ಕಾಂಗ್ರೆಸ್-ಜೆಡಿಎಸ್ ನಡುವೆ ಶುರುವಾಯ್ತು ರಿಯಲ್ ಫೈಟ್!

Public TV
1 Min Read
congress jds

ತುಮಕೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ದೋಸ್ತಿ ಸರ್ಕಾರದ ನಡುವೆ ರಿಯಲ್ ಜಗಳ ಶುರುವಾಗಿದೆ.

ಸ್ಥಳೀಯ ಸಂಸ್ಥೆಗಳ ಗದ್ದುಗೆ ಹಿಡಿಯಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸೆಣಸಾಟ ಜೋರಾಗಿದೆ. ಗುಬ್ಬಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಹಿಡಿತದಲ್ಲೇ ಇರಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸುವ ಮೂಲಕ ಡಿಸಿಎಂ ಪರಮೇಶ್ವರ್ ಅವರು ಸಣ್ಣ ಕೈಗಾರಿಕಾ ಸಚಿವ ಎಸ್ ಆರ್ ಶ್ರೀನಿವಾಸ್ ಗೆ ಟಾಂಗ್ ಕೊಟ್ಟಿದ್ದಾರೆ.

paramBig vb 29

ಗುಬ್ಬಿ ಸಚಿವ ಶ್ರೀನಿವಾಸರ ಸ್ವಕ್ಷೇತ್ರವಾಗಿದ್ದು, ಡಿಸಿಎಂ ಜಿ.ಪರಮೇಶ್ವರ್ ಪಟ್ಟಣ ಪಂಚಾಯತ್ ತಮ್ಮ ಸುಪರ್ದಿಗೆ ತರಲು ಪ್ಲಾನ್ ಮಾಡಿದ್ದಾರೆ. ಅಲ್ಲದೆ ದೋಸ್ತಿಯಿಂದಾಗಿ ತಮ್ಮ ಪಕ್ಷಕ್ಕೆ ತುಂಬಾ ಲಾಭವಾಗಿದೆ. ಯಾಕಂದ್ರೆ ನಾವು ಯಾರನ್ನ ವಿರೋಧ ಮಾಡಿದ್ದೇವೆಯೋ ಅವರ ಜೊತೆ ಈಗ ಸೇರಿಕೊಂಡಿದ್ದೇವೆ. ಹಾಗಾಗಿ ಈಗ ನಮಗೆ ಯಾವ ವಿರೋಧಿಗಳೇ ಇಲ್ಲ ಎಂದು ಡಿಸಿಎಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುಬ್ಬಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಹಿಡಿತದಲ್ಲಿ ಇರಲೇಬೇಕು ಆ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮ ಹಾಕಬೇಕು ಎಂದು ಕರೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *