– ದೇವೇಗೌಡರ ಶಕ್ತಿ ರಾಹುಲ್ ಗಾಂಧಿಗೆ ಗೊತ್ತಿದೆ ಆದರೆ ರಾಜ್ಯದವರಿಗೆ ಗೊತ್ತಿಲ್ಲ
– ಎಚ್‍ಡಿಡಿ ನಂಬಿದವರು ಯಾರೂ ಬದುಕಿಲ್ಲ
ಮಂಡ್ಯ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಶಕ್ತಿ ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗೊತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ಸಿಗರಿಗೆ ದೇವೇಗೌಡರ ಶಕ್ತಿ ಅರ್ಥವಾಗುತ್ತಿಲ್ಲ ಎಂದು ಹಾಲಿ ಸಂಸದ ಶಿವರಾಮೇಗೌಡ ವಾಗ್ದಾಳಿ ನಡೆಸಿದರು.
ನಗರದ ಸಿಲ್ವರ್ ಜ್ಯುಬಲಿ ಪಾರ್ಕಿನಲ್ಲಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ನಡೆದಿದ್ದ ಜೆಡಿಎಸ್ ಸಮಾವೇಶದಲ್ಲಿ ಸಂಸದರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್‍ಗೆ ಕಾಂಗ್ರೆಸ್ ಅನಿವಾರ್ಯವಲ್ಲ. ಆದರೆ ಕಾಂಗ್ರೆಸ್‍ಗೆ ಜೆಡಿಎಸ್ ಅನಿವಾರ್ಯ ಎಂದರು.
Advertisement
Advertisement
ನಾವೆಲ್ಲರೂ ಒಪ್ಪಿ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ಎಚ್.ಡಿ.ದೇವೇಗೌಡ ಅವರು ನನ್ನನ್ನು ಕರೆದು ಲೋಕಸಭಾ ಉಪಚುನಾವಣೆಯ ಟಿಕೆಟ್ ನೀಡಿದರು. ಅವರ ಆಶೀರ್ವಾದದಿಂದ ಸಂಸದನಾದೆ. ಕೆಲವು ವಿಚಾರ ಹೇಳದಿದ್ದರೆ ತಪ್ಪಾಗುತ್ತೆ. ಬೇರೆ ಬೇರೆ ಕಾರಣದಿಂದ ಜಿಲ್ಲೆಯ ಅಭಿವೃದ್ಧಿಗಾಗಿ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ನನ್ನನ್ನು ಗೆಲ್ಲಿಸಿದಕ್ಕಿಂತ ಹೆಚ್ಚು ಮತಗಳಿಂದ ನಿಖಿಲ್ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಅವರು ಮನವಿ ಮಾಡಿಕೊಂಡರು.
Advertisement
ದೇವೇಗೌಡ ಅವರದ್ದು ಕುಟುಂಬ ರಾಜಕಾರಣ ಎಂಬ ರೀತಿ ಬಿಂಬಿಸಲಾಗಿದೆ. ಇದು ಕುಟುಂಬ ರಾಜಕಾರಣವಲ್ಲ. ಎಚ್.ಡಿ.ದೇವೇಗೌಡ ಅವರು ಸ್ವಂತ ಆಸ್ತಿ ಮಾಡಿಕೊಳ್ಳಲಿಲ್ಲ ಎಂದು ಸಂಸದರು ಹೊಗಳಿದರು. ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ನನಗೆ ಕಿಂಚಿತ್ತು ನೋವಿಲ್ಲ. ಐದು ಲಕ್ಷ ಬಹುಮತದಿಂದ ನಿಖಿಲ್ ಅವರನ್ನು ಗೆಲ್ಲಿಸುತ್ತೇವೆ ಎಂದರು.
Advertisement
ಎಚ್.ಡಿ.ದೇವೇಗೌಡ ಅವರನ್ನು ನಂಬಿದವರು ಯಾರೂ ಬದುಕಿಲ್ಲ ಎಂದು ಸಂಸದರು ಹೇಳಿ ಎಡವಟ್ಟು ಮಾಡಿಕೊಂಡರು. ಆದರೆ ತಮ್ಮ ಹೇಳಿಕೆ ಮೇಲೆ ಗಮನ ಹರಿಸದೇ ಮಾತು ಮುಂದುವರಿಸಿದರು. ಬಳಿಕ ಎಚ್.ಡಿ.ದೇವೇಗೌಡ ಅವರ ಗರಡಿಯಲ್ಲಿ ಪಳಗಿ ಬಳಿಕ ಪಕ್ಷ ತ್ಯಜಿಸಿ ಅಧಿಕಾರ ಹಿಡಿದವರ ಹೆಸರನ್ನು ಶಿವರಾಮೇಗೌಡ ಪ್ರಸ್ತಾಪಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv