress President Smt Sonia Gandhi pays her respects on the 102 birth anniversary of Indira Gandhi at Shakti Sthal. #IndiasIndira pic.twitter.com/oxq4rMPBiG
— Congress (@INCIndia) November 19, 2019