ಯಾದಗಿರಿ: ಮಾಜಿ ಸಚಿವ ಜಿಟಿ ದೇವೆಗೌಡ ಬಿಜೆಪಿ ಸೇರುತ್ತಾರೆ ಎನ್ನುವ ಹೊತ್ತಿನಲ್ಲಿ ಮತ್ತಷ್ಟು ಜನ ಬಿಜೆಪಿ ಬರೋದು ಪಕ್ಕಾ ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವೇದಿಕೆಯಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದು ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ.
Advertisement
ಯಾದಗಿರಿಯಲ್ಲಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣದ ವೇಳೆ ಭಾಷಣ ಮಾಡಿದ ನಳಿನ್ ಕುಮಾರ್ ಕಟೀಲ್ ಅವರು, ಬಿಜೆಪಿ ಬೆಳಗುವ ಪಾರ್ಟಿ ಕಾಂಗ್ರೆಸ್ ಮುಳುಗುವ ಪಾರ್ಟಿ. ಬಿಜೆಪಿ ತುಂಬಿದ ಹಡಗು, ಕಾಂಗ್ರೆಸ್ ಮುಳುಗುವ ಹಡಗು, ಕಾಂಗ್ರೆಸ್ಸಿನ ಮುಳುಗುವ ಹಡಗಿನಲ್ಲಿ ಯಾರು ಹತ್ತುವುದಿಲ್ಲ, ಆದರೆ ಬಿಜೆಪಿ ತುಂಬಿದ ಹಡಗು ಇನ್ನಷ್ಟು ಮಂದಿ ಹತ್ತುತ್ತಾರೆ ಎಂದು ಕೈಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಆಪರೇಷನ್ ಕಮಲವನ್ನ ನಿಲ್ಲಿಸಿದ್ದೇವೆ, ಆದ್ರೆ ಬಿಜೆಪಿ ಮನೆ ಬಾಗಿಲು ಓಪನ್ ಇದೆ: ಕಟೀಲ್
Advertisement
Advertisement
ನಮಗೆ ಆಪರೇಷನ್ ಕಮಲದ ಅವಶ್ಯಕತೆ ಇಲ್ಲ. ತುಂಬಿ ತುಳುಕುತ್ತಿರುವ ಹಡಗಿಗೆ ಬಹಳ ಜನ ಬರುತ್ತಾ ಇದ್ದಾರೆ ಕಾದು ನೋಡಿ. ಈ ಸರ್ಕಾರ ಕೆಲವು ದಿನಗಳಲ್ಲಿ ಬಿಳುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಸರ್ಕಾರ ಬಿಳಲ್ಲ, ಮೂರು ವರ್ಷ ಬಿಎಸ್‍ವೈ ಅವರೇ ಸಿಎಂ ಆಗಿರುತ್ತಾರೆ. ಹತ್ತಾರು ಪಾರ್ಟಿಯವರು ಬಿಜೆಪಿ ಬರುತ್ತಾರೆ ಎಂದು ಕಟೀಲ್ ಹೊಸ ಬಾಂಬ್ ಸಿಡಿಸಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಸಿದ್ರಾಮಣ್ಣ ಸಹ ಟೀಕೆ ಮಾಡಿದವ್ರನ್ನ ಬಂಧಿಸಿದ್ದಾರೆ: ಕಟೀಲ್
Advertisement
ಈ ಮೊದಲು ನಗರದ ಸರ್ಕಿಟ್ ಹೌಸ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಟಿ ದೇವೇಗೌಡ ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತವಿದೆ. ಯಾರೇ ರಾಜೀನಾಮೆ ಕೊಟ್ಟು ಬಂದರು ಸ್ವಾಗತಿಸುತ್ತೇವೆ. ಆಪರೇಷನ್ ಕಮಲವನ್ನ ನಾವು ನಿಲ್ಲಿಸಿದ್ದೇವೆ. ಆದರೆ ಬಿಜೆಪಿ ಮನೆ ಬಾಗಿಲು ಓಪನ್ ಇದೆ ಎಂದಿದ್ದರು.
ರಾಜ್ಯ ಬಿಜೆಪಿ ಸರ್ಕಾರ ಜನಾದೇಶದ ಅಲ್ಲದ ಸರ್ಕಾರ ಎನ್ನುವ ಸಿದ್ದು ಹೇಳಿಕೆಗೆ ಟಾಂಗ್ ನೀಡಿದ ಕಟೀಲ್, ಕಾಂಗ್ರೆಸ್ ಹಾಗೂ ಜೆಡಿಎಸ್‍ಗಿಂತ ಹೆಚ್ಚು ಜನಾದೇಶ ಬಿಜೆಪಿಗಿದೆ ಎಂದು ಕುಟುಕಿದರು. ಇದೇ ವೇಳೆಯಲ್ಲಿ ಕುಮಾರಸ್ವಾಮಿ, ಉಮೇಶ್ ಕತ್ತಿ ಭೇಟಿ ವಿಚಾರ ಎಲ್ಲ ಉಹಾಪೋಹಗಳು, ಸರ್ಕಾರ ಮೂರು ವರ್ಷ ಸುಭದ್ರವಾಗಿದೆ ಎಂದು ಹೇಳಿದ್ದರು.
ದೇವೇಗೌಡ ಚಾಣಾಕ್ಷ ರಾಜಕಾರಣಿ, ಅವರು ದಿನಕ್ಕೊಂದು ಮಾತಾಡುತ್ತಾರೆ. ಅವರ ಶಾಸಕರು ಕಾಲು ಹೊರಗಿಟ್ಟರೆ, ಪಕ್ಷ ಒಡೆಯುತ್ತೆ ಎನ್ನುತ್ತಾರೆ. ಪಾರ್ಟಿಯಲ್ಲಿ ಶಾಸಕರನ್ನ ಹಿಡಿದುಕೊಂಡಿದ್ರೆ ಸರ್ಕಾರ ಉಳಿಯುತ್ತೆ ಎಂದು ನಳಿನ್ ಕುಮಾರ್ ವ್ಯಂಗ್ಯವಾಡಿದ್ದರು.