ಬೆಂಗಳೂರು: 2019ರ ಲೋಕಸಭಾ ಚುನಾವಣೆ ಮೈತ್ರಿ ಸೂತ್ರ ಸಿದ್ಧತೆಗೆ ಚಾಲನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಿದ್ಧತೆ ನಡೆಸಿವೆ. ಒಟ್ಟು 28ರಲ್ಲಿ ಕಾಂಗ್ರೆಸ್‍ಗೆ ಎಷ್ಟು..? ಜೆಡಿಎಸ್‍ಗೆ ಎಷ್ಟು ಕ್ಷೇತ್ರ..? ಅನ್ನೋ ಅಧಿಕಾರ ಹಂಚಿಕೆ ಬಳಿಕ ಕ್ಷೇತ್ರ ಹಂಚಿಕೆ ಬಗ್ಗೆಯೂ ಚೌಕಾಸಿ ಶುರುವಾಗಿದೆ.
28ರಲ್ಲಿ 10 ಕ್ಷೇತ್ರಗಳನ್ನು ನಮಗೆ ಕೊಡಿ- ಕಾಂಗ್ರೆಸ್‍ಗೆ ಜೆಡಿಎಸ್ ಬೇಡಿಕೆಯಿಟ್ಟಿದ್ದು, 8 ಕ್ಷೇತ್ರಗಳನ್ನಷ್ಟೇ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಾಗಿದೆಯೆಂಬ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
Advertisement
ಜೆಡಿಎಸ್ ಬೇಡಿಕೆ ಇಟ್ಟಿರುವ ಆ 10 ಕ್ಷೇತ್ರಗಳು ಯಾವುವು?
ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ತುಮಕೂರಿಗೆ ಪಟ್ಟು ಹಿಡಿದಿರುವ ಜೆಡಿಎಸ್, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಬೀದರ್, ಕೋಲಾರ ಕ್ಷೇತ್ರಕ್ಕೂ ಬೇಡಿಕೆಯಿಟ್ಟಿದೆ. ಆದ್ರೆ `ಕೈ’ಯಲ್ಲಿರುವ ಕೋಲಾರ, ಚಿಕ್ಕಬಳ್ಳಾಪುರ ಕೊಡಲು ದೋಸ್ತಿ ಒಪ್ತಿಲ್ಲ. ಚಿಕ್ಕಮಗಳೂರು-ಉಡುಪಿ ಬಿಟ್ಟು ಕೊಡ್ತೀವಿ, ಅಲ್ಲಿ ನಿಮ್ಮ ಕ್ಯಾಂಡಿಡೇಟ್ ನಿಲ್ಲಿಸಬಹುದೆಂದು ಕಾಂಗ್ರೆಸ್ ಹೇಳಿದೆ. ಆದ್ರೆ ನಮಗೆ ಚಿಕ್ಕಮಗಳೂರು-ಉಡುಪಿ ಬೇಡ ಅಂತ ಜೆಡಿಎಸ್ ಪಟ್ಟು ಹಿಡಿದಿದೆ ಎನ್ನಲಾಗಿದೆ.
Advertisement
ಕಾಂಗ್ರೆಸ್ ಸ್ಪರ್ಧೆ ಮಾಡಬಹುದಾದ 20 ಕ್ಷೇತ್ರಗಳು ಯಾವುವು..?
ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಧಾರವಾಡ, ಹಾವೇರಿ-ಗದಗ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಮಂಗಳೂರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ.