ಬಾಗಲಕೋಟೆ: ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಆರ್ ಬಿ ತಿಮ್ಮಾಪುರ (R B Timmapur) ಬೆಂಬಲಿಗನೊಬ್ಬ ಧಾರವಾಡ-ವಿಜಯಪುರ (Dharwad V ijayapura) ಹೆದ್ದಾರಿಯಲ್ಲಿ ಡಿವೈಡರ್ ಒಡೆಸಿ ದರ್ಪ ತೋರಿರುವ ಘಟನೆ ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ನಡೆದಿದೆ.
ಕಾಂಗ್ರೆಸ್ (Congress) ಮುಖಂಡ ಕೃಷ್ಣಾ ಪರೆಡ್ಡಿ ಯಂತ್ರ ತರಿಸಿ ಮುಂದೆ ನಿಂತು ಡಿವೈಡರ್ ತೆರವುಗೊಳಿಸಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆಗೆ ನಿತೀಶ್ ಸಜ್ಜು – ಬಿಹಾರದ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ
ಕೃಷ್ಣಾ ಪರೆಡ್ಡಿ ತನ್ನ ಗೊಬ್ಬರದ ಅಂಗಡಿಗೆ ಡಿವೈಡರ್ ತೊಂದರೆಯಾಗುತ್ತದೆಂದು ಒಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಡಿವೈಡರ್ ತೆರವು ಖಂಡಿಸಿ ದಿಢೀರ್ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಾರ್ವಜನಿಕರ ಆಸ್ತಿಯಾದ ರಸ್ತೆ ವಿಭಜಕವನ್ನು ಹೇಗೆ ಒಡೆದು ಹಾಕುತ್ತಾರೆ? ಎಲ್ಲಾ ಗೊತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ಮುದ್ದಾಪುರ ಗ್ರಾಮಸ್ಥರು ದೂರಿದರು.