ಬೆಂಗಳೂರು: ಶಾಂಗ್ರಿಲಾದಲ್ಲಿದ್ದ ಜೆಡಿಎಸ್ ನಾಯಕರು ಮತ್ತು ಈಗಲ್‍ಟನ್‍ನಲ್ಲಿದ್ದ ಕಾಂಗ್ರೆಸ್ ಶಾಸಕರು ರಾಜ್ಯದಿಂದ ಹೊರ ರಾಜ್ಯಕ್ಕೆ ಶಿಫ್ಟ್ ಆಗಿದ್ದಾರೆ. ಕ್ಷಣಕ್ಷಣಕ್ಕೂ ಪ್ಲಾನ್ ಚೇಂಜ್ ಆಗಿ ಇದೀಗ ಕಾಂಗ್ರೆಸ್ ಜೆಡಿಎಸ್ ಮೈತ್ರಿಮೇಳ ಹೈದರಾಬಾದ್‍ಗೆ ಶಿಫ್ಟ್ ಆಗಿದೆ.
ಆಪರೇಷನ್ ಕಮಲ ಭೀತಿಯಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ತಡರಾತ್ರಿ ಹೈದರಾಬಾದ್‍ಗೆ ಪ್ರಯಾಣಿಸಿದ್ದಾರೆ. ವಿಶೇಷ ವಿಮಾನಯಾನಕ್ಕೆ ಅನುಮತಿ ಸಿಗದಿದ್ದರಿಂದ ಶಾಸಕರು ಬಸ್‍ಗಳಲ್ಲಿ ಪ್ರಯಾಣ ಬೆಳೆಸಿದ್ದರು. ಅದರಲ್ಲೂ ಕಾಂಗ್ರೆಸ್ ಶಾಸಕರು ಪುದುಚೇರಿಗೆ, ಜೆಡಿಎಸ್ ಶಾಸಕರು ಕೊಚ್ಚಿಗೆ ಹೋಗೋದೆಂದು ಹೊರಟಿದ್ದರು. ಆದರೆ ಕೊನೆ ಕ್ಷಣದವರೆಗೆ ಎಲ್ಲಿಗೆ ಎಂದು ಹೇಳದ ಮುಖಂಡರು, ರಾತ್ರಿ 11 ಗಂಟೆಗೆ 4 ಪ್ರತ್ಯೇಕ ಬಸ್‍ಗಳಲ್ಲಿ ಬೆಂಗಳೂರು ಬಿಟ್ಟರು.
Advertisement
Advertisement
ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ, ಕಾಂಗ್ರೆಸ್‍ನವರು ಪುದುಚೇರಿ, ಜೆಡಿಎಸ್‍ನವರು ಕೊಚ್ಚಿಗೆ ಹೋಗುತ್ತಿದ್ದೇವೆ ಎಂದರು. ಆದರೆ ಬಸ್ ದೇವನಹಳ್ಳಿ ಏರ್‍ಪೋರ್ಟ್ ಟೋಲ್ ಬಳಿ ಬರುತ್ತಿದ್ದಂತೆ ಮತ್ತೆ ಪ್ಲಾನ್ ಬದಲಾಯಿತು. ಟೋಲ್ ಬಳಿ ಬರುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮೂರು ಸ್ಲೀಪರ್ ಕೋಚ್ ಬಸ್‍ಗೆ ಶಿಫ್ಟ್ ಆದ್ರು. ಕೊನೆಗೆ ಕಾಂಗ್ರೆಸ್- ಜೆಡಿಎಸ್ ಶಾಸಕರು ಹೈದರಾಬಾದ್‍ನತ್ತ ಪ್ರಯಾಣಿಸಿದ್ರು.
Advertisement
ನೂತನ ಮುಖ್ಯಮಂತ್ರಿಯಾಗಿರುವ ಖುಷಿಯಲಿರುವ ಬಿ.ಎಸ್ ಯಡಿಯೂರಪ್ಪ ಅವರಿಗೆ ಇಂದು ಅತ್ಯಂತ ಪ್ರಮುಖ ದಿನ. ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಮುಂದುವರಿಯಲಿದೆ.
Advertisement
We have to take some caution. To stop horse-trading, they(MLAs) are moving together. All MLAs(JD(S) & Congress) are travelling in the bus, they are going to stay in the same place: HD Kumaraswamy, JD(S) on Congress & JD(S) MLAs being shifted from Bengaluru #KarnatakaElections2018 pic.twitter.com/4he06AGwAk
— ANI (@ANI) May 17, 2018
JD(S) MLAs about to leave Shangri-La Hotel in #Bengaluru; JDS MLA Shivarame Gowda says, 'some of Congress and JD(S) MLAs are going to Kochi and some to Hyderabad' pic.twitter.com/ahqhK56gum
— ANI (@ANI) May 17, 2018
#CORRECTION in #VISUALS: Bus carrying Congress MLAs seen leaving Eagleton Resort in Bengaluru where the MLAs were staying. Congress' Ramalinga Reddy claimed that after the police was withdrawn from outside the resort,BJP came inside & offered money to the MLAs #KarnatakaElections pic.twitter.com/QsknkWvTMM
— ANI (@ANI) May 17, 2018