Connect with us

Districts

ವಿವಾಹಿತ ಮಹಿಳೆಯೊಂದಿಗೆ ಲವ್ವಿಡವ್ವಿ ನಡೆಸುವಾಗ ಸಿಕ್ಕಿಬಿದ್ದ ಸಿಎಂ ಆಪ್ತನ ಪುತ್ರ

Published

on

– ಮಹಿಳೆಯ ಪತಿಯಿಂದ ಕಾಂಗ್ರೆಸ್ ಮುಖಂಡನಿಗೆ ಗೃಹ ಬಂಧನ

ಮೈಸೂರು: ಸಿಎಂ ಆಪ್ತ ಮರೀಗೌಡ ಜಿಲ್ಲಾಧಿಕಾರಿಗೆ ಅವಾಜ್ ಹಾಕಿ ಸಿಎಂ ಹೆಸರಿಗೆ ಕಳಂಕ ತಂದಿದ್ದಾಯ್ತು. ಈಗ ಸಿಎಂ ಅವರ ಇನ್ನೊಬ್ಬ ಪರಮಾಪ್ತ ಕೆ.ಸಿ. ಬಲರಾಮ್ ಅವರ ಮಗನ ಸರದಿ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ಬಲರಾಮ್ ಪುತ್ರ ಟಿ. ನರಸೀಪುರ ಎಪಿಎಂಸಿ ಸದಸ್ಯ ಪ್ರಭಾಕರ್ ವಿವಾಹಿತ ಮಹಿಳೆ ಜೊತೆ ಲವ್ವಿಡವ್ವಿ ನಡೆಸುವಾಗ ಮಹಿಳೆಯ ಪತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಮೈಸೂರಿನ ಆಲನಹಳ್ಳಿಯ ಜನತಾ ಕಾಲೋನಿಯ ನಿವಾಸಿ ಶಿವಶಂಕರ್ ಅವರ ಪತ್ನಿ ಜೊತೆ ಪ್ರಭಾಕರ್, ಶಿವಶಂಕರ್ ಮನೆಯಲ್ಲಿಯೆ ಲವ್ವಿಡವ್ವಿ ಶುರು ಮಾಡಿದ್ದ. ಆಗ ಶಿವಶಂಕರ್ ಇಬ್ಬರನ್ನೂ ಮನೆಯೊಳಗೆ ಕೂಡಿ ಹಾಕಿ ಗೃಹಬಂಧನದಲ್ಲಿ ಇಟ್ಟಿದ್ದರು. ಮಾಧ್ಯಮದವರು ಬರುವವರೆಗೂ ಬಾಗಿಲು ತೆಗೆಯೋದಿಲ್ಲ ಎಂದು ಶಿವಶಂಕರ್ ಪಟ್ಟು ಹಿಡಿದಿದ್ದರು.

ನಂತರ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಗೃಹಬಂಧನದಿಂದ ಮುಕ್ತ ಮಾಡಿ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಂದುವರೆದಿದೆ.

 \

 

Click to comment

Leave a Reply

Your email address will not be published. Required fields are marked *