ರಾಯಚೂರು: ಮಾನ್ವಿಯ ಕಾಂಗ್ರೆಸ್ ಮುಖಂಡ (Congress Leader) ಪ್ರಸಾದ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರನ್ನು ಕೇಶವ, ರಾಮು ಹಾಗೂ ದೇವ ಎಂದು ಗುರುತಿಸಲಾಗಿದೆ.
ಅ.30ರ ಮುಂಜಾನೆ ರಬಣಕಲ್ ಕ್ಯಾಂಪ್ ಬಳಿ ಜಮೀನಿಗೆ ನೀರು ಕಟ್ಟಲು ತೆರಳಿದ್ದ ಪ್ರಸಾದ್‍ನನ್ನು ಆರೋಪಿಗಳು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದರು. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಪ್ರಸಾದ್‍ನನ್ನು ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಲ್ಲುಗಳನ್ನು ಕಟ್ಟಿಕೊಂಡು ಕೆರೆಗೆ ಹಾರಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ
ಕೊಲೆಯ ಬಳಿಕ ಆರೋಪಿಗಳ ಬಂಧನಕ್ಕೆ ಎಸ್‍ಪಿ ನಿಖಿಲ್.ಬಿ ಮಾರ್ಗದರ್ಶನದಲ್ಲಿ 3 ತಂಡಗಳನ್ನು ರಚನೆ ಮಾಡಲಾಗಿತ್ತು. ಮಾನ್ವಿ ಇನ್ಸ್‌ಪೆಕ್ಟರ್ ವೀರಭದ್ರಯ್ಯ ಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದೆ. ಇದೀಗ ಕೊಲೆ ನಡೆದ ಮೂರೇ ದಿನದಲ್ಲಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಐಬ್ರೋಸ್ ಮಾಡಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ