ಕಲಬುರಗಿ: ರಾಜ್ಯದಲ್ಲಿ 4 ಮಂದಿ ಕೊರೊನಾ ಸಚಿವರಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಲ್ಕು ಮಂದಿ ಕೊರೊನಾ ಸಚಿವರಿದ್ದಾರೆ. ಸುರೇಶ್ ಕುಮಾರ್ ಬರ್ತಾರೆ ನ್ಯೂಸ್ ಬುಲೆಟಿನ್ ಓದಿ ಹೇಳ್ತಾರೆ. ಹಾಗೆ ನೋಡಿದರೆ ಸುರೇಶ್ ಕುಮಾರ್ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಇಲ್ಲ ಎಂದು ಕಿಡಿಕಾರಿದರು.
Advertisement
Advertisement
ಪ್ರತಿ ಜಿಲ್ಲೆಗೆ ಲ್ಯಾಬ್ ತೆಗೆಯುವುದಾಗಿ ಹೇಳಿದರು. ಆದರೆ ಇಲ್ಲಿಯವರೆಗೆ ಸರ್ಕಾರ ಆ ಕೆಲಸ ಮಾಡಿಲ್ಲ. ಈ ಕೊರೊನಾ ಯುದ್ಧ ಗೆಲ್ಲಬೇಕು ಅಂದ್ರೆ ರಕ್ಷಕರಿಗೆ ರಕ್ಷಣೆಯಿಲ್ಲ. ಕ್ವಾಲಿಟಿ ಪ್ರಕಾರ ಪಿಪಿಇ ಕಿಟ್ ವಿತರರಣೆಯನ್ನು ನೀಡಿಲ್ಲ. ಕೊರೊನಾ ವಾರ್ಡಿನಲ್ಲಿ ಎಸಿ ಸಹ ಹಾಕಲು ಆಗಿಲ್ಲ. ಹೀಗಾಗಿ ಬೆವರು ಬಂದು ಚಿಕಿತ್ಸೆ ನೀಡಲು ನಮಗೆ ತೊಂದೆರೆಯಿದೆ. ಅಲ್ಲಿನ ರೋಗಿಗಳಿಗೂ ಸಹ ತೊಂದರೆಯಾಗುತ್ತಿದೆ. ಕೊರೊನಾ ವಾರ್ಡಿನಲ್ಲಿ ಸ್ಯಾನಿಟೈಸರ್ ಸಹ ನೀಡಿಲ್ಲ. ರೋಗಿಗಳಿಗೆ ನೀಡುವ ಆಹಾರ ಸಹ ಸರಿಯಾಗಿಲ್ಲ. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಇಎಸ್‍ಐ ಸಿಬ್ಬಂದಿ ದೂರು ನೀಡಿದ್ದಾರೆ ಎಂದರು.
Advertisement
Advertisement
ಕಲಬುರಗಿ ಇಎಸ್‍ಐಗೆ ಇಲ್ಲಿಯವರೆಗೆ ಒಂದು ರೂಪಾಯಿ ಬಂದಿಲ್ಲ. ಈ ಬಗ್ಗೆ ಸಂಸದ ಉಮೇಶ್ ಜಾಧವ್ ಕೇಂದ್ರಕ್ಕೆ ಕೇಳುತ್ತಿಲ್ಲ. ಹೀಗಾಗಿ ಜಾಧವ್ ಸುಮ್ಮನೆ ರಾಜೀನಾಮೆ ನೀಡಿ ಆಸ್ಪತ್ರೆ ತೆಗೆಯಲಿ ಎಂದು ಜಾಧವ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.