ಶಿವಮೊಗ್ಗ: ಕಾಂಗ್ರೆಸ್ (Congress) ರೌಡಿಗಳ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತಿಹಾರ್ ಜೈಲಿಗೆ ಹೋಗಿ ಬಂದವರು ಎಂದು ಕಾಂಗ್ರೆಸ್‌ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ತಿರುಗೇಟು ನೀಡಿದರು.
ರೌಡಿಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಕಾಂಗ್ರೆಸ್ ಲೇವಡಿ ಮಾಡಿತ್ತು. ಬಿಜೆಪಿ (BJP) ರೌಡಿಗಳ ಪಕ್ಷ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿತ್ತು. ಇದಕ್ಕೆ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ನಮ್ಮದು ರೌಡಿಗಳ ಪಕ್ಷ ಅಲ್ಲ. ಸುಸಂಸ್ಕೃತರ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಿಹಾರ್ ಜೈಲಿನಲ್ಲಿ ಇದ್ದು ಬಂದವರು. ಕಾಂಗ್ರೆಸ್‌ನ ಯುವ ಮೋರ್ಚಾ ಅಧ್ಯಕ್ಷ ನಲಪಾಡ್ ಬಾರ್‌ನಲ್ಲಿ ಹೊಡೆದಾಡಿ ಜೈಲಿಗೆ ಹೋಗಿ ಬಂದವನು ಎಂದು ಕಾಂಗ್ರೆಸ್‌ಗೆ ಠಕ್ಕರ್ ಕೊಟ್ಟರು. ಇದನ್ನೂ ಓದಿ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ: ಕಾಂಗ್ರೆಸ್
Advertisement
Advertisement
ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಾತನಾಡಿ, ಕರ್ನಾಟಕದ ಒಂದಿಂಚು ಭೂಮಿ ಸಹ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ರಾಜ್ಯದ ಆರೂವರೆ ಕೋಟಿ ಜನ ಒಗ್ಗಟ್ಟಾಗಿದ್ದಾರೆ. ಅಲ್ಲಿ ಕುಡಿಯುವುದಕ್ಕೆ ನೀರು ಸಹ ಇಲ್ಲ. ಗಡಿಭಾಗದ ಜನ ಕರ್ನಾಟಕಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ತಿಳಿಸಿದರು.
Advertisement
Advertisement
ಡಿಕೆಶಿ, ಸಿದ್ದು ಒಳಜಗಳ ಬಗ್ಗೆ ಪ್ರತಿಕ್ರಿಯಿಸಿ, ಡಿಕೆಶಿ ಒಳಗೊಳಗೆ ದ್ವೇಷ ಮಾಡಿ, ಮೇಲೆ ಚನ್ನಾಗಿ ಮಾತನಾಡುತ್ತಾರೆ. ಇಬ್ಬರು ಒಬ್ಬರಿಗೊಬ್ಬರು ಚಾಕು ಹಾಕಿಕೊಳ್ಳುತ್ತಾರೆ. ಹಿಂದೂ ಸಮಾಜ ಬಿಜೆಪಿ ಪರವಾಗಿದೆ. ಈಗಾಗಿಯೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ತಲೆ ಹೊಡೆದವರು, ಮನೆ ಹಾಳು ಮಾಡೋರನ್ನ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ – HDK
ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ಸಂಬಂಧ ಸಿ.ಎಂ.ಇಬ್ರಾಹಿಂ ಹೇಳಿಕೆ ಕುರಿತು ಮಾತನಾಡಿ, ಸಿ.ಎಂ.ಇಬ್ರಾಹಿಂ ಅವರಿಗೆ ಬೇರೆ ಉದ್ಯೋಗ ಇಲ್ಲ. ರಸ್ತೆಯಲ್ಲಿ ಹೋಗುವ ನಾಯಿ ಕೂಡಾ ಜೆಡಿಎಸ್‌ಗೆ ಹೋಗುವುದಿಲ್ಲ. ಇನ್ನು ರಮೇಶ್ ಜಾರಕಿಹೊಳಿ ಅವರು ಸರ್ಕಾರ ತಂದವರು. ಅವರು ಯಾಕ್ರೀ ಬಿಜೆಪಿ ಬಿಟ್ಟು ಹೋಗ್ತಾರೆ. ಏನು ಇಲ್ಲದಿರುವ ಜೆಡಿಎಸ್‌ಗೆ ಹೋಗ್ತಾರಾ? ಯಾವ ಕಾರಣಕ್ಕೂ ಹೋಗುವ ಪ್ರಶ್ನೆ ಉದ್ಬವವಾಗುವುದಿಲ್ಲ. ಇಬ್ರಾಹಿಂಗೆ ತಾನಂತು ಹೋಗಿ ಆಗಿದೆ. ತಾನು ಹೋಗಿರುವ ಒಂದೇ ಕಾರಣಕ್ಕೆ ಅವರು ಬರುತ್ತಾರೆ, ಇವರು ಬರುತ್ತಾರೆ ಅಂತಾ ಹೇಳ್ತಿದ್ದಾರೆ. ಇಬ್ರಾಹಿಂ ಅರ್ಥ ಇಲ್ಲದೇ ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.