– ದೇಶದ ಜನರ ರಕ್ಷಣೆಗೆ ಯಾವ ಸವಾಲಿಗೂ ಸಿದ್ಧ
– ಕಾಂಗ್ರೆಸ್ ಟೀಕೆ ಸಹಿಸಿಕೊಳ್ಳುವ ಶಕ್ತಿಯನ್ನ ಶ್ರೀಕಂಠೇಶ್ವರ ನೀಡಿದ್ದಾನೆ
– ರಾಜ್ಯದ ಅಭಿವೃದ್ಧಿಗಾಗಿ ಮತ ನೀಡಿ
ಮೈಸೂರು: ಕರ್ನಾಟಕ (Karnataka) ಭಾರತದ (India) ಭಾಗ ಅಲ್ಲ ಅಂತ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಕರ್ನಾಟಕವನ್ನು ಭಾರತದಿಂದ ಬೇರೆ ಮಾಡುವ ಹುನ್ನಾರವನ್ನು ಕಾಂಗ್ರೆಸ್ ನಡೆಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಆರೋಪಿಸಿದರು.
Advertisement
ನಂಜನಗೂಡಿನಲ್ಲಿ (Nanjanagudu) ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಪ್ರತಿಯೊಬ್ಬ ಕನ್ನಡಿಗರು ಗಂಭೀರವಾಗಿ ಕೇಳಬೇಕು. ಕರ್ನಾಟಕ ಭಾರತದ ಭಾಗ ಅಲ್ಲ ಅಂತ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ಬೇರೆ ಮಾಡಲು ಹುನ್ನಾರ ನಡೆಸಿದೆ. ಕಾಂಗ್ರೆಸ್ ಈ ರೀತಿ ಯೋಚನೆ ಮಾಡುತ್ತದೆ ಅಂತ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಕನ್ನಡಿಗರ ಸ್ವಾತಂತ್ರ‍್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಶ್ರೀಕಂಠೇಶ್ವರನ ದರ್ಶನ ಪಡೆದು ಚುನಾವಣಾ ಪ್ರಚಾರ ಮುಗಿಸಿದ ಮೋದಿ
Advertisement
Advertisement
ರಾಷ್ಟ್ರಕವಿ ಕುವೆಂಪು ಅವರೇ ಹೇಳಿದ್ದಾರೆ. ಜಯ ಭಾರತ ಜನನಿಯ ತನುಜಾತೆ ಎಂದಿದ್ದಾರೆ. ಕರ್ನಾಟಕ ಪ್ರತಿಯೊಬ್ಬರಿಗೆ ತಾಯಿ ಸಮಾನ. ಭಾರತಮಾತೆಯ ಮಗಳಾಗಿ ವರ್ಣಿಸಲಾಗಿದೆ. ನಾನು ಪ್ರತಿಯೊಬ್ಬ ಕನ್ನಡಿಗರ ಭಾವನೆ ಅರ್ಥ ಮಾಡಿಕೊಂಡಿದ್ದೇನೆ. ಇಲ್ಲಿನ ಸಂಸ್ಕೃತಿಯನ್ನು ಅಪಮಾನಿಸುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ. ರಾಜ್ಯ ರಾಜ್ಯದ ನಡುವೆ ಕಾಂಗ್ರೆಸ್ ಗಲಾಟೆ ಮಾಡಿಸಿದೆ. ಈ ರೀತಿ ಮಾಡಿದಾಗಲೆಲ್ಲಾ ಜನ ಕಾಂಗ್ರೆಸ್‌ಗೆ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಪೊಲಿಟಿಕಲ್ ಆಕ್ಸಿಜನ್‌ಗಾಗಿ ಕರ್ನಾಟಕದಲ್ಲಿ ಪ್ರಯತ್ನ ಮಾಡುತ್ತಿದೆ. ಆದರೆ ಕಾಂಗ್ರೆಸ್ ನಡವಳಿಕೆಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಇದಕ್ಕೆ ಉತ್ತರ ಕಾಂಗ್ರೆಸ್ ಪಕ್ಷಕ್ಕೆ ಮೇ 10ಕ್ಕೆ ಸಿಗುತ್ತದೆ ಎಂದು ಹೇಳಿದರು.
Advertisement
ನಮ್ಮ ದೇಶದ ಜನರ ರಕ್ಷಣೆಗೆ ಮೋದಿ ಯಾವ ಸವಾಲಿಗೂ ಸಿದ್ಧ. ಭಯೋತ್ಪಾದಕರ ಬೆಂಬಲಕ್ಕೆ ಕಾಂಗ್ರೆಸ್ ಸದಾ ನಿಲ್ಲುತ್ತದೆ. ಇದನ್ನು ನಾವು ಕೇರಳದಲ್ಲಿ ನೋಡಿದ್ದೇವೆ. ಕರ್ನಾಟಕದಲ್ಲೂ ನೋಡಿದ್ದೇವೆ. ಇದೆಲ್ಲಾ ಕಾರಣದಿಂದ ಮತ ಹಾಕುವಾಗ ನೆನಪಿಡಿ. ಎಲ್ಲಿ ಆತಂಕವಾದ ಅಪರಾಧಕ್ಕೆ ಪ್ರೋತ್ಸಾಹ ಸಿಗುತ್ತೋ ಅಲ್ಲಿ ಸರ್ವನಾಶವಾಗುತ್ತದೆ. ಬಂಡವಾಳ ಬರುವುದು ಕಾನೂನು ಸುವ್ಯವಸ್ಥೆ ಇರುವ ಕಡೆಗೆ. ಇಂತಹ ವಿಚಾರವನ್ನು ದೇಶ ಕ್ಷಮಿಸುವುದಿಲ್ಲ. ದೇಶದ ರಾಯಲ್ ಫ್ಯಾಮಿಲಿ ರಾಜಕೀಯಕ್ಕಾಗಿ ವಿದೇಶಿ ಶಕ್ತಿಗಳನ್ನು ದೇಶದ ವಿಚಾರದಲ್ಲಿ ಎಳೆದು ತರುತ್ತಿದ್ದಾರೆ. ವಿದೇಶಿ ಡಿಪ್ಲೋಮೆಟ್‌ಗಳ ಜೊತೆ ಗುಟ್ಟಾಗಿ ಭೇಟಿ ಮಾಡುತ್ತಾರೆ. ಇದರಿಂದ ಭಾರತಕ್ಕೆ ಅವಮಾನವಾಗುತ್ತಿದೆ. ಆದರೆ ಇದರಿಂದ ಅವರಿಗೆ ಯಾವುದೇ ಪಶ್ಚಾತ್ತಾಪ ಆಗುತಿಲ್ಲ. ಮರ್ಯಾದೆ ಬಿಟ್ಟು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಇದು ಕೇವಲ ಕರ್ನಾಟಕದ ವಿಚಾರವಲ್ಲ ದೇಶದ ವಿಚಾರ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಕಿಚ್ಚ ಸುದೀಪ್ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಟ್ಟು ಹಾಕ್ತಿದೆ: ಪ್ರತಾಪ್ ಸಿಂಹ
ಕರ್ನಾಟಕವನ್ನು ನಂಬರ್ 1 ಮಾಡಲು ಬಿಜೆಪಿಗೆ ಮತ ನೀಡಿ. ರ‍್ಯಾಲಿ ನಂತರ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ಅಲ್ಲಿಯೂ ನಿಮಗೆ ಒಳ್ಳೆಯದಕ್ಕೆ ಪ್ರಾರ್ಥನೆ ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ನನ್ನ ಬಗ್ಗೆ ಸಾಕಷ್ಟು ಟೀಕೆ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಟೀಕೆಗಳನ್ನು ಸಹಿಸುವ ಶಕ್ತಿ ಶ್ರೀಕಂಠೇಶ್ವರನಿಂದ ಸಿಕ್ಕಿದೆ ಎಂದ ಮೋದಿ ಇದೇ ವೇಳೆ, ಶಿವ ವಿಷ ಕುಡಿದ ವಿಷಕಂಠನಾದ ವಿಚಾರವನ್ನು ಪ್ರಸ್ತಾಪಿಸಿದರು.
ಇಡೀ ರಾಜ್ಯದ ಜನರಿಗೆ ಹೃದಯಪೂರ್ವಕ ಕೃತಜ್ಞತೆಗಳು. ಪ್ರಜಾಪ್ರಭುತ್ವದ ಹಬ್ಬದಲ್ಲಿ ನಾವೆಲ್ಲರೂ ಭಾಗಿಯಾಗಬೇಕು. ನಾನು ದೆಹಲಿಗೆ ಹೊರಡುತ್ತೇನೆ. ನೀವೇ ಮುಂದೆ ನೋಡಿಕೊಳ್ಳಿ. ಈ ಹಬ್ಬ ಪ್ರತಿಯೊಬ್ಬ ಮತದಾರ ಮತ ಹಾಕಿದಾಗ ಯಶಸ್ವಿಯಾಗುತ್ತದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಿ. ನಿಮ್ಮ ಪ್ರತಿಯೊಂದು ಮತ ರಾಜ್ಯದ ಅಭಿವೃದ್ಧಿಗೆ ನೀಡುವ ಮತವಾಗಬೇಕು ಎಂದು ಜನತೆಗೆ ಮೋದಿ ಕರೆ ನೀಡಿದರು. ಇದನ್ನೂ ಓದಿ: ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಬಲರಾಮ ಇನ್ನಿಲ್ಲ