ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರ ನಗರದ ಎಸ್‍ಜೆಸಿಐಟಿ ಕಾಲೇಜು ಆವರಣದಲ್ಲಿ ಇದೇ ತಿಂಗಳ 14 ಹಾಗೂ 15 ರಂದು ಬೃಹತ್ ಆರೋಗ್ಯ ಮೇಳ ಆಯೋಜನೆ ಮಾಡಲಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡುವಾರು ಗ್ರಾಮವಾರು ಆರೋಗ್ಯ ಇಲಾಖೆ ವತಿಯಿಂದ ಉಚಿತ ರಕ್ತ ತಪಾಸಣೆಗೆ ರಕ್ತ ಸಂಗ್ರಹಣೆ ಕಾರ್ಯ ಮಾಡಲಾಗುತ್ತಿದೆ.
Advertisement
ಈ ವಿಚಾರವಾಗಿ ಚಿಕ್ಕಬಳ್ಳಾಪುರ ನಗರದ ಕಾಂಗ್ರೆಸ್ ಮುಖಂಡ ಸಂತೋಷ್ ಆರೋಗ್ಯ ಮೇಳ ಹಾಗೂ ರಕ್ತ ಸಂಗ್ರಹಣೆ ಮಾಡ್ತಿರೋದು ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರಕ್ಕೆ ಬಂದ ಕಲುಷಿತ ನೀರಿನಿಂದ ಪ್ಲೋರೈಡ್ ಬಂದಿದ್ಯಾ..? ಕ್ಯಾನ್ಸರ್ ಬಂದಿದ್ಯಾ ಪರೀಕ್ಷೆ ಮಾಡೋಕೆ ಅಂತ ಮಾತನಾಡಿದ್ದಾರೆ. ಇದನ್ನ ಪ್ರಚೋದನೆ ಮಾಡಿ ವೀಡಿಯೋ ಮಾಡಿಕೊಂಡಿರುವ ಸಚಿವ ಸುಧಾಕರ್ ಬೆಂಬಲಿಗ ಅನಿಲ್ ಕುಮಾರ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಪೊಲೀಸ್ ಗುಪ್ತಚರ ಪ್ರಧಾನ ಕಚೇರಿ ಮೇಲೆಯೇ ಗ್ರೆನೇಡ್ ದಾಳಿ
Advertisement
Advertisement
ದೂರಿನನ್ವಯ ತಡರಾತ್ರಿ ಐಪಿಸಿ ಸೆಕ್ಷನ್ 153 ಹಾಗೂ 505(1)ರ ಅಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿ ಸಂತೋಷ್ ರನ್ನ ಬಂಧಿಸಿ ತಡರಾತ್ರಿಯೇ ಜೈಲಿಗೆ ಕಳುಹಿಸಿದ್ದಾರೆ. ಇದೇ ವಿಚಾರವಾಗಿ ತಡರಾತ್ರಿ ಸಹ ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು. ಇಂದು ಬೆಳಗ್ಗೆ ಸಹ ಮತ್ತೆ ಪೊಲೀಸ್ ಠಾಣೆ ಬಳಿ ಜಮಾಯಿಸಿರುವ ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
Advertisement
ದೂರುದಾರ ಅನಿಲ್ ವಿರುದ್ಧ ಸಹ ದಲಿತ ಸಮುದಾಯದ ವೆಂಕಟ್ ಎಂಬವರಿಗೆ ಜಾತಿನಿಂದನೆ ಮಾಡಿದ್ದಾರೆ ಅಂತ ದೂರು ನೀಡಿದ್ದು ಅನಿಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮುಂದುವರಿದಿದ್ದು ಬಿಗುವಿನ ವಾತವಾರಣ ನಿರ್ಮಾಣ ಆಗಿದೆ. ಇದನ್ನೂ ಓದಿ: ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ