ಬೆಂಗಳೂರು: ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದವರು. ನಿಮಗೆ ತಲೆ ಕತ್ತರಿಸುವುದು ಗೊತ್ತಿದೆ. ತಲೆ ತಗ್ಗಿಸುವುದು ಗೊತ್ತಿಲ್ಲ ನಿಮಗೆ ತಲೆ ಬಾಗುವುದು ತಿಳಿದಿಲ್ಲ. ತಲೆ ಎತ್ತುವುದು ತಿಳಿದಿದೆ ಎಂದು ನಿನ್ನೆ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಲ್ಪ ಸಂಖ್ಯಾತ ಘಟಕದ ಆಧ್ಯಕ್ಷ ಇಮ್ರಾನ್ ಪ್ರತಾಪ್ ಘರ್ ವಿವಾದಿತ ಭಾಷಣಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
Advertisement
ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಇಮ್ರಾನ್, ದೇಶ ಕಷ್ಟದ ಕಾಲದಲ್ಲಿ ಸಾಗುತ್ತಿದೆ. ಬಿಜೆಪಿ ಸರ್ಕಾರವನ್ನು ದೇಶದಲ್ಲಿ ಕೊನೆಗೊಳಿಸಬೇಕು ಎಂದು ಬಿಜೆಪಿ ಸರ್ಕಾರದ ನಿಲುವನ್ನು ಖಂಡಿಸುವ ಭರದಲ್ಲಿ ಟಿಪ್ಪು ಸುಲ್ತಾನ್ ನೆಲದವರು ತಲೆಕತ್ತರಿಸುವರು ಎಂಬ ರೀತಿಯಲ್ಲಿ ಇಮ್ರಾನ್ ಮಾತನಾಡಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಮಾಲೀಕನೊಂದಿಗೆ ಬಸ್ ಹತ್ತಿದ ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿದ ಕಂಡಕ್ಟರ್
Advertisement
ಕೆಪಿಸಿಸಿ ಅಧ್ಯಕ್ಷರಾದ @DKShivakumar, ರಾಜ್ಯಸಭಾ ವಿಪಕ್ಷ ನಾಯಕರಾದ @kharge, ವಿಧಾನಸಭಾ ವಿಪಕ್ಷ ನಾಯಕರಾದ @siddaramaiah, ಎಐಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ @ShayarImran ಅವರ ಸಮ್ಮುಖದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷರಾಗಿ ಕೆ. ಅಬ್ದುಲ್ ಜಬ್ಬಾರ್ ಅವರು ಜವಾಬ್ದಾರಿ ಸ್ವೀಕರಿಸಿದರು. pic.twitter.com/kfiazpO2WL
— Karnataka Congress (@INCKarnataka) November 16, 2021
Advertisement
ಉತ್ತರ ಪ್ರದೇಶ ಮೂಲದ ನಾಯಕ ಇಮ್ರಾನ್ ಪ್ರತಾಪ್ ಘರ್ ಮೂಲತಹ ಉರ್ದು ಕವಿಯೂ ಅಗಿದ್ದಾರೆ. ಈ ಹಿಂದೆಯೂ ಸಾಕಷ್ಟು ವಿವಾದಿತ ಹೇಳಿಕೆ ನೀಡಿದ್ದ ಇಮ್ರಾನ್, ಶಾಹಿನ್ ಭಾಗ್ ಮಾದರಿ ಹೋರಾಟ ಹೈದ್ರಾಬಾದ್‍ನಲ್ಲಿ ಏಕಿಲ್ಲ ಎಂದು ಪ್ರಶ್ನಿಸಿ ವಿವಾದ ಹುಟ್ಟುಹಾಕಿದ್ದರು. ಬಳಿಕ ಹೈದ್ರಾಬಾದ್ ಪೋಲಿಸರು ಇಮ್ರಾನ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು. ಅಧಿಕಾರಕ್ಕಾಗಿ ಆಡಳಿತಶಾಹಿ ಆಥವಾ ಕಾರ್ಯಾಂಗವನ್ನು ಮುಸ್ಲಿಂಮರು ವಶಕ್ಕೆ ಪಡೆದುಕೊಳ್ಳಬೇಕು ಎಂದು ಉತ್ತರ ಪ್ರದೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದನ್ನೂ ಓದಿ: ಮಾಲಿನ್ಯ ತಡೆಗೆ ಕಠಿಣ ಕ್ರಮ ಕೈಗೊಂಡ ದೆಹಲಿ
Advertisement