ಶಿವಮೊಗ್ಗ: ರೆಸಾರ್ಟ್ ಬಿಟ್ಟು ಹೊರ ಬನ್ನಿ, ಬರೀ ಜೈಕಾರದಿಂದ ಯಾರೂ ನಾಯಕರಾಗುವುದಿಲ್ಲ ಎಂದು ಕಾಂಗ್ರೆಸ್ ವರಿಷ್ಠರ ವಿರುದ್ಧ ಮಾಜಿ ಕಾಂಗ್ರೆಸ್ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಪಕ್ಷದ ವರಿಷ್ಠರ ವಿರುದ್ಧ ಕಿಡಿಕಾರಿದರು. ವೀರಶೈವ, ಲಿಂಗಾಯತ ನಾಯಕರನ್ನು ರಾಜ್ಯದ ನಾಯಕರು ನಿರ್ಲಕ್ಷ್ಯಿಸುತ್ತಿದ್ದಾರೆ. ಸ್ಥಳೀಯ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿಯೇ ಉಳಿಯಬೇಕು. ಬರೀ ಜೈಕಾರದಿಂದ ಯಾರೂ ನಾಯಕರಾಗುವುದಿಲ್ಲ. ಮೈತ್ರಿ ಅಭ್ಯರ್ಥಿ ನನ್ನ ಜೊತೆ ಒಮ್ಮೆಯೂ ಮಾತನಾಡಲಿಲ್ಲ. ಸೋತವರು ಈಗ ನಾಪತ್ತೆ ಆಗಿದ್ದಾರೆ. ಸೋತು ಮನೆಯಲ್ಲಿ ಕೂರುವುದಿಲ್ಲ. ಕೆಲಸ ಮಾಡಿದವರ ಜೊತೆ ಕೂತು ಕಷ್ಟಸುಖ ಹಂಚಿಕೊಳ್ಳಬೇಕು ಎಂದು ಕಿಡಿಕಾರಿದರು.
Advertisement
Advertisement
ಮೈತ್ರಿ ನಾಯಕರು ರೆಸಾರ್ಟ್ ಬಿಟ್ಟು ಹೊರ ಬನ್ನಿ, ರಾಜ್ಯದಲ್ಲಿ ತೀವ್ರವಾಗಿರುವ ನೀರಿನ ಸಮಸ್ಯೆ ಇದೆ. ಅದಕ್ಕೆ ಪರಿಹಾರ ಸೂಚಿಸಿ ಎಂದರು. ನಂತರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡೇ ಸ್ಪರ್ಧೆಗಿಳಿದ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಮೈತ್ರಿ ಆಗಬಾರದಿತ್ತು. ಗೆದ್ದ ಮೇಲೆ ಆಗಬೇಕಿತ್ತು. ಸರ್ಕಾರವನ್ನು ವಿಸರ್ಜನೆ ಮಾಡಿ ಬಳಿಕ ಚುನಾವಣೆಗೆ ಹೋಗುವುದು ಸರಿಯಾದ ಕ್ರಮವಾಗಿತ್ತು ಎಂದು ವರಿಷ್ಠರ ವಿರುದ್ಧ ಹರಿಹಾಯ್ದರು.