ನ್ಯಾಷನಲ್ ಹೆರಾಲ್ಡ್ ಹಗರಣ – ED ಅಧಿಕಾರಿಗಳಿಂದ ಮಲ್ಲಿಕಾರ್ಜುನ್‌ ಖರ್ಗೆ ವಿಚಾರಣೆ

Public TV
1 Min Read
MALLIKARJUBA KHERGE

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ನವದೆಹಲಿಯ ಜನಪಥ್‍ನಲ್ಲಿರುವ ಪರಿವರ್ತನ್ ಭವನದಲ್ಲಿ ಕಳೆದ ಎರಡು ಗಂಟೆಗಳಿಂದ ವಿಚಾರಣೆ ನಡೆಸಲಾಗುತ್ತಿದೆ.

Enforcement Directorate

ನ್ಯಾಷನಲ್ ಹೆರಾಲ್ಡ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದು ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಹೊಸ ಸಂಕಷ್ಟ ಶುರುವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ

ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಗಾಂಧಿ ಕುಟುಂಬದ ಆಪ್ತ ಬಳಗದಲ್ಲಿರುವ ನಾಯಕ. 2011 ರಲ್ಲಿ ಸ್ಥಾಪಿತವಾಗಿದ್ದ ಯಂಗ್ ಇಂಡಿಯ ಲಿಮಿಟೆಡ್‌ನ ಟ್ರಸ್ಟಿಯಾಗಿರುವ ಹಿನ್ನೆಲೆ ಖರ್ಗೆ ಅವರನ್ನು ವಿಚಾರಣೆ ಒಳಪಡಿಸಲಾಗಿದೆ.

Congress

9.21 ಕೋಟಿ ರೂ.ಗೆ ನಷ್ಟದಲ್ಲಿದ್ದ ಅಸೋಸಿಯೇಟ್ ಜನರಲ್ಸ್ ಲಿಮಿಟೆಡ್ ಸಂಸ್ಥೆಯನ್ನು ಯಂಗ್ ಇಂಡಿಯಾ ಲಿಮಿಟೆಡ್ ಖರೀದಿಸಿತ್ತು. ಇದೇ ಎಜೆಎಲ್ ಸಂಸ್ಥೆಯ ಅಡಿಯಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕಟವಾಗುತ್ತಿತ್ತು. ನಷ್ಟದಲ್ಲಿದ್ದ ಎಜೆಎಲ್ ಖರೀದಿ ಮಾಡಿರುವ ಬಗ್ಗೆ ಪ್ರಶ್ನೆ ಮಾಡಿದ್ದ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಈ ಖರೀದಿಯ ಹಿಂದೆ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ದೂರು ಆಧರಿಸಿ ತನಿಖೆ ಆರಂಭಿಸಿರುವ ಇಡಿ ಅಧಿಕಾರಿಗಳು ಇಂದು ಯಂಗ್ ಇಂಡಿಯಾ ಲಿಮಿಟೆಡ್ ಟ್ರಸ್ಟಿ ಖರ್ಗೆ ಅವರನ್ನು ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಆರೋಪಿ ಬೇಕಂತ ಕೊಲೆ ಮಾಡಿಲ್ಲ, ನರ ಕಟ್ ಆಗದೇ ಇದ್ದಿದ್ರೆ ಚಂದ್ರು ಸಾಯ್ತಿರಲಿಲ್ಲ: ಜಮೀರ್

 

 

Share This Article
Leave a Comment

Leave a Reply

Your email address will not be published. Required fields are marked *