ಮಂಡ್ಯ: ಕಾಂಗ್ರೆಸ್ (Congress) ಮೋದಿ ಸಮಾಧಿ ಮಾಡುವ ಕನಸು ಕಾಣುತ್ತಿದೆ. ಮೋದಿ ಸಮಾಧಿ ಅಗೆಯುವ ಕೆಲಸದಲ್ಲಿ ಕಾಂಗ್ರೆಸ್ ಬ್ಯುಸಿ ಆಗಿದ್ದರೆ, ನಾನು ಬೆಂಗಳೂರು – ಮೈಸೂರು ಹೆದ್ದಾರಿಯ (Bengaluru Mysuru Exprpessway) ಮೂಲಕ ಬಡವರ ಕೆಲಸ ಮಾಡುವಲ್ಲಿ ಬ್ಯುಸಿಯಾಗಿದ್ದೇನೆ. ಸಮಾಧಿ ಅಗೆಯುತ್ತಿರುವ ಕಾಂಗ್ರೆಸ್‌ಗೆ ಈ ನಾಡಿನ ಜನರ ಆಶೀರ್ವಾದ ನನಗೆ ರಕ್ಷಾಕವಚವಾಗಿದೆ ಎಂಬುದು ಗೊತ್ತಿಲ್ಲ ಎಂದು ಪ್ರದಾನಿ ನರೇಂದ್ರ ಮೋದಿ (Narendra Modi) ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ (Mandya) ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಪ್ರತಿ ಬಾರಿಯೂ ಕರ್ನಾಟಕಕ್ಕೆ ಬಂದಾಗ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಸಕ್ಕರೆ ನಗರ ಮಂಡ್ಯ ಜನ ತೋರಿಸಿದ ಪ್ರೀತಿಗೆ ವಂದನೆ. ಸಕ್ಕರೆ ನಗರದ ಪ್ರೀತಿಗೆ ಶಿರಬಾಗಿ ನಮಿಸುತ್ತೇನೆ. ತಾಯಿ ಭುವನೇಶ್ವರಿಗೆ, ಆದಿ ಚುಂಚನಗಿರಿ, ಮೇಲುಕೋಟೆ ಗುರುಗಳಿಗೂ ನಮಿಸಿ ಆಶೀರ್ವಾದ ಬೇಡುತ್ತೇನೆ ಎನ್ನುತ್ತ ಭಾಷಣವನ್ನು ಪ್ರಾರಂಭಿಸಿದರು.
Advertisement
Advertisement
Advertisement
ರೈತರ ಕಷ್ಟಗಳಿಗೆ ನಾವು ಸ್ಪಂದಿಸುತ್ತಿದ್ದು ಕರ್ನಾಟಕದ ರೈತರ ಖಾತೆಗಳಿಗೆ ಡಬಲ್ ಎಂಜಿನ್ ಸರ್ಕಾರ 12 ಸಾವಿರ ಕೋಟಿ ರೂ. ಸಹಾಯಧನ ನೀಡಿದೆ. ಮಂಡ್ಯದ ಮೂರು ಮುಕ್ಕಾಲು ಲಕ್ಷ ರೈತರ ಖಾತೆಗಳಿಗೆ 600 ಕೋಟಿ ರೂ. ನೀಡಲಾಗಿದೆ ಎಂದು ಸರ್ಕಾರದ ಸಾಧನೆಯನ್ನು ಬಣ್ಣಿಸಿದರು.
Advertisement
ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಗೆ ಈ ರಸ್ತೆಯೂ ಸಾಕ್ಷಿಯಾಗಿದೆ. ನಿಮ್ಮ ಪ್ರೀತಿಯ ಋಣವನ್ನು ಅಭಿವೃದ್ಧಿ ಮೂಲಕ ಬಡ್ಡಿ ಸಮೇತ ತೀರಿಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಈ ಹೈವೇ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ಹೈವೆ ಬಗ್ಗೆ ಬಹಳ ಮೆಚ್ಚುಗೆ ಬರುತ್ತಿದೆ. ದೇಶದ ಎಲ್ಲಾ ಕಡೆ ಈ ರೀತಿ ಹೈವೆ ಮಾಡಿ ಎಂದು ಜನರು ಕೇಳುತ್ತಿದ್ದಾರೆ. ಈ ರಸ್ತೆ ನೋಡಿದ ಯುವಕರ ಮನದಲ್ಲಿ ಹೆಮ್ಮೆ, ಗರ್ವ ಮೂಡಿದೆ ಎಂದು ನುಡಿದರು.
ಈ ರಸ್ತೆಯಿಂದ ಉತ್ತಮ ಅಭಿವೃದ್ಧಿ ಆಗುತ್ತದೆ. ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಅವರು ಅಭಿವೃದ್ಧಿ ವಿಚಾರದಲ್ಲಿ ಸದಾ ಸ್ಮರಣೀಯರು. ಕರ್ನಾಟಕದ ನೆಲದಲ್ಲಿ ಇಂತಹ ಮಹಾನ್ ವಿಭೂತಿ ಪುರುಷರು ಹುಟ್ಟಿದ್ದಾರೆ. ಈ ಮಹಾನ್ ಪುರಷರನ್ನು ಈ ಪುಣ್ಯಭೂಮಿ ಭಾರತಕ್ಕೆ ನೀಡಿದೆ. ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾಗುತ್ತಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಹಣ ವಿನಿಯೋಗಿಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ
ಜಗತ್ತು ಕೊರೊನಾದ ನಡುವೆ ಹೋರಾಡುವ ವೇಳೆಯೂ ಭಾರತದಲ್ಲಿ ಮೂಲಭೂತ ಸೌಕರ್ಯಕ್ಕೆ ಹಣ ಕಡಿಮೆ ಆಗಿಲ್ಲ. ಮೂಲಭೂತ ಸೌಕರ್ಯದಿಂದ ಎಲ್ಲಾ ವಿಧದಲ್ಲೂ ಅಭಿವೃದ್ಧಿ ಆಗುತ್ತದೆ. ಬೆಂಗಳೂರು-ಮೈಸೂರು ಕರ್ನಾಟಕದ ಮಹತ್ವಪೂರ್ಣ ನಗರಗಳಾಗಿದ್ದು, ಒಂದು ನಗರ ಐಟಿ ಯಿಂದ ಖ್ಯಾತಿ, ಮತ್ತೊಂದು ನಗರ ಸಾಂಸ್ಕೃತಿಕವಾಗಿ ಖ್ಯಾತಿ ಹೊಂದಿದೆ. ಬೆಂಗಳೂರು – ಮೈಸೂರು ನಡುವೆ ಟ್ರಾಫಿಕ್ ಹೆಚ್ಚು ಇತ್ತು. ಜನರಿಗೆ ತೊಂದರೆ ಆಗುತ್ತಿತ್ತು. ಈಗ ಈ ತೊಂದರೆ ನಿವಾರಣೆಯಾಗಿದ್ದು ಅಭಿವೃದ್ಧಿಯೂ ಆಗುತ್ತದೆ ಇನ್ನೂ ಮೈಸೂರು, ಮಡಿಕೇರಿ ಗೆ ಹೋಗಲು ಪ್ರಯಾಸ ಆಗುವುದಿಲ್ಲ ಎಂದರು.
ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ. ಬೆಂಗಳೂರು – ಮಂಗಳೂರು ನಡುವೆ ಮಳೆಗಾಲದಲ್ಲಿ ಪಶ್ಚಿಮ ಘಟ್ಟ ಕುಸಿದು ತೊಂದರೆ ಆಗುತ್ತಿತ್ತು. ಮೈಸೂರು – ಕುಶಾಲನಗರ ಹೈವೇಯಿಂದ ಈ ಸಮಸ್ಯೆಯೂ ನಿವಾರಣೆ. ಇನ್ನು ಮುಂದೆ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ ಎಂದು ಹೇಳಿದರು. ಇದನ್ನೂ ಓದಿ: ಗುಜರಾತ್ ಸಿಎಂ ಆಗಿದ್ದಾಗಲೂ ಸಕ್ಕರೆ ನಾಡಿಗೆ ಬಂದಿದ್ರು ಮೋದಿ