ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧ ಕಾಂಗ್ರೆಸ್ (Congress) ಪಕ್ಷ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ದಲಿತ ಬಂಧುಗಳು ಕಾಂಗ್ರೆಸ್ ಸುಳ್ಳನ್ನು ನಂಬಬಾರದು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ದಲಿತ ಸಮುದಾಯಗಳಿಗೆ ಕರೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಮಿತ್ ಶಾ ವಿರುದ್ಧ ಹೋರಾಟ ಮಾಡುತ್ತಿದೆ. ಈ ಕಾಂಗ್ರೆಸ್ ಪಕ್ಷ ಬೀದಿಗಿಳಿಯುವ ಸ್ಥಿತಿ ನಿರ್ಮಾಣ ಮಾಡಿದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿದ್ದಲ್ಲದೇ ನೋಯಿಸಿತ್ತು. ಈ ವಿಚಾರವಾಗಿ ಅಮಿತ್ ಶಾ ಕಾಂಗ್ರೆಸ್‌ನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದರು.ಇದನ್ನೂ ಓದಿ: ಬೀದರ್ | ಚಳಿ ಹೆಚ್ಚಳಕ್ಕೆ ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರವಾಸ ರದ್ದುಪಡಿಸಲು ಒತ್ತಾಯ
Advertisement
Advertisement
ಯಾವಾಗ ಇದನ್ನು ಹೇಳಿದರೋ ಆಗದಿಂದ ಅಂಬೇಡ್ಕರ್ ಫೋಟೋ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ದ್ರೋಹವನ್ನು ಅಮಿತ್ ಶಾ ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಅಮಿತ್ ಶಾ ಹೇಳಿಕೆಯಂತೆಯೇ ಕಾಂಗ್ರೆಸ್ ಅಂಬೇಡ್ಕರ್‌ಗೆ ಅಪಮಾನ ಮಾಡಿದರು ಹಾಗೂ ಕಾಂಗ್ರೆಸ್ ಪ್ರತಿಭಟನೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು.
Advertisement
ದಲಿತ ಬಂಧುಗಳೇ, ಯಾರೇ ಅಂಬೇಡ್ಕರ್ ಅವರನ್ನು ನಿಂದಿಸಿದರೂ, ನಾನು ಅವರ ವಿರೋಧಿಯಾಗುತ್ತೇನೆ. ಆದರೆ ಅಮಿತ್ ಶಾ, ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿಲ್ಲ. ಕಾಂಗ್ರೆಸ್ ಸುಮ್ಮನೆ ಬೊಬ್ಬೆ ಹೊಡೆಯುತ್ತಿದ್ದಾರೆ. ಅಂಬೇಡ್ಕರ್ ವಿರೋಧಿ ಕಾಂಗ್ರೆಸ್. ಆದರೆ ಕಾಂಗ್ರೆಸ್‌ನವರು ಕೂಡಾ ಅಂಬೇಡ್ಕರ್ ಅವರನ್ನು ಗೌರವಿಸುವಂತೆ ಅಮಿತ್ ಶಾ ಮಾಡಿದ್ದಾರೆ. ದಲಿತ ಬಂಧುಗಳು ಆತುರ ಬೀಳಬೇಡಿ. ಅವರು ಹೇಳಿದ ಮಾತು ಪೂರ್ಣವಾಗಿ ಕೇಳಿ. ಅಮಿತ್ ಶಾ ಅಂಬೇಡ್ಕರ್‌ಗೆ ಅಪಮಾನ ಮಾಡಿಲ್ಲ. ಕಾಂಗ್ರೆಸ್‌ಗೆ ಅಪಮಾನ ಮಾಡಿದ್ದಾರೆ. ದಲಿತರು ಆತುರ ಬೀಳದೇ ಅವರ ಹೇಳಿಕೆ ಸರಿಯಾಗಿ ಕೇಳಿಸಿಕೊಂಡು ತೀರ್ಮಾನ ಮಾಡಬೇಕು ಅಂತ ಮನವಿ ಮಾಡಿದರು.ಇದನ್ನೂ ಓದಿ: ಕ್ರಿಸ್‌ಮಸ್ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ