ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ (Congress) ಮುಳುಗುತ್ತಿರುವ ಹಡುಗಿನ ತರಹ ಆಗಿದೆ. ಆ ಪಕ್ಷ ತನ್ನಿಂದ ತಾನೇ ಪತನವಾಗುವುದು ಗೋಚರವಾಗುತ್ತಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಟೀಕಿಸಿದ್ದಾರೆ.
ಬಿಜೆಪಿ (BJP) ಆಫರ್ ವಿಚಾರವಾಗಿ ರವಿ ಗಣಿಗ ಆರೋಪಕ್ಕೆ ಪ್ರತಿಕ್ರಿಯಿಸಿ, ಕೇವಲ ಪ್ರಚಾರಕ್ಕಾಗಿ ರವಿ ಗಣಿಗ (Ganiga Ravikumar) ಅವರು ಇಲ್ಲದ ಸಲ್ಲದ ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರನ್ನು ಖರೀದಿಸುವ ಅವಶ್ಯಕತೆ ಬಿಜೆಪಿಗೆ ಇಲ್ಲ. 100 ಕೋಟಿ ರೂ. ಕೊಟ್ಟು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಖರೀದಿಸಲು ಯತ್ನಿಸುತ್ತಿದೆ ಎಂಬ ರವಿ ಗಣಿಗ ಅವರ ಹೇಳಿಕೆ ಬಾಲಿಶತನದಿಂದ ಕೂಡಿದೆ ಎಂದರು. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತಿಷ್ಠಿತ AAA ರೇಟಿಂಗ್ ಗರಿಮೆ
Advertisement
Advertisement
ಈ ಹಿಂದೆ ಬೆಳಗಾವಿ (Belagavi) ಶಾಸಕ ರಾಜು ಕಾಗೆ ಅವರು, ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧವೆಂಬ ಹೇಳಿಕೆ ನೀಡಿದ್ದನ್ನು ರವಿ ಗಣಿಗ ಅವರು ಸ್ಮರಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಹತ್ತು ಹಲವಾರು ಶಾಸಕರು ಕಾಂಗ್ರೆಸ್‌ನಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ. ಈ ರೀತಿ ಹಿಟ್ ಆ್ಯಂಡ್ ರನ್ ರೀತಿ ಇಲ್ಲಸಲ್ಲದ ಹೇಳಿಕೆ ನೀಡುವುದರಿಂದ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: 100 ಕೋಟಿ ಸ್ಕ್ಯಾಮ್: ದೆಹಲಿಯಲ್ಲಿ ಚೀನಾ ಪ್ರಜೆ ಅರೆಸ್ಟ್
Advertisement