ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ನಾನಾ ತಂತ್ರಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಈಗ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಜೊತೆ ಕೈ ಜೋಡಿಸಿದ ವಿಚಾರ ಬೆಳಕಿಗೆ ಬಂದಿದೆ.
ಹೌದು. ರಾಜ್ಯ ಕಾಂಗ್ರೆಸ್ ನಾಯಕರ ಗಮನಕ್ಕೂ ಬಾರದಂತೆ ಕಾಂಗ್ರೆಸ್ ಹೈಕಮಾಂಡ್ ಮೆಗಾ ಪ್ಲಾನ್ ಮಾಡಿದೆ. ಬುಧವಾರ ರಾತ್ರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಮಾನ ಹತ್ತುವ ಮುನ್ನ ಸಿದ್ದರಾಮಯ್ಯ, ಪರಮೇಶ್ವರ್ ಅವರಲ್ಲಿ ಈ ವಿಚಾರ ತಿಳಿಸಿದಾಗ ಇಬ್ಬರು ನಾಯಕರು ಫುಲ್ ಖುಷ್ ಆಗಿದ್ದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
ಪ್ಲಾನ್ ಏನು?
ರಾಹುಲ್ ಗಾಂಧಿ ಹಾಗೂ ಚಂದ್ರಬಾಬು ನಾಯ್ಡು ಎರಡು ಸುತ್ತು ರಹಸ್ಯ ಮಾತುಕತೆ ನಡೆಸಿದ್ದಾರೆ. ಆಂಧ್ರ ಗಡಿ ಭಾಗದ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ತೆಲುಗುದೇಶಂ ಪಾರ್ಟಿಯ ಕಾರ್ಯಕರ್ತರು ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಬೇಕೆಂಬ ರಾಹುಲ್ ಪ್ರಸ್ತಾಪಕ್ಕೆ ನಾಯ್ಡು ಒಪ್ಪಿಗೆ ನೀಡಿದ್ದಾರೆ.
Advertisement
ತೆಲುಗು ಭಾಷಾ ಪ್ರೇಮ ಹಾಗೂ ಸಂಬಂಧಗಳನ್ನು ಹೊಂದಿರುವ ಆಂಧ್ರ ದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಗಡಿ ಜಿಲ್ಲೆಯ ಜನರೊಂದಿಗೆ ಹೊಂದಿರುವ ಬಾಂಧವ್ಯವನ್ನೆ ಬಳಸಿ ಪ್ರಚಾರ ಮಾಡಲಿದ್ದಾರೆ. ಸದ್ಯಕ್ಕೆ ಬಹಿರಂಗ ಮೈತ್ರಿ ಬೇಡ. ಕರ್ನಾಟಕ ಚುನಾವಣೆಯಲ್ಲಿ ನಮ್ಮಿಂದ ಆಂತರಿಕ ಬೆಂಬಲ ಸಿಗಲಿದೆ ಎಂದು ಚಂದ್ರಬಾಬು ನಾಯ್ಡು ರಾಹುಲ್ ಗಾಂಧಿಗೆ ಮಾತು ಕೊಟ್ಟಿದ್ದಾರೆ. ಅದರಂತೆ ಅವರ ಕಾರ್ಯಕರ್ತರ ಹಾಗೂ ಮುಖಂಡರ ತಂಡ ಕರ್ನಾಟಕದಲ್ಲಿ ಆಕ್ಟೀವ್ ಆಗಲಿದೆ. ಈ ರಹಸ್ಯ ಮೈತ್ರಿ ಬಗ್ಗೆ ನಿನ್ನೆ ರಾತ್ರಿ ವಿಮಾನ ಹತ್ತುವ ಮುನ್ನ ರಾಹುಲ್ ಗಾಂಧಿ ಸಿಎಂ ಹಾಗೂ ಪರಮೇಶ್ವರ್ ಬಳಿ ಹೇಳಿದ್ದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ.
Advertisement