ಬೆಂಗಳೂರು: ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಅಲ್ಪಸಂಖ್ಯಾತರ ಮನವೊಲಿಕೆ ಪ್ರಯತ್ನವನ್ನು ಕಾಂಗ್ರೆಸ್ (Congress) ಮುಂದುವರೆಸಿದಂತೆ ಕಾಣುತ್ತಿದೆ. ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಪರಮಾಪ್ತ ಮಿಥುನ್ ರೈ (Mithun Rai) ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಮೂಡಬಿದ್ರೆಯ ಪುತ್ತಿಗೆಯಲ್ಲಿ ನಡೆದ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಉಡುಪಿ ಕೃಷ್ಣ ಮಠಕ್ಕೆ (Udupi Krishna Mutt) ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಹೇಳುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ
Advertisement
Advertisement
ಮಿಥುನ್ ರೈ ವಿವಾದಾತ್ಮಕ ಹೇಳಿಕೆಗೆ ಸಹಜವಾಗಿಯೇ ಬಿಜೆಪಿ (BJP) ನಾಯಕರು ಗರಂ ಆಗಿದ್ದಾರೆ. ಮುಸಲ್ಮಾನ ಅರಸರು (Muslim King) ಯಾವುದೇ ಜಾಗವನ್ನು ಕೃಷ್ಣಮಠಕ್ಕಾಗಲಿ, ಅನಂತೇಶ್ವರಕ್ಕಾಗಲಿ ನೀಡಿಲ್ಲ. ಮಠದ ಜಾಗದಲ್ಲೇ ಚರ್ಚ್, ಮಸೀದಿಗಳಿವೆ ಅಂತ ಶಾಸಕ ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋದ ಸಿಟಿ ರವಿ, ದೇಶಕ್ಕೆ ಭಾರತ ಅಂತಾ ಹೆಸರು ಕೊಟ್ಟಿದ್ದೇ ಮುಸಲ್ಮಾನ ದೊರೆಗಳು ಅಂತಾ ಕಾಂಗ್ರೆಸ್‍ನವರು ಹೇಳಿದ್ರೂ ಅಚ್ಚರಿ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಕೇಸ್ – ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಶಾರೀಕ್ ಟಾರ್ಗೆಟ್!
Advertisement
ಮಿಥುನ್ ರೈ ಹೇಳಿಕೆ ಅರ್ಥಹೀನ. ಉಡುಪಿಯ ಅನಂತೇಶ್ವರ, ಕೃಷ್ಣಮಠದ ಸನ್ನಿಧಾನಕ್ಕೆ ಜಾಗವನ್ನು ರಾಮಭೋಜ ರಾಜರು ದಾನ ಕೊಟ್ಟಿದ್ದು ಇದಕ್ಕೆ ದಾಖಲೆ ಇದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
Advertisement
ಮಿಥುನ್ ರೈ ಹೇಳಿಕೆಗೆ ಹಿಂದೂ ಮುಖಂಡರು ಆಕ್ರೋಶ ಹೊರಹಾಕಿ ಮಿಥುನ್ ರೈ ಕೂಡಲೇ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಿಥುನ್ ರೈ, ತಪ್ಪಾಗಿದ್ರೆ ಕ್ಷಮೆ ಕೇಳುತ್ತೇನೆ. ಪೇಜಾವರ ಶ್ರೀಗಳು ಹಿಂದೆ ಹೇಳಿದ್ದನ್ನೇ ನಾನು ಹೇಳಿದ್ದೇನೆ ಎಂದು ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಕೃಷ್ಣಮಠದ ಇತಿಹಾಸ; ಸತ್ಯಾಸತ್ಯತೆ ಏನು?
1200 ವರ್ಷಗಳ ಹಿಂದೆ ಉಡುಪಿ ರಥಬೀದಿಯಲ್ಲಿ ಅನಂತೇಶ್ವರ ದೇವಸ್ಥಾನ ಸ್ಥಾಪನೆಯಾಗಿದ್ದು ಅನಂತೇಶ್ವರ ದೇವಸ್ಥಾನಕ್ಕೆ ಜಮೀನು ಕೊಟ್ಟಿದ್ದು ರಾಜ ರಾಮಭೋಜ. ಅನಂತೇಶ್ವರ ದೇಗುಲದ ಜಮೀನಿನಲ್ಲಿ 800 ವರ್ಷಗಳ ಹಿಂದೆ ಕೃಷ್ಣಮಠ ಸ್ಥಾಪನೆಯಾಗಿದೆ. ಅನಂತೇಶ್ವರ ದೇವಸ್ಥಾನದ ಜಮೀನಿನಲ್ಲಿ ರಥಬೀದಿ, ಅಷ್ಟಮಠಗಳು ಇದೆ. ಮುಸಲ್ಮಾನ ಸಂಸ್ಥಾನ ಅಥವಾ ದೊರೆಗಳು ಉಡುಪಿ ಭಾಗವನ್ನು ಆಳಿದ ಬಗ್ಗೆ ಇತಿಹಾಸದ ದಾಖಲೆಗಳಿಲ್ಲ.