ನವದೆಹಲಿ: ಹೈದರಾಬಾದ್‍ನ ಹೃದಯ ಭಾಗದಲ್ಲಿರುವ ಚಾರ್‌ಮಿನಾರ್ ಬಳಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕ ರಷೀದ್ ಖಾನ್ ಸಹಿ ಸಂಗ್ರಹ ಅಭಿಯಾನ ಶುರು ಮಾಡಿದ್ದಾರೆ. ಈ ಅಭಿಯಾನಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ತೆಲಂಗಾಣದಲ್ಲಿ ಹೊಸ ವಿವಾದಕ್ಕೆ ನಾಂದಿಯಾಗಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ವ್ಯಾಪ್ತಿಯಲ್ಲಿರುವ ಚಾರ್ ಮಿನಾರ್ ಬಳಿ ಈ ಹಿಂದೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಎರಡು ದಶಕಗಳ ಹಿಂದಿನಿಂದ ಇಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಿ ಕೊಡುತ್ತಿಲ್ಲ ಎಂದು ರಷೀದ್ ಖಾನ್ ಹೇಳಿದ್ದಾರೆ.
Advertisement
Advertisement
ಚಾರ್ ಮಿನಾರ್‌ನಲ್ಲಿ ಮೊದಲು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದೇ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಪ್ರಾರ್ಥನೆ ಸಲ್ಲಿಸಲು ನಿರಾಕರಿಸಲಾಗುತ್ತಿದೆ ಎಂದು ಮೌಲಾನಾ ಅಲಿ ಕ್ವಾದ್ರಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ: ಯೋಗಿ ಆದಿತ್ಯನಾಥ್
Advertisement
ಈಗ ಸಹಿ ಸಂಗ್ರಹ ಅಭಿಯಾನ ಆರಂಭಿಸಿರುವ ರಷೀದ್ ಖಾನ್, ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಪುರಾತತ್ವ ಇಲಾಖೆಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಅವಕಾಶ ನೀಡದಿದ್ದಲ್ಲಿ ಧರಣಿ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಪ್ರಾರ್ಥನೆಗೆ ಅವಕಾಶ ನೀಡಿದಂತೆ ಪ್ರತ್ಯೇಕ ಪತ್ರ ಬರೆಯಲಾಗಿದೆ. ಇದನ್ನೂ ಓದಿ: ರಾಮಮಂದಿರ ಸುತ್ತಮುತ್ತಲಿನ ಮದ್ಯ ಮಾರಾಟಗಾರರ ಪರವಾನಗಿ ರದ್ದು: ಯುಪಿ ಸರ್ಕಾರ