ಗೊಂದಲಕ್ಕಿಂತ ಸರ್ಕಾರ ವಿಸರ್ಜಿಸಿ ಎಲೆಕ್ಷನ್‍ಗೆ ಹೋಗೋದು ಒಳ್ಳೆದು: ಹೊರಟ್ಟಿ

Public TV
2 Min Read
Basavaraj Horatti H.D.Kumaraswamy

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಆಗಲಿದೆ ಎಂದು ಬಿಜೆಪಿ ನಾಯಕರು ಭವಿಷ್ಯ ನುಡಿಯುತ್ತಿದ್ದಾರೆ. ಇತ್ತ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಅವರು ಸರ್ಕಾರದ ವಿಸರ್ಜನೆ ಕುರಿತು ಹೇಳಿಕೆ ನೀಡಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು, ರಾಜ್ಯದಲ್ಲಿ ಮೂರು ಬಾರಿ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿದೆ. ಮೈತ್ರಿಯಲ್ಲಿನ ಗೊಂದಲಗಳಿಂದಲೇ ರಾಜ್ಯ ಸರ್ಕಾರ ಪತನವಾಗಿರುವುದು ಇತಿಹಾಸ. ಹೀಗಾಗಿ ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ಮುನ್ನಡೆಸಬೇಕು. ಇಲ್ಲದಿದ್ದಲ್ಲಿ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದೇ ಪರಿಹಾರ ಎಂದು ಬಸವರಾಜ್ ಹೊರಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

siddaramaiah kpl

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಆಪರೇಷನ್ ಕಮಲ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದ್ದು, ಇತ್ತ ಕಾಂಗ್ರೆಸ್ ನಾಯಕರು ಪದೇ ಪದೇ ಗೊಂದಲ ಹೇಳಿಕೆ ನೀಡುತ್ತಾರೆ. ಆದ್ದರಿಂದ ನಾನು ಈ ಹೇಳಿಕೆ ನೀಡಿದ್ದೇನೆ. ಗೊಂದಲದ ಸರ್ಕಾರದ ನಿರ್ಮಾಣ ಆಗುವ ಬದಲು ಉತ್ತಮ ಸರ್ಕಾರದ ರಚನೆ ಆಗುವುದು ಒಳಿತು ಎಂದು ಹೇಳಿದ್ದೇನೆ. ಸಿಎಂ ಕುಮಾರಸ್ವಾಮಿ ಅವರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡುವುದು ಸರಿಯಲ್ಲ. ಆದ್ದರಿಂದ ಎಲ್ಲಾ ಶಾಸಕರು ಅನಗತ್ಯವಾಗಿ ಗೊಂದಲ ನಿರ್ಮಿಸುವ ಬದಲು ಈ ರೀತಿ ನಡೆದುಕೊಳ್ಳಬಹುದು. ಮೈತ್ರಿ ಮುಂದುವರಿಯಬೇಕಾದರೆ ಇಂತಹ ಹೇಳಿಕೆಗಳು ಸರಿಯಲ್ಲ. ವಿನಾಕಾರಣ ಇಂತಹ ಹೇಳಿಕೆ ನೀಡುವುದು, ಜನರ ಮನಸ್ಸಿನಲ್ಲಿ ಸಿಎಂ ವಿರುದ್ಧ ಅಭಿಪ್ರಾಯ ಮೂಡಲು ಕಾರಣವಾಗುತ್ತದೆ. ಮೈತ್ರಿ ಸರ್ಕಾರದಲ್ಲಿ ನಮ್ಮ ಪಕ್ಷದ ಪರ ಯಾವುದೇ ರೀತಿಯ ಗೊಂದಲ ಇಲ್ಲ. ನನ್ನ ಹೇಳಿಕೆ ಸ್ಪಷ್ಟವಾಗಿದ್ದು, ಜನರಿಗೆ ಉತ್ತಮ ಸರ್ಕಾರ ನೀಡುವುದು ನಮ್ಮ ಉದ್ದೇಶ ಎಂದು ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

hdd 1

ಇತ್ತ ತಿರುಮಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಮುರಿದು ಬೀಳುತ್ತೆ ಎಂಬ ಗುಮಾನಿಗೆ ತೆರೆ ಎಳೆದಿದ್ದಾರೆ. ತಿಮ್ಮಪ್ಪನ ಸನ್ನಿಧಾನದಲ್ಲಿ ಮಾತಾಡಿದ ಅವರು ಯಾರು ಪ್ರಧಾನಿ ಆಗುತ್ತಾರೆ ಎಂದು ಗೊತ್ತಿಲ್ಲ. ಆದರೆ ನಾವು ಕಾಂಗ್ರೆಸ್‍ನಿಂದ ದೂರ ಆಗಲ್ಲ. ಫಲಿತಾಂಶಕ್ಕೆ ಕೆಲವೇ ದಿನ ಬಾಕಿ. ಫಲಿತಾಂಶ ಬಳಿಕ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದರು. ಇತ್ತ ಮೈತ್ರಿಕೂಟ ಕರ್ನಾಟಕದಲ್ಲಿ 18 ಸ್ಥಾನ ಗೆಲ್ಲುತ್ತೆವೆ. ನಾವು ರಾಹುಲ್ ಗಾಂಧಿಗೆ ಮಾತು ಕೊಟ್ಟಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *