Connect with us

Bengaluru City

ಸಾಂದರ್ಭಿಕ ಕೂಸು ಕುಮಾರಸ್ವಾಮಿಗೆ ಇಷ್ಟು ಸೊಕ್ಕಾದ್ರೆ, 21 ರಾಜ್ಯ ಗೆದ್ದಿರೋ ನಮಗೆಷ್ಟು ಸೊಕ್ಕಿರಬೇಡ: ಸಿ.ಟಿ.ರವಿ

Published

on

ಬೆಂಗಳೂರು: ಸಾಂದರ್ಭಿಕ ಶಿಶುವಾಗಿರೋ ಕುಮಾರಸ್ವಾಮಿಗೆ ಅಷ್ಟು ಸೊಕ್ಕಾದ್ರೆ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರೋ ನಮಗೆಷ್ಟು ಸೊಕ್ಕು ಇರಬೇಡ. ಇಷ್ಟೊಂದು ಸೊಕ್ಕು ಒಳ್ಳೆಯದಲ್ಲ ಅಂತಾ ಬಿಜೆಪಿ ನಾಯಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆ ಈಶ್ವರಪ್ಪನವರು ಇದು ನಾಲ್ಕು ಕಾಲು, ಎರಡು ತಲೆ ಇರೋ ವಿಚಿತ್ರ ಸರ್ಕಾರ ಅಂತಾ ಹೇಳಿದ್ರು. ವಿಚಿತ್ರವಾಗಿ ಹುಟ್ಟಿರುವ ಮಗುವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆದರೆ ಯಾರಿಂದಲೂ ಆ ವಿಚಿತ್ರ ಮಗುವಿಗೆ ಪ್ರೀತಿ ಸಿಗಲ್ಲ ಮತ್ತು ಅದು ಬಹಳ ದಿನ ಬದುಕಲ್ಲ ಅಂತಾ ಮೈತ್ರಿ ಸರ್ಕಾರದ ಭವಿಷ್ಯವನ್ನು ನುಡಿದ್ರು.

ಜೆಡಿಎಸ್ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳುತ್ತೆ ಅಂತಾ ಗೊತ್ತಿದ್ರೆ ಇನ್ನು 10 ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು. ಜನ ಕಾಂಗ್ರೆಸ್ ವಿರೋಧಿಸಿ ಜೆಡಿಎಸ್ ಗೆ ಮತ ಹಾಕಿದ್ರು. ಪದಗ್ರಹಣ ಕಾರ್ಯಕ್ರಮ ವೇಳೆ ಸೇರಿದ್ದು ಎಲ್ಲ ಚಿಕ್ಕ ಪಕ್ಷಗಳು. ಈ ಗ್ಯಾಂಗ್ ಮೋದಿ ಅವರನ್ನು ಹೆದರಿಸಲು ಸೇರಿತ್ತು. ಆದ್ರೆ ಈ ಗ್ಯಾಂಗ್ ನಿಂದ ಮೋದಿಯವರನ್ನು ಏನೂ ಮಾಡಲಿಕ್ಕೆ ಸಾಧ್ಯವಿಲ್ಲ ಅಂತಾ ಸಿ.ಟಿ.ರವಿ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

ಇಂದು ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಪರಾಜಿತ ಎಲ್ಲ ಅಭ್ಯರ್ಥಿಗಳು ಭಾಗಿಯಾಗಿದ್ರು.

Click to comment

Leave a Reply

Your email address will not be published. Required fields are marked *