ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರು ಕೂಡ ಇದ್ದಾರೆ ಎಂಬ ಬಿಜೆಪಿ ಆರೋಪಕ್ಕೆ, ನನ್ನ ಹೆಸರನ್ನು ಕೂಡ ಹೇಳಲಿ ಯಾರು ಬೇಡ ಎನ್ನುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
Advertisement
ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ವಿಚಾರವಾಗಿ ಭಾರೀ ಚರ್ಚೆಯಾಗುತ್ತಿದ್ದು, ಆರೋಪಿ ಶ್ರೀಕಿ ಒಂದಷ್ಟು ಹೆಸರುಗಳನ್ನು ಬಹಿರಂಗ ಪಡಿಸಿದ್ದಾರೆ. ಅವುಗಳಲ್ಲಿ ಉಮರ್ ನಲಪಾಡ್ ಹೆಸರು ರಿವೀಲ್ ಆಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಹೆಸರು ಹೇಳುತ್ತಿರುವುದು ಓಲ್ಡ್ ಕೇಸ್, ಓಲ್ಡ್ ಸ್ಟೋರಿ. ಮೂರು ವರ್ಷದ ಹಳೆಯ ಪ್ರಕರಣವನ್ನ ಈಗ ಮುನ್ನಲೆಗೆ ತಂದಿದ್ದಾರೆ. ಆದರೆ ಅದನ್ನು ಬಿಟ್ಟಾಕಿ ಈಗೀನ ಸುದ್ದಿ ಬಗ್ಗೆ ಮಾತನಾಡಿ, ನಾವು ದಾಖಲೆಗಳನ್ನ ಸಂಗ್ರಹಿಸುತ್ತಿದ್ದೇವೆ. ಎಲ್ಲಾ ದಾಖಲೆ ಸಿಕ್ಕ ಮೇಲೆ ಮಾತನಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಯಾವುದೇ ಕಾಯಿನ್ ವಿಚಾರಕ್ಕೂ, ನನ್ನ ಮಗನಿಗೂ ಸಂಬಂಧ ಇಲ್ಲ: ಎನ್.ಎ.ಹ್ಯಾರಿಸ್
Advertisement
Advertisement
ದಾಖಲೆಯನ್ನು ಬಿಡುಗಡೆಗೊಳಿಸುವ ಮೊದಲು ಕಾಂಗ್ರೆಸ್ ನಾಯಕರು ಚಿಂತೆ ಮಾಡಬೇಕು ಎಂಬ ಬಿಜೆಪಿ ಅವರ ಹೇಳಿಕೆಗೆ, ನಾನು ಚಿಂತೆ ಮಾಡುತ್ತಾ ಇರುತ್ತೇನೆ. ನನ್ನ ಹೆಸರನ್ನು ಬೇಕಾದರೂ ಹೇಳಲಿ ಯಾರು ಬೇಡ ಅಂತಾರೆ. ಇದನ್ನು ದಾಖಲೆ ಸಹಿತ ಹೊರ ತರುವುದು ಬಾರ್ನ್ ಡ್ಯೂಟಿ ಆಫ್ ಎವರಿ ಪೊಲಿಟೀಶಿಯನ್ ಸಿಎಂ, ಎಕ್ಸ್ ಸಿಎಂ, ವೈ, ಜೆಡ್ ಎಲ್ಲರದಾಗಿದೆ. ಲಮಾಣಿ ಮಗನ ಬೋಗಸ್ ಡ್ರಗ್ಸ್ ಕೇಸಲ್ಲಿ ಸಿಕ್ಕಿಹಾಕಿಸಿ ಈಗ ಪೊಲಿಕಲ್ ಕರಿಯರ್ ಡ್ಯಾಮೇಜ್ ಮಾಡಬೇಕು ಅಂದುಕೊಂಡರೆ ಯಾರೂ ಯಾವ ಡ್ಯಾಮೇಜ್ ಕೂಡ ಮಾಡಲು ಆಗುವುದಿಲ್ಲ. ಸತ್ಯ ಹೊರ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ
Advertisement