ಬೆಂಗಳೂರು: ಪ್ರಮುಖ ಬೆಳೆವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಇಂದು ದಿಢೀರ್ ಭೇಟಿ ಮಾಡಿದ್ದಾರೆ.
ಇಂದು ಸಿಎಂ ಅವರ ಕಾವೇರಿ ನಿವಾಸಕ್ಕೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷ ಬಿಡೊಲ್ಲ. ಸಿದ್ದರಾಮಯ್ಯ ನಾನು ಅಣ್ಣ ತಮ್ಮ ಇದ್ದಂತೆ ಅಂತ ಹೇಳಿದ್ದಾರೆ.
Advertisement
Advertisement
ದೇವೇಗೌಡರನ್ನು ಭೇಟಿ ಆದ ತಕ್ಷಣ ಪಕ್ಷ ಬಿಡ್ತೇನೆ ಅನ್ನೋದು ತಪ್ಪು. ಪಕ್ಷ ಬಿಡೋದು ಕೇವಲ ಮಾಧ್ಯಮದ ಪ್ರೀತಿ ಅಷ್ಟೆ. ನನ್ನ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ದೇವೇಗೌಡರ ನನ್ನ ಸಂಬಂಧ ತುಂಬ ಚೆನ್ನಾಗಿದೆ. ಹೀಗಾಗಿ ಭೇಟಿಯಾಗಿದ್ದೆ ಅಷ್ಟೆ. ರಾಹುಲ್ ಗಾಂಧಿ ಸಮಾವೇಶಕ್ಕೂ ನಾನು ಹೋಗ್ತಿನಿ. ನಾನು ಕಾಂಗ್ರೆಸ್ ಪಕ್ಷ ಬಿಡೋದಿಲ್ಲ. ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅಂತ ಅವರು ತಿಳಿಸಿದ್ದಾರೆ.
Advertisement
ಸಿದ್ದರಾಮಯ್ಯ ಮೇಲೆ ಸಿಎಂ ಇಬ್ರಾಹಿಂ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಿಎಂ ಮೇಲೆ ಮುನಿಸಿನಿಂದ ಇಬ್ರಾಹಿಂ ಅವರು ಪಕ್ಷ ತ್ಯಜಿಸುವ ಸುಳಿವು ನೀಡಿದ್ದರು. ಅಲ್ಲದೇ ಜೆಡಿಎಸ್ ಪಕ್ಷ ಸೇರ್ಪಡೆಗೆ ಚಿಂತಿಸಿದ್ದರು.
Advertisement
ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಪ್ರಧಾನಿಯನ್ನು ಇಬ್ರಾಹಿಂ ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಇಂದು ಸಂಕ್ರಾಂತಿ ಹಬ್ಬ. ರಾಷ್ಟ್ರದ ಹಿರಿಯ ಮುತ್ಸದ್ಧಿ ರಾಜಕಾರಣಿ ದೇವೇಗೌಡರಿಗೆ ಸಂಕ್ರಾಂತಿ ಶುಭ ಕೋರಲು ಬಂದಿದ್ದೆ. ಜೆಡಿಎಸ್ ಸೇರ್ಪಡೆ ಕುರಿತು ಯಾವುದೇ ಮಾತುಕತೆಯಾಗಿಲ್ಲ. ಸಂಕ್ರಾಂತಿ ಹಬ್ಬದಂದು ಶುಭ ಕೋರಿದ್ದೀನಿ ಅಷ್ಟೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ದೇವೇಗೌಡರ ಅಭಿಪ್ರಾಯವೂ ಇದೇ ಇದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿಚಾರ ಕಾಂಗ್ರೆಸ್ ಹೈ ಕಮಾಂಡ್ ಗೆ ಬಿಟ್ಟ ವಿಷಯ. ಅದರ ಬಗ್ಗೆ ಮಾತಾಡುವಷ್ಟು ದೊಡ್ಡವರಲ್ಲ. ನಾವು ಕೇವಲ ಸಲಹೆ ಕೊಡುವವರು ಅಂತ ಹೇಳಿದ್ದರು.