ನವದೆಹಲಿ: ಭಾರತವು ಶೀಘ್ರದಲ್ಲೇ ದ್ವೇಷ ಮತ್ತು ಕೋಪದ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆಯಲಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.
ಇತ್ತೀಚೆಗಷ್ಟೇ ವರ್ಲ್ಡ್ ಹ್ಯಾಪಿನೆಸ್ ವರದಿಯನ್ನು ಹಂಚಿಕೊಂಡಿತ್ತು. ಈ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಭಾರತವು ಹಸಿವಿನಲ್ಲಿ 10 ಸ್ಥಾನ, ಸ್ವಾತ್ರ್ಯಂತ್ರ್ಯದಲ್ಲಿ 119ನೇ ಸ್ಥಾನ ಸಂತೋಷದಲ್ಲಿ 136ನೇ ಸ್ಥಾನವನ್ನು ಪಡೆದುಕೊಳ್ಳುತ್ತೇವೆ. ಆದರೆ ಕೋಪ ಮತ್ತು ದ್ವೇಷದಲ್ಲಿ ಶೀಘ್ರವೇ ಅಗ್ರಸ್ಥಾನವನ್ನು ಪಡೆಯಲಿದ್ದೇವೆ ಎಂದು ವ್ಯಂಗ್ಯವಾಡಿದರು.
Hunger Rank: 101
Freedom Rank: 119
Happiness Rank: 136
But, we may soon top the Hate and Anger charts! pic.twitter.com/pJxB4p8DEt
— Rahul Gandhi (@RahulGandhi) March 19, 2022
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲ ಪ್ರಕಟಿಸಿದ ಜಗತ್ತಿನಲ್ಲಿ ಅತಿ ಹೆಚ್ಚು ಸಂತೋಷದಿಂದ ದೇಶಗಳ ವರದಿಯು ಯೋಗ ಕ್ಷೇಮದ ಪ್ರಜ್ಞೆ, ಸಾಮಾಜಿಕ ಬೆಂಬಲ ವ್ಯವಸ್ಥೆ, ಜಿಡಿಪಿಯ ತಲಾವಾರು, ಜೀವಿತಾವಧಿ, ಉದಾರತೆ, ಜೀವನ ಆಯ್ಕೆಗಳನ್ನು ಮಾಡುವ ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರದ ಗ್ರಹಿಕೆಗಳು ಇತ್ಯಾದಿಗಳಂತಹ ಹಲವಾರು ಅಂಶಗಳ ಆಧಾರದ ಮೇಲೆ ವಿಶ್ವದ 150 ದೇಶಗಳಿಗೆ ಸ್ಥಾನವನ್ನು ನೀಡಿದೆ.
ಈ ವರ್ಷದ ವರದಿಯಲ್ಲಿ ಫಿನ್‍ಲ್ಯಾಂಡ್ ಅಗ್ರಸ್ಥಾನದಲ್ಲಿದೆ. ಡೆನ್ಮಾರ್ಕ್, ಐಸ್ಲ್ಯಾಂಡ್, ಸ್ವಿಟ್ಜಲೆರ್ಂಡ್, ನೆದಲ್ಯಾರ್ಂಡ್ಸ್, ಲಕ್ಸೆಂಬರ್ಗ್, ಸ್ವೀಡನ್, ನಾರ್ವೆ, ಇಸ್ರೇಲ್ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳು ಕ್ರಮಾಂಕವಾಗಿ ಎರಡರಿಂದ ಹತ್ತನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರಲ್ಲ: ಅಮಿತ್ ಶಾ
ಭಾರತವು ಹಿಂದಿನ ಬಾರಿಗಿಂತ ಈ ಬಾರಿ ಮೂರು ಸ್ಥಾನಗಳು ಏರಿಕೆಯಾಗಿದ್ದು, 136ನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷ ಈ ಪಟ್ಟಿಯಲ್ಲಿ 139ನೇ ಸ್ಥಾನವನ್ನು ಪಡೆದಿತ್ತು. ಇದನ್ನೂ ಓದಿ: ಹಿಜಬ್ ತೀರ್ಪು ಪ್ರಕಟಿಸಿದ ಜಡ್ಜ್‌ಗಳಿಗೆ ಕೊಲೆ ಬೆದರಿಕೆ – ಕೇಸ್ ದಾಖಲು