ನವದೆಹಲಿ: ಜಿ-20 ಶೃಂಗಸಭೆ (G-20 Summit) ಪ್ರಯುಕ್ತ ರಾಷ್ಟ್ರಪತಿಗಳು ಆಯೋಜಿಸಿದ್ದ ಔತಣಕೂಟದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ( Mamta Banarjee) ಭಾಗಿ ಆಗಿದ್ದನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಆಗ್ತಿಲ್ಲ.
ಡಿನ್ನರ್ ಟೇಬಲ್‌ನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ಕೇಂದ್ರ ಮಂತ್ರಿ ಅಮಿತ್ ಶಾ (Amitshah) ಪಕ್ಕದಲ್ಲಿ ಮಮತಾ ಬ್ಯಾನರ್ಜಿ ಕುಳಿತಿದ್ರು. ಈ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ಅಧೀರ್ ಚೌಧರಿ ಪ್ರತಿಕ್ರಿಯಿಸಿ, ಜಿ-20 ಔತಣ ಕೂಟಕ್ಕೆ ನೀವು ಹೋಗದೇ ಇದ್ದಿದ್ರೆ ಆಕಾಶವೇನು ಉದುರಿಬೀಳ್ತಿತ್ತಾ, ಇಲ್ವಲ್ಲಾ ಎಂದು ಪ್ರಶ್ನಿಸಿದ್ದಾರೆ.
ಔತಣಕೂಟದಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಲು ಬೇರೆ ಏನಾದ್ರೂ ಕಾರಣ ಇತ್ತಾ?. ಶನಿವಾರದ ಬದಲು ಶುಕ್ರವಾರವೇ ದೆಹಲಿಗೆ ಏಕೆ ಬಂದ್ರು ಅಂತೆಲ್ಲಾ ಕೇಳಿದ್ದಾರೆ. ಕಾಂಗ್ರೆಸ್‌ನ ಈ ಪ್ರಶ್ನೆಗಳಿಗೆ ಟಿಎಂಸಿ ಗರಂ ಆಗಿದ್ದು, ತೀಕ್ಷ್ಣವಾಗಿಯೇ ತಿರುಗೇಟು ನೀಡಿದೆ. ಬಂಗಾಳದ ಮುಖ್ಯಮಂತ್ರಿಗಳು ಯಾವಾಗ ಎಲ್ಲಿಗೆ ಹೋಗ್ಬೇಕು ಅನ್ನೋದನ್ನು ನೀವು ನಿರ್ಣಯಿಸಲು ಆಗಲ್ಲ. ಮಮತಾ ಐಎನ್‌ಡಿಐಎ ಕೂಟದ ಭಾಗವಾಗಿದ್ದಾರೆ. ಹಾಗಂತಾ ದೀದಿಗೆ ನೀವ್ಯಾರು ಉಪನ್ಯಾಸ ನೀಡಬೇಕಾದ ಅಗತ್ಯವಿಲ್ಲ. ಆಕೆಯ ಬದ್ಧತೆಯನ್ನು ಯಾರಿಗೂ ಪ್ರಶ್ನಿಸಲಾಗಲ್ಲ ಎಂದು ಕೌಂಟರ್ ನೀಡಿದೆ. ಇದನ್ನೂ ಓದಿ: ಮಳೆಯಿಂದ ಭಾರತ ಮಂಟಪದಲ್ಲಿ ನಿಂತಿದ್ದ ನೀರನ್ನು ಕೂಡಲೇ ತೆರವುಗೊಳಿಸಲಾಗಿತ್ತು: PIB
ರಾಷ್ಟ್ರಪತಿಗಳ ಔತಣಕೂಟಕ್ಕೆ ಸಿಎಂಗಳಾದ ನಿತೀಶ್, ಹೇಮಂತ್ ಸೋರೆನ್ ಕೂಡ ಹೋಗಿದ್ರು. ಆದ್ರೆ, ಕರ್ನಾಟಕ, ದೆಹಲಿ, ಛತ್ತೀಸ್‌ಘಡ, ರಾಜಸ್ಥಾನ, ಒಡಿಶಾ ಸಿಎಂಗಳು ಪಾಲ್ಗೊಂಡಿರಲಿಲ್ಲ.
Web Stories