ಮಡಿಕೇರಿ: ಅಗ್ನಿಪಥ್ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ. ಅಗ್ನಿಪಥ್ ಜಾರಿಗೆ ತರುವ ಮುನ್ನ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಯೋಜನೆಯ ಆಗುಹೋಗುಗಳ ಬಗ್ಗೆ ಚರ್ಚೆಯ ನಡೆಸಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
Advertisement
ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಭಾರತ ಸೇನೆ ಪ್ರಪಂಚದಲ್ಲಿ ಹೆಸರುವಾಸಿಯಾದ ಸೇನಾಪಡೆಯಾಗಿದೆ. ಅಗ್ನಿಪಥ್ ಜಾರಿ ಮಾಡುವ ಬಗ್ಗೆ ಆಗುಹೋಗುಗಳ ಬಗ್ಗೆ ಸರ್ವ ಪಕ್ಷಗಳ ಜೊತೆ ಸಭೆ ನಡೆಸಿ, ಈ ಯೋಜನೆಯಿಂದ ಯಾವ ರೀತಿಯಲ್ಲಿ ಪರಿಣಾಮ ಇದೆ ಪ್ಲಸ್-ಮೈನಸ್ ಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕಿತ್ತು. ಏಕಾಏಕಿ ಈ ಒಂದು ಸ್ಕೀಮ್ ಜಾರಿಗೆ ತಂದು ದೇಶದಲ್ಲಿ ಯುವಕರು ಅಕ್ರೋಶಗೊಂಡಿದ್ದಾರೆ. ಇಡೀ ಪ್ರಪಂಚದಲ್ಲಿ ಇಂಡಿಯನ್ ಆರ್ಮಿಗೆ ಒಳ್ಳೆಯ ಹೆಸರು ಇದೆ. ಅಗ್ನಿಪಥ್ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ ಎಂದು ಹೇಳಿದ್ರು. ಇದನ್ನೂ ಓದಿ: ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ: ಲಕ್ಷ್ಮೀ ಹೆಬ್ಬಾಳ್ಕರ್
Advertisement
Advertisement
ಪ್ರಾಧಾನಿ ಮೋದಿ ಅವರು ಮೈಸೂರಿಗೆ ವಿಚಾರವಾಗಿ ಮಾತಾನಾಡಿದ ಅವರು, ಈ ಬಾರಿ ನಡೆದ ಎಂಎಲ್‍ಸಿ ಎಲೆಕ್ಷನ್ ನಲ್ಲಿ ಅಭ್ಯರ್ಥಿ ಸೋಲಿಸಿ ಮೋದಿಗೆ ಬಿಜೆಪಿ ಗಿಫ್ಟ್ ಕೊಟ್ಟಿದೆ. ಆ ಗಿಫ್ಟ್ ಸ್ವೀಕಾರಕ್ಕೆ ಪ್ರಧಾನಿ ಮೋದಿ ಮೈಸೂರಿಗೆ ಬರುತ್ತಿದ್ದಾರೆ. ಮೋದಿ ಬರುತ್ತಾರೆ ಅಂತ ಬಿಜೆಪಿಯವರು ಪದವೀಧರರ ಬಳಿ ಮತ ಕೇಳಿದ್ರು. ಆದರೆ ಚುನಾವಣೆಯಲ್ಲಿ ಮಧು ಜಿ ಮಾದೇಗೌಡರನ್ನ ಜನ ಗೆಲ್ಲಿಸಿದ್ದಾರೆ ಎಂದು ಹೇಳುವ ಮೂಲಕ ಮೋದಿ ಮೈಸೂರು ಪ್ರವಾಸದ ಬಗ್ಗೆ ವ್ಯಂಗ್ಯವಾಡಿದ್ರು.