ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರು ಚೌಕಿದಾರ ಆಗಿ ಉಳಿದಿಲ್ಲ, ಇವತ್ತು ಅವರು ಚೋರ್ ಆಗಿದ್ದಾರೆ. ಚೋರ್ ಚೌಕಿದಾರರನ್ನು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಚಿವ ಎಚ್.ಕೆ ಪಾಟೀಲ್ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿತ್ತು. ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಅಂತ್ಯ ಸಂಸ್ಕಾರ ಮುಗಿದಿಲ್ಲ, ಆಗಲೇ ಚುನಾವಣಾ ಪ್ರಚಾರ ಮಾಡಿದ್ದಾರೆ. ಯೋಧರನ್ನ ಹೆಲಿಕಾಪ್ಟರ್ ಮೂಲಕ ಈಗ ಕಳುಹಿಸುವ ವ್ಯವಸ್ಥೆ ಮಾಡ್ತಿದ್ದಿರಲ್ಲ. ಈ ಮುಂಚೆ ಉಗ್ರರ ಬಗ್ಗೆ ಗುಪ್ತಚರ ಮಾಹಿತಿ ಇದ್ದರು ಯಾಕೆ ಗಮನ ಹರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
Advertisement
ಅಲ್ಲದೆ ಐದು ವರ್ಷದ ಕಡಿಮೆ ಅವಧಿಯಲ್ಲಿ ಎಷ್ಟು ಜನ ಯೋಧರನ್ನ ಕಳೆದುಕೊಂಡಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾವು ಯುದ್ಧ ಗೆದ್ದಿದ್ದೇವೆ. 1962ರಲ್ಲಿ ಯುದ್ಧ ಗೆದ್ದಿದ್ದೇವೆ. ಆಗ ನಾವು ಯುದ್ಧ ಗೆದ್ದಿದ್ದೇವೆ ನಮಗೆ ಮತ ಹಾಕಿ ಅಂತ ಯಾವಾಗಾದರೂ ಕೇಳಿದ್ದೇವಾ? ಎಂದು ಬಿಜೆಪಿಗೆ ಪ್ರಶ್ನೆ ಮಾಡಿ ಎಚ್.ಕೆ ಪಾಟೀಲ್ ವ್ಯಂಗ್ಯವಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv