ಧಾರವಾಡ: ಕಾಂಗ್ರೆಸ್ (Congress) ಎಲ್ಲಾ ಸಂದರ್ಭದಲ್ಲಿ ವಿರೋಧ ಮಾಡುತ್ತಿದೆ. ಸೆಂಟರ್ ವಿಸ್ತಾಗೆ ವಿರೋಧ ಮಾಡಿದ್ದರು. ಇದೀಗ ಹೊಸ ಪಾರ್ಲಿಮೆಂಟ್‌ಗೆ ವಿರೋಧ ಮಾಡುತ್ತಿದೆ. ಕಾಂಗ್ರೆಸ್ ಸುಳ್ಳು ಹೇಳುವ ಸ್ಪರ್ಧೆಗಿಳಿದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ನಾವು ಉದ್ಯಮಿಗಳ ಹತ್ತಾರು ಕೋಟಿ ಮನ್ನಾ ಮಾಡಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ ಎಂದು ಕಿಡಿಕಾರಿದರು. ಇವರ ಕಾಲದಲ್ಲಿಯೇ ಅತಿ ಹೆಚ್ಚು ಸಾಲಕೊಡಿಸಿದ್ದಾರೆ. ಅವರು ಸಾಲ ವಾಪಸ್ ತುಂಬಿರಲೇ ಇಲ್ಲ. ಮೋದಿ ಬಂದ ಮೇಲೆ ಬಾಕಿ ಸಾಲ ವಾಪಸ್ ತುಂಬಿ ಎಂದಿದ್ದರು. ಆಗ ಅಂತಹ ಉದ್ಯಮಿಗಳು ಓಡಿ ಹೋಗಿದ್ದಾರೆ. ಓಡಿ ಹೋದ ಉದ್ಯಮಿ, ವಂಚಕರ ಆಸ್ತಿ ವಶಪಡಿಸಿಕೊಳ್ಳುತ್ತೇವೆ. ಇದಕ್ಕಾಗಿ ಹೊಸ ಕಾಯ್ದೆ ತಂದಿದ್ದೇವೆ. ಹೊಸ ಸಾಲ ಕೊಡುವ ಕಾರ್ಯ ಮಾಡಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿನ ಕಾಮಗಾರಿಗಳ ಬಗ್ಗೆ ಮಾಹಿತಿ ಕೊಡಿ: BBMPಗೆ ಡಿಕೆಶಿ ಪತ್ರ
ಕಾಂಗ್ರೆಸ್‌ನವರು ಕಾಯ್ದೆ, ಕಾನೂನು ಬಿಟ್ಟು ಸಾಲ ಕೊಟ್ಟಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನಾವು ಉದ್ಯಮಿ ಸಾಲ ಮನ್ನಾ ಮಾಡಿದ್ದೇವೆ ಎಂದು ಸಾಬೀತುಪಡಿಸಲಿ. ಸಾಬೀತು ಮಾಡಿದರೆ ನಾವು ರಾಜಕೀಯ ನಿವೃತ್ತಿ ಪಡೆಯುತ್ತೇವೆ. ನಯಾಪೈಸೆ ಮನ್ನಾ ಮಾಡಿಲ್ಲ ಎಂದಾದರೆ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರಾ? ಎಂದು ಸವಾಲು ಹಾಕಿದರು. ಇದನ್ನೂ ಓದಿ: ನರೇಂದ್ರ ಮೋದಿ ಸರ್ಕಾರ ಸ್ವರ್ಗ ತೋರಿಸ್ತೀನಿ ಅಂತ ಜನರಿಗೆ ನರಕ ತೋರಿಸಿದ್ದಾರೆ: ಸಲೀಂ ಅಹಮದ್
30ರಿಂದ 40 ಸಾವಿರ ಕೋಟಿ ರೂ. ಸಾಲ ನಾವು ಈಗಾಗಲೇ ವಸೂಲಿ ಮಾಡಿದ್ದೇವೆ. ಓಡಿ ಹೋದವರನ್ನು ಕರೆದು ವಸೂಲಿ ಮಾಡುತ್ತೇವೆ. ಓಡಿ ಹೋದವರಿಗೆ ಸಾಲ ಕೊಟ್ಟವರೇ ಇವರು. ಓಡಿ ಹೋದವರು ಬಂದರೆ ಅದೆಲ್ಲ ಹೊರಗೆ ಬರುತ್ತದೆ. ಹೀಗಾಗಿ ಓಡಿ ಹೋದ ವಂಚಕರು ವಾಪಸ್ ಬರದಂತೆ ತಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೇಶಾದ್ಯಂತ 508 ರೈಲ್ವೆ ನಿಲ್ದಾಣ ಪುನರಾಭಿವೃದ್ಧಿಗೆ ಮೋದಿ ಚಾಲನೆ
Web Stories