ಬಾಗಲಕೋಟೆ: ಕೋಟ್ಯಾಂತರ ರೂ. ಹಣ ಸಿಗುತ್ತೆ ಎಂದು ಪಟಾಲಂ ಇಪ್ಪತ್ತು ಜನ ಅಧಿಕಾರಿಗಳು ದಾಳಿ ಮಾಡಿದ್ರು. ಆದ್ರೆ ಬಳಿಕ ಅಧಿಕಾರಿಗಳು ನಿರಾಸೆಯಾಗಿದ್ದು, ಕ್ಷಮೆ ಕೇಳಿ ಹೊರಟು ಹೋದ್ರು ಅಂತ ಕಾಂಗ್ರೆಸ್ ಮುಖಂಡ, ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಬದಮಿಯಲ್ಲಿ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಎಷ್ಟೇ ಏನೇಯಾದ್ರೂ ಸಿದ್ದರಾಮಯ್ಯ ಸರ್ಕಾರ ಬರುತ್ತೆ. ನಾವೆಲ್ಲ ಕಂಕಣಬದ್ಧರಾಗಿ ಕೆಲಸ ಮಾಡಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದಾಳಿ ವೇಳೆ ಅಧಿಕಾರಿಗಳು ಅಸಹಾಯಕರಾದ್ರು. ಏನ್ಮಾಡೋದು ನಮ್ಮ ಡ್ಯೂಟಿ ನಾವು ಮಾಡ್ತಿದ್ದೇವೆ. ಎಪ್ಪತ್ತು ವರ್ಷದಿಂದ ಚುನಾವಣೆ ನಡೀತಿವೆ. ಇಂತಹ ವಾತಾವರಣ ದೇಶದಲ್ಲಿ ಎಂದೂ ಬಂದಿದ್ದಿಲ್ಲವೆಂದು ಐಟಿ ಅಧಿಕಾರಿಗಳು ಅಸಹಾಯಕತೆ ತೋರಿಸಿದ್ರು ಅಂತ ಅವರು ಹೇಳಿದ್ರು. ಇದನ್ನೂ ಓದಿ: ಬದಾಮಿ ಕಾಂಗ್ರೆಸ್‍ಗೆ ಮಿಡ್‍ನೈಟ್ ಐಟಿ ಶಾಕ್!
Advertisement
Advertisement
ನಮ್ಮನೇನು ವಿಚಾರಣೆ ಮಾಡಿಲ್ಲ. ನಮ್ಮ ಬಳಿ ಜುಬ್ಬಾ ಪೈಜಾಮ ಬಿಟ್ಟು ಏನಿಲ್ಲ. ಸಿದ್ದರಾಮಯ್ಯ ಕಂಪನಿಯಲ್ಲಿ ಹುಡುಕಿ ತೆಗೆದ್ರೂ ತಿನ್ನೋಕೆ ಏನೂ ಸಿಗಲ್ಲ. ದಾಳಿ ವೇಳೆ ಹಣ ಸಿಕ್ಕ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಪಾರಸ್ಮಲ್ ಜೈನ್ ಖರ್ಚಿಗೆ ಒಂದಿಷ್ಟು ಹಣ ಇಟ್ಟುಕೊಂಡಿರೋದ್ರಲ್ಲಿ ತಪ್ಪೇನಿಲ್ಲ. ಅವರು ಶ್ರೀಮಂತರಿದ್ದಾರೆ ಎರಡು ಮೂರು ಲಕ್ಷ ಖರ್ಚಿಗೆ ಇಟ್ಟುಕೊಳ್ಳುದಲ್ಲಿ ತಪ್ಪೇನಿಲ್ಲ. ಅದಕ್ಕೆ ಲೆಕ್ಕ ಕೊಡ್ತಾರೆ ಅಂತ ಅವರು ತಿಳಿಸಿದ್ರು.
Advertisement
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ನಾಯಕರುಗಳು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಬದಾಮಿಯಲ್ಲಿ ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿತ್ತು. ಸೋಮವಾರ ರಾತ್ರಿ ಬದಾಮಿ ಹೊರವಲಯದಲ್ಲಿರುವ ಶಾಸಕ ಆನಂದ್‍ಸಿಂಗ್‍ಗೆ ಸೇರಿದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ರಾತ್ರಿ 11ರ ಸುಮಾರಿಗೆ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಲಗ್ಗೆಯಿಟ್ಟು, ದಾಖಲೆಗಳ ಪರಿಶೀಲನೆ ನಡೆಸಿತ್ತು.
Advertisement