ಮಂಡ್ಯ: ಟಿಕೆಟ್ ಘೋಷಣೆಗೂ ಮುನ್ನವೇ ತಾನು ಅಭ್ಯರ್ಥಿ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡ ಘಟನೆ ನಡೆದಿದೆ.
ಡಾ.ಕೃಷ್ಣ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಿನ್ನೆ ಮಂಡ್ಯದ ಆದಿಚುಂಚನಗಿರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಆಗಮಿಸಿದ್ದರು. ಅಮಾವಾಸ್ಯೆ ವಿಶೇಷ ಪೂಜೆ ಹಿನ್ನೆಲೆಯಲ್ಲಿ ದಂಪತಿ ಸಮೇತ ಭಾಗಿಯಾಗಿದ್ದರು. ಈ ವೇಳೆ ಡಿಕೆಶಿ ಜೊತೆ ಮಂಡ್ಯ ಟಿಕೆಟ್ ಆಕಾಂಕ್ಷಿ ಡಾ.ಕೃಷ್ಣ (Dr. Krishna) ಕಾಣಿಸಿಕೊಂಡಿದ್ದರು. ಬಳಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುರಿತು ಪೋಸ್ಟ್ ಹಾಕಿದ್ದಾರೆ. ಅಷ್ಟೇ ಅಲ್ಲದೇ ಫೇಸ್‍ಬುಕ್‍ನಲ್ಲಿ ತಾನು ಕಾಂಗ್ರೆಸ್ (Congress) ಅಭ್ಯರ್ಥಿ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ 12 ಸ್ಥಳಗಳಲ್ಲಿ ವಿಶ್ವಕಪ್ ಟೂರ್ನಿ – ಮೋದಿ ಸ್ಟೇಡಿಯಂನಲ್ಲಿ ಫೈನಲ್
Advertisement
Advertisement
ಇದೀಗ ಡಾ. ಕೃಷ್ಣ ಅವರ ಫೇಸ್‍ಬುಕ್ ಪೋಸ್ಟ್ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಅಭ್ಯರ್ಥಿ ಯಾರೆಂದು ‘ಕೈ’ ನಾಯಕರು ತಿಳಿಸಿದ್ದಾರಾ? ಮಂಡ್ಯದಲ್ಲಿ ಇಬ್ಬರಲ್ಲ, ಮೂವರಲ್ಲ ಬರೋಬ್ಬರಿ 16 ಮಂದಿ ಟಿಕೆಟ್‍ಗೆ ಅರ್ಜಿ ಹಾಕಿದ್ದರು. ಆದರೂ ಡಾ.ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ (Mandya) ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ ಎಂಬೆಲ್ಲಾ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಮುಂದಾದ ಅನಿಲ್ ಬೆನಕೆ