– ತನಿಖೆಗೆ ವಿಶೇಷ ತಂಡ ರಚನೆ
ಬೆಂಗಳೂರು: ಕಾಂಗ್ರೆಸ್ ಮುಖಂಡ (Congress Leader) ಹೈದರ್ ಅಲಿ (Hyder Ali) ಹತ್ಯೆ ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷೆ ವರದಿ (Postmortem report) ಬಂದಿದ್ದು, ದೇಹದ 56 ಕಡೆ ಮಚ್ಚಿನಿಂದ ಕೊಚ್ಚಿ, ತಲೆ ಬುರುಡೆ ಛಿದ್ರಗೊಳಿಸಿ, ಕಿವಿ ಕಟ್ ಮಾಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
Advertisement
ಬೆಂಗಳೂರಿನ ಅಶೋಕನಗರದ (Ashok Nagar) ಗರುಡ ಮಾಲ್ ಬಳಿ ಘಟನೆ ಶನಿವಾರ ರಾತ್ರಿ ದುಷ್ಕರ್ಮಿಗಳು ಕಾಂಗ್ರೆಸ್ ಮುಖಂಡನ ಹತ್ಯೆ ಮಾಡಿದ್ದಾರೆ. ಶವ ಪತ್ತೆಯಾದಾಗ ಮೊದಲು ಅಪರಿಚಿತ ವ್ಯಕ್ತಿ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಕಲಬುರಗಿ | ಜಿಮ್ಸ್ ಆಸ್ಪತ್ರೆಯ ವೈದ್ಯರ ಎಡವಟ್ಟು – ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ ಉಂಡೆ, ಹತ್ತಿ ಬಿಟ್ಟು ಹೊಲಿಗೆ
Advertisement
Advertisement
ಡಾ.ದಿಲೀಪ್ ನೇತೃತ್ವದಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಹಂತಕರು ಹೈದರ್ ಅಲಿಯ ದೇಹದ 56 ಕಡೆ ಕೊಚ್ಚಿದ್ದಾರೆ. ತಲೆ ಬುರುಡೆ ಛಿದ್ರಗೊಳಿಸಿದ್ದು, ಕಿವಿ ಕಟ್ ಮಾಡಿದ್ದಾರೆ. ದೇಹದ ಮೇಲೆಯೇ 10 ಕಡೆ ಮಚ್ಚಿನ ಗುರುತು ಪತ್ತೆಯಾಗಿದ್ದು, ಕಾಲುಗಳ ಮಾಂಸಖಂಡ ಹೊರ ಬರುವಂತೆ ಹಾಗೂ ಮುಖ ಗುರುತು ಸಿಗದ ರೀತಿಯಲ್ಲಿ ಕೊಚ್ಚಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಪಾರ್ಕ್ ಮಾಡಿದ್ದ ಕಾರಿನಲ್ಲೇ ಹೃದಯಾಘಾತದಿಂದ ಯುವಕ ಸಾವು
Advertisement
ಕೊಲೆಯಾದ ಹೈದರ್ ಅಲಿಯ ಸಹೋದರ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಂತಕರ ಹುಡುಕಾಟಕ್ಕಾಗಿ ಅಶೋಕ್ ನಗರ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಹಂತಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಸಿಪಿ ಶೇಖರ್ ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಹೇಳಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ – ಪಟ್ಟದ ಫೈಟ್ ನಡುವೆ ಪರಂ ಮಾತು
ಶೇಖ್ ಹೈದರ್ ಅಲಿ ಕೊಲೆಯಾದ ಕಾಂಗ್ರೆಸ್ ಮುಖಂಡ. ತಡರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಹೈದರ್ ಅಲಿ ಲೈವ್ ಬ್ಯಾಂಡ್‌ನಿಂದ ರಾತ್ರಿ ಸ್ನೇಹಿತನ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಆರೋಪಿಗಳು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಜೊತೆಯಲ್ಲಿದ್ದ ಸ್ನೇಹಿತನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದ ಮಡುವಲ್ಲಿ ಬಿದಿದ್ದ ಹೈದರ್ ಅವರನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಆನೆಪಾಳ್ಯ ನಿವಾಸಿ ಹೈದರ್ ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ನಾಡ ಬಾಂಬ್ ಸ್ಫೋಟ – ವಿದ್ಯಾರ್ಥಿಯ ಅಂಗೈ ಛಿದ್ರ
ವಿಚಾರ ತಿಳಿದು ಬೌರಿಂಗ್ ಆಸ್ಪತ್ರೆ ಬಳಿ ನೂರಾರು ಜನ ಜಮಾಯಿಸಿದ್ದು, ಆಸ್ಪತ್ರೆ ಗೇಟ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಶೇಖ್ ಹೈದರ್ ಅಲಿ ಶಾಸಕ ಎನ್.ಎ.ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದರು. ಹೈದರ್ ಅಲಿ ಹ್ಯಾರಿಸ್ ಪರ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದರು. ಘಟನೆ ಸಂಬಂಧ ಅಶೋಕನಗರ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: Champions Trophy; ಟೀಂ ಇಂಡಿಯಾ ಗೆಲುವಿಗಾಗಿ ಮಹಾ ಕುಂಭದಲ್ಲಿ ವಿಶೇಷ ಪೂಜೆ
ಘಟನೆ ಸಂಬಂಧ ಡಿಸಿಪಿ ಶೇಖರ್ ಮಾತನಾಡಿ, ತಡರಾತ್ರಿ 1 ಗಂಟೆ ವೇಳೆ ಫುಟ್ಬಾಲ್ ಸ್ಟೇಡಿಯಂ ಗೇಟ್ ಬಳಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿ ರೌಡಿಶೀಟರ್. ಹೈದರ್ ಅಲಿ ವಿರುದ್ಧ 11 ಪ್ರಕರಣಗಳಿವೆ. ಮಾರಣಾಂತಿಕ ಹಲ್ಲೆ, ಸಾಮಾನ್ಯ ಹಲ್ಲೆ, ಎನ್ಡಿಪಿಎಸ್ ಕೇಸ್‌ಗಳು ಇದೆ. ಹೈದರ್ ಅಶೋಕನಗರ ಪೊಲೀಸ್ ಠಾಣಾ ರೌಡಿಶೀಟರ್. 2016ರಿಂದ ರೌಡಿಶೀಟರ್ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕೊಲೆಯಾದ ವ್ಯಕ್ತಿಗೆ ರಾಜಕೀಯ ಹಿನ್ನೆಲೆ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ