ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಭಾವುಕ ಭಾಷಣ ಮಾಡಿದ್ದು, ಈ ಕುರಿತು ಇಂದು ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ಅಧಿಕಾರದಿಂದ ಕೆಳಗಿಳಿಯುವ ಮುನ್ಸೂಚನೆ ಸಿಕ್ಕಿದೆ. ಅದಕ್ಕೇ ನಿನ್ನೆ ಹಾಗೆ ಮಾತಾಡಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ಎಂದು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಈ ಬದುಕು ಶಾಶ್ವತವಲ್ಲ, ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ: ಸಿಎಂ ವೈರಾಗ್ಯದ ಮಾತು
ಮುಂದೆ ಜಾಗ ಖಾಲಿ ಮಾಡುವ ಸೂಚನೆ ಸಿಕ್ಕಿದೆ. ಅಧಿಕಾರ ಶಾಶ್ವತವಲ್ಲ ಅಂತ ಹೇಳ್ತಾರೆ. ಜೀವನವೇ ಶಾಶ್ವತವಲ್ಲ, ಕುರ್ಚಿ ಯಾವಾಗ ಶಾಶ್ವತ ಹೇಳಿ. ಅದನ್ನ ನೋಡಿ ಬಸವ ಕೃಪದವರು ಬಸವಕೃಪದಲ್ಲೇ ಇರಿ. ಕೇಶವ ಕೃಪ ನಂಬಿಹೋದ್ರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ. ನಾ ಘರ್ ಕಾ, ನಾ ಘಾಟ್ ಕಾ… ಬಸ್ ಸ್ಟಾಂಡ್ ಕಾ ಆಗುತ್ತೆ ಎಂದು ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಇದೇ ವೇಳೆ ಎಂಇಎಸ್ ಪುಂಡಾಟಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಎಂಇಎಸ್ ಬಗ್ಗೆ ಮಾತನ್ನಾಡಲು ಧಮ್ ಇಲ್ಲ. ವಾಟಾಳ್ ನಾಗರಾಜ್ ಗೆ ಇರುವ ಧೈರ್ಯ ಇಲ್ಲಿನ ನಾಯಕರಿಗ ಇಲ್ಲ ಎಂದು ವಾಗ್ದಾಳಿ ನಡೆಸಿದರು.