ಚಾಮರಾಜನಗರ: ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು (Hanuru) ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿನಲ್ಲಿ ಎರಡು ಮನೆತನಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಿತ್ತು. ಆದರೆ ಎರಡು ಮನೆತನಗಳ ಫೈಟ್ ನಡುವೆಯೇ ಈಗ ಮೂರನೇಯವರ ಎಂಟ್ರಿಯಾಗಿದೆ. ಇದೀಗ ಹನೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಸಂಪ್ರದಾಯಿಕವಾಗಿ ದಿ. ರಾಜೂಗೌಡ ಹಾಗೂ ದಿ. ನಾಗಪ್ಪ ಮನೆತನಗಳು ಹಿಂದಿನಿಂದಲೂ ಚುನಾವಣೆಯಲ್ಲಿ ವಿರೋಧಿಗಳಾಗಿ ಹೋರಾಟ ನಡೆಸಿವೆ. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಈ ಎರಡು ಮನೆತನಕ್ಕೂ ಸಾಕಷ್ಟು ಫೈಟ್ ಕೊಟ್ಟಿದ್ದ ಜೆಡಿಎಸ್ ಅಭ್ಯರ್ಥಿ, ಈ ಬಾರಿ ಅಖಾಡದಲ್ಲಿರುವುದರಿಂದ ಹನೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆದಿದೆ. ಯಾರೇ ಗೆದ್ದರೂ ಕೂದಲೆಳೆ ಅಂತರ ಅನ್ನೋ ಲೆಕ್ಕಾಚಾರ ರಾಜಕೀಯ ಮೊಗಸಾಲೆಯಲ್ಲಿ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಇಂದು ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ- ಇಂದಿನಿಂದ ಎಣ್ಣೆ ಸಿಗಲ್ಲ
Advertisement
Advertisement
ಹನೂರು ಕ್ಷೇತ್ರದಲ್ಲಿ ಗೆದ್ದವರು
1957 – ಜಿ. ವೆಂಕಟೇಗೌಡ (ಪಕ್ಷೇತರ), 1962 – ಜಿ. ವೆಂಕಟೇಗೌಡ (ಪಕ್ಷೇತರ), 1967 – ಹೆಚ್. ನಾಗಪ್ಪ (ಕಾಂಗ್ರೆಸ್), 1972 – ರಾಜೇಗೌಡ (ಕಾಂಗ್ರೆಸ್), 1978 – ಜಿ. ರಾಜೂಗೌಡ (ಕಾಂಗ್ರೆಸ್), 1983 – ಕೆ.ಪಿ. ಶಾಂತಮೂರ್ತಿ (ಕಾಂಗ್ರೆಸ್), 1985 – ಜಿ. ರಾಜೂಗೌಡ (ಪಕ್ಷೇತರ), 1989 – ಜಿ ರಾಜೂಗೌಡ (ಕಾಂಗ್ರೆಸ್), 1994 – ಹೆಚ್. ನಾಗಪ್ಪ (ಜನತಾ ದಳ), 1999 – ಜಿ. ರಾಜೂಗೌಡ (ಕಾಂಗ್ರೆಸ್), 2004 – ಪರಿಮಳಾ ನಾಗಪ್ಪ (ಜೆಡಿಎಸ್), 2008 – ಆರ್. ನರೇಂದ್ರ (ಕಾಂಗ್ರೆಸ್), 2013 – ಆರ್. ನರೇಂದ್ರ (ಕಾಂಗ್ರೆಸ್), 2018 – ಆರ್. ನರೇಂದ್ರ (ಕಾಂಗ್ರೆಸ್).
Advertisement
2018 ರ ಚುನಾವಣಾ ಫಲಿತಾಂಶ ಏನಿತ್ತು?
ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಾಸಕ ಆರ್.ನರೇಂದ್ರ 3,700 ಮತಗಳ ಅಂತರದೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಇವರು ಒಟ್ಟು 60,444 ಮತ ಗಳಿಸಿದ್ದರು. ಬಿಜೆಪಿಯ ಪ್ರೀತನ್ ನಾಗಪ್ಪ ಅವರು 56,931 ಮತ ಪಡೆದು ಸೋಲನುಭವಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಆರ್.ಮಂಜುನಾಥ್ ಅವರು 44,957 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದರು. ಇದನ್ನೂ ಓದಿ: ಕೆ.ಆರ್.ನಗರದಲ್ಲಿ ಸಾ.ರಾ.ಮಹೇಶ್ ಪುತ್ರನ ಕಾರಿಗೆ ಕಲ್ಲೇಟು- ಬೆಂಗ್ಳೂರಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ
Advertisement
ಕಾಂಗ್ರೆಸ್ ಪ್ಲಸ್: ದಲಿತರು, ಲಂಬಾಣಿ, ಒಕ್ಕಲಿಗರ ಮತ ಬ್ಯಾಂಕ್ ಭದ್ರ. ಮನೆತನಕ್ಕೆ ಸಿಗುವ ಸಾಂಪ್ರದಾಯಿಕ ಮತ ಬುಟ್ಟಿ ಉಳಿಸಿಕೊಂಡಿರುವುದು. ಕಾಂಗ್ರೆಸ್ ಸರ್ಕಾರ ಬಂದರೆ ಮಂತ್ರಿ ಯೋಗ. ಮಲೆ ಮಹದೇಶ್ವರ ಹುಲಿ ಯೋಜನೆ ಘೋಷಣೆಗೆ ಪ್ರಬಲವಾಗಿ ವಿರೋಧಿಸಿದ್ದು ಪ್ಲಸ್ ಆಗುವ ಸಾಧ್ಯತೆ ಇದೆ.
ಮೈನಸ್: ಕ್ಷೇತ್ರ ವಿಸ್ತೀರ್ಣ ದೊಡ್ಡದಾಗಿದ್ದು ಮೂಲ ಸೌಕರ್ಯ, ರಸ್ತೆ ಸಮಸ್ಯೆ. ಕಾಡಂಚಿನ ಪ್ರದೇಶಗಳಲ್ಲಿ ಆಸ್ಪತ್ರೆ, ರಸ್ತೆ ಸಮಸ್ಯೆ. ಸಮರ್ಪಕವಾದ ರೀತಿಯಲ್ಲಿ ಅಭಿವೃದ್ಧಿ ಮಾಡಿಲ್ಲವೆಂಬ ಆರೋಪವಿದೆ.
ಬಿಜೆಪಿ ಪ್ಲಸ್: ಲಿಂಗಾಯತ ಪ್ರಾಬಲ್ಯ ಕ್ಷೇತ್ರ, ಲಿಂಗಾಯತ ಮತಗಳು ಬೀಳುವ ನಿರೀಕ್ಷೆ. ನಾಗಪ್ಪ ಕುಟುಂಬಕ್ಕೆ ಈ ಬಾರಿ ಅವಕಾಶ ಕೊಡಬೇಕೆಂಬ ಮಾತು. ಬಿಜೆಪಿ ಪಕ್ಷದ ಹೈಕಮಾಂಡ್ ಬೆನ್ನಿಗೆ ನಿಂತಿದೆ.
ಮೈನಸ್: ಸಾಂಪ್ರದಾಯಿಕ ಮತಗಳು ಒಡೆದಿರುವುದು. ಟಿಕೆಟ್ ವಂಚಿತರಿಂದ ಒಳೇಟು ಸಾಧ್ಯತೆ. ಸ್ಥಳೀಯ ಮುಖಂಡರಲ್ಲಿ ಇಲ್ಲದ ಒಗ್ಗಟ್ಟು, ಪರಿಣಾಮಕಾರಿಯಲ್ಲದ ಪ್ರಚಾರ. ಚುನಾವಣೆ ಸಮೀಪ ಜನರ ಹತ್ತಿರಕ್ಕೆ ಧಾವಿಸಿದ್ದಾರೆಂಬ ಆರೋಪ. ಇದನ್ನೂ ಓದಿ: ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ
ಜೆಡಿಎಸ್ ಪ್ಲಸ್: ಹೊಸ ಮುಖ, ಕಳೆದ 9 ವರ್ಷಗಳಿಂದ ಕ್ಷೇತ್ರದಲ್ಲಿ ನಿಕಟ ಸಂಪರ್ಕ. ಕೊರೊನಾ ಅವಧಿಯಲ್ಲಿ ಸಹಾಯ ಹಸ್ತ. ಅತ್ಯಲ್ಪ ಅವಧಿಯಲ್ಲಿ ಮತ ಬ್ಯಾಂಕ್ ಭದ್ರ ಮಾಡಿರುವುದು. ಕಳೆದ ಬಾರಿ ಕಡೇ ಕ್ಷಣದಲ್ಲಿ ಅಖಾಡಕ್ಕೆ ಧುಮುಕಿ ಕಡಿಮೆ ಅಂತರದಲ್ಲಿ ಸೋತಿದ್ದು.
ಮೈನಸ್: ಎರಡು ಕುಟುಂಬಗಳ ನಡುವಿನ ಪ್ರತಿಷ್ಠೆಯಾಗಿರುವ ಕ್ಷೇತ್ರದಲ್ಲಿ ಗೆಲ್ಲುವ ಸವಾಲು. ಕುರುಬ ಸಮುದಾಯದ ಅಭ್ಯರ್ಥಿಯಾದರೂ ಕುರುಬ ಮತ ಕಾಂಗ್ರೆಸ್‌ಗೆ ಹೋಗುವ ಭೀತಿ. ಜೆಡಿಎಸ್ ಪಕ್ಷದ ಮತಬ್ಯಾಂಕ್ ಕ್ಷೇತ್ರದಲ್ಲಿ ಇಲ್ಲದಿರೋದು.
ಜಾತಿವಾರು ಲೆಕ್ಕಾಚಾರ ಏನು?
ಕ್ಷೇತ್ರದಲ್ಲಿ ಒಟ್ಟು 2,21,557 ಮತದಾರರಿದ್ದಾರೆ. ಪುರುಷ ಮತದಾರರು – 1,11,960 ಹಾಗೂ ಮಹಿಳೆಯರು – 1,09,581 ಇದ್ದಾರೆ.
ವೀರಶೈವ – 57,000
ದಲಿತ – 45,000
ನಾಯಕ – 9,000
ಉಪ್ಪಾರ – 26,000
ಕುರುಬರು – 18,000
ಮುಸ್ಲಿಂ – 6,000
ಕ್ರಿಶ್ಚಿಯನ್ – 15,000
ಇತರೆ – 20,000
ಒಕ್ಕಲಿಗರು – 11,000
ಪರಿಶಿಷ್ಟ ಜಾತಿ, ಲಿಂಗಾಯತರು, ಕ್ರಿಶ್ಚಿಯನ್ ಹಾಗೂ ಕುರುಬರು, ಗಿರಿಜನರು, ನಾಯಕರು, ಮುಸ್ಲಿಮರು, ಒಕ್ಕಲಿಗ ಹಾಗೂ ಲಂಬಾಣಿ, ಪಡಿಯಚ್ಚಿ ಸಮುದಾಯ ಮತದಾರರು ಮೂರು ಪಾರ್ಟಿಗಳ ಮತಬ್ಯಾಂಕ್‌ಗಳಾಗಿದ್ದಾರೆ.
ಹನೂರು ಕದನ ಕಣ ತ್ರಿಕೋನ ಸ್ಪರ್ಧೆಯಿಂದ ಕೂಡಿದೆ. ಎಲ್ಲರೂ ಕೂಡ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಹೈಕಮಾಂಡ್ ಹನೂರು ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿ ಒಗ್ಗಟ್ಟಿನಿಂದ ಚುನಾವಣೆ ನಡೆಸುವಂತೆ ಸೂಚಿಸಿದೆ. ಈ ಬಾರಿ ಗೆದ್ದೆ ಗೆಲ್ತೀನಿ ಅನ್ನೋ ವಿಶ್ವಾಸ ಜೆಡಿಎಸ್ ಅಭ್ಯರ್ಥಿಯದ್ದಾಗಿದೆ. ಮತ್ತೊಂದೆಡೆ ಈಗಾಗ್ಲೇ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯಭೇರಿ ಬಾರಿಸಿರುವ ಶಾಸಕ ನರೇಂದ್ರ ಈ ಬಾರಿ ಗೆದ್ರೆ ಮಂತ್ರಿಯಾಗ್ತಾರೆ, ಕ್ಷೇತ್ರದ ಅಭಿವೃದ್ಧಿ ಆಗುತ್ತೆ. ಅವಕಾಶ ಮಿಸ್ ಮಾಡ್ಕೊಬೇಡಿ ಅಂತಾ ಪ್ರಚಾರ ನಡೆಸುತ್ತಿದ್ದು, ಎರಡು ಮನೆತನದಲ್ಲಿ ಒಬ್ಬರಿಗೆ ಮತದಾರ ಮತ್ತೊಮ್ಮೆ ಮಣೆ ಹಾಕ್ತಾನಾ ಅಥವಾ ಮೂರನೇ ವ್ಯಕ್ತಿ ಗೆದ್ದು ಬರ್ತಾನಾ ಎಂಬುದನ್ನ ಕಾದುನೋಡಬೇಕಿದೆ.