ಚಿಕ್ಕಬಳ್ಳಾಪುರ: ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ನನ್ನ ಸಮುದಾಯಕ್ಕೆ ಸೇರಿದವನು. ಆದರೆ ಅವನು ಆಯೋಗ್ಯ ಎಂದು ಕಾಂಗ್ರೆಸ್ ನಾಯಕಿ ಕವಿತಾರೆಡ್ಡಿ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಪ್ರಶಾಂತನಗರದ ಈದ್ಗಾ ಮೈದಾನದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಆಯೋಜಿಸಿದ್ದ ‘ಬುರ್ಕಾ ಔರ್ ಬಿಂದಿ ಏಕ್ ಸಾಥ್’ ಎಂಬ ಮಹಿಳೆಯರ ಶಾಂತಿಯುತ ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಕವಿತಾರೆಡ್ಡಿ ಅವರು, ಸೋಮಶೇಖರರೆಡ್ಡಿ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿ ಸವಾಲು ಹಾಕಿದರು.
ಪೌರತ್ವ ಕಾಯಿದೆ ತಿದ್ದುಪಡಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ಸೇರಿದಂತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಗೆ ಅವಾಚ್ಯ ಪದ ಬಳಕೆ ಮಾಡಿ ಸವಾಲು ಹಾಕಿದರು.
ಅಲ್ಪಸಂಖ್ಯಾತರನ್ನು ಊಫ್ ಅಂದ್ರೆ ಹೊರಟು ಹೋಗ್ತಾರೆ ಎಂದು ಸೋಮಶೇಖರ್ ಹೇಳಿದ್ದಾನೆ. ಆ ನನ್**ಗ ಅಯೋಗ್ಯನಿಗೆ ನಾನು ಮಾಧ್ಯಮದ ಮೂಲಕ ಹೇಳ್ತೇನೆ. ಲೋ.. ಸೋಮಶೇಖರರೆಡ್ಡಿ ನಿನಗೆ ಧಮ್ ಇದ್ರೇ ವಂದೇ ಮಾತರಂ ಹೇಳು. ಅನ್ ಲೈನ್‍ಗೆ ಬಂದು ವಂದೇ ಮಾತರಂ ನಾಲ್ಕು ಲೈನ್ ಹೇಳುಬಿಡು ಸಾಕು. ವಂದೇ ಮಾತರಂ ನಾಲ್ಕು ಲೈನ್ ಹೇಳೋಕೆ ಬರಲ್ಲ? ಮುಸ್ಲಿಂರನ್ನು ಊಫ್ ಅಂತಿಯಾ ನಾಚಿಕೆ ಆಗಲ್ವಾ? ಎಂದು ಕಿಡಿಕಾರಿದರು.