– ಹಳೆಯ ಅಂಕಿ ಅಂಶ ವೆಬ್‌ಸೈಟ್‌ನಲ್ಲಿ ಪ್ರಕಟ: ಜೈರಾಮ್ ರಮೇಶ್
ನವದೆಹಲಿ: ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಹರಿಯಾಣದಲ್ಲಿ ಬಿಜೆಪಿ 47 ಸ್ಥಾನಗಳ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ 33 ಸ್ಥಾನಗಳ ಮುನ್ನಡೆಯಲ್ಲಿದೆ. ಈ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh), ಫಲಿತಾಂಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಜೈರಾಮ್ ರಮೇಶ್, ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಆಕ್ರೋಶ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ (EC website) ಲೋಪವಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಕ್ಫ್ ಆಸ್ತಿ ದೇವರ ಆಸ್ತಿ, ಕಬಳಿಕೆ ಆಗಬಾರದು ರಕ್ಷಣೆ ಮಾಡಬೇಕು; ಸಚಿವ ಜಮೀರ್ ಕರೆ
Advertisement
#WATCH | #HaryanaAssemblyPolls2024 | Delhi: Congress General Secretary in-charge Communications, Jairam Ramesh says, “We are filing a memorandum in the next 5-7 minutes. We are lodging a complaint. We hope that the EC will answer our questions. The results of 10-11 rounds are… pic.twitter.com/yCQwNJ9CG0
— ANI (@ANI) October 8, 2024
Advertisement
ಈಗಾಗಲೇ 10-11ನೇ ಸುತ್ತಿನ ಫಲಿತಾಂಶಗಳು ಹೊರಬಿದ್ದಿವೆ. ಆದ್ರೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಕೇವಲ 4-5 ಸುತ್ತುಗಳ ಫಲಿತಾಂಶ ಮಾತ್ರ ತೋರಿಸಲಾಗುತ್ತಿದೆ. ಲೋಕಸಭೆ ಮಾದರಿಯಲ್ಲಿ ಹಳೆಯ ಮತ್ತಯ ದಾರಿ ತಪ್ಪಿಸುವ ಫಲಿತಾಂಶ ತೋರಿಸಲಾಗುತ್ತಿದೆ. ಇದು ಆಡಳಿತದ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಈ ಬಗ್ಗೆ ಜ್ಞಾಪಕ ಪತ್ರ ಸಲ್ಲಿಸುತ್ತಿದ್ದೇವೆ. ಆಯೋಗಕ್ಕೂ ದೂರು ಸಲ್ಲಿಸುತ್ತೇವೆ, ಚುನಾವಣಾ ಆಯೋಗ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
Advertisement
Advertisement
ಅಲ್ಲದೇ ಹಿರಿಯ ನಾಯಕ ಪವನ್ ಖೇರಾ ಸಹ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಚುನಾವಣಾ ಟ್ರೆಂಡ್‌ಗಳನ್ನು ನವೀಕರಿಸುವಲ್ಲಿ ಆಯೋಗ ವಿಳಂಬ ಮಾಡುತ್ತಿದೆ. ಆಡಳಿತದ ಮೇಲೆ ಪ್ರಭಾವ ಬೀರಲು ಹಳೆಯ ಡೇಟಾವನ್ನೇ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲಂಚದ ಆರೋಪ – ರಾಜ್ಯಾದ್ಯಂತ ವಿವಿಧೆಡೆ RTO ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ
90 ಸದಸ್ಯ ಬಲದ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದೆ.