ಬೆಂಗಳೂರು: ರೌಡಿಗಳನ್ನ ತಯಾರು ಮಾಡೋ ಫ್ಯಾಕ್ಟರಿ ಅಂದ್ರೆ ಅದು ಕಾಂಗ್ರೆಸ್ ಪಕ್ಷ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashoka) ವಾಗ್ದಾಳಿ ನಡೆಸಿದರು.
ರೌಡಿ ವಿಲ್ಸನ್ ಗಾರ್ಡನ್ ನಾಗನಿಂದ ಸಚಿವ ಸೋಮಣ್ಣ (V Somanna) ಭೇಟಿ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸೋಮಣ್ಣ ಪರ ಬ್ಯಾಟಿಂಗ್ ನಡೆಸಿದರು. ಇದನ್ನೂ ಓದಿ: ಮಾನವನ ಮೆದುಳಿಗೆ ಚಿಪ್ – ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ
Advertisement
Advertisement
ಸಚಿವ ವಿ.ಸೋಮಣ್ಣ ಅವರು ಜೀವನದಲ್ಲಿ ಯಾವತ್ತಿಗೂ ರೌಡಿಗಳ ಸಹವಾಸ ಮಾಡಿಲ್ಲ. ರೌಡಿಗಳಿಂದ ಚುನಾವಣೆ ಗೆದ್ದಿಲ್ಲ. ಅವರು ಬಸವ ತತ್ವದಲ್ಲಿ ನಂಬಿಕೆ ಇಟ್ಟವರು. ಅಂತಹವರ ವಿರುದ್ಧ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಸೋಮಣ್ಣ ಅವರಿಗೆ ಅಂತಹ ರೌಡಿ ರಾಜಕೀಯದ ಹಿನ್ನೆಲೆಯಿಲ್ಲ. ರಾಜಕೀಯ ವ್ಯಕ್ತಿಗಳು ಯಾವುದೇ ಪಕ್ಷದವರಾಗಿದ್ದರೂ ಅಂತಹವರನ್ನ ದೂರ ಇಡಬೇಕು. ಆದರೆ ಕಾಂಗ್ರೆಸ್ ಇದನ್ನ ದೊಡ್ಡದು ಮಾಡ್ತಿದೆ. ನಿತ್ಯ ಟ್ವೀಟ್ ಮಾಡ್ತಿದ್ದಾರೆ ಇದು ಸರಿಯಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ದಲಿತ ಸಿಎಂ ಮಾಡಲು ನಾವು ಸಿದ್ಧ – ಹೆಚ್‌ಡಿಕೆ
Advertisement
Advertisement
ರೌಡಿಗಳಿಗೆ ಬೆಳೆಯಲು ಅವಕಾಶ ಇರೋ ಪಕ್ಷ ಅಂದ್ರೆ ಅದು ಕಾಂಗ್ರೆಸ್ (Congress) ನಲ್ಲಿ ಮಾತ್ರ. ಕಾಂಗ್ರೆಸ್ ಪಕ್ಷಕ್ಕೆ ಗೂಂಡಾಗಿರಿ ಹಿನ್ನೆಲೆಯಿದೆ. ಅದು ರೌಡಿಗಳನ್ನ ತಯಾರು ಮಾಡೋ ಕಾರ್ಖಾನೆಯಾಗಿದೆ. ಅವರು ಅಧಿಕಾರದಲ್ಲಿದ್ದಾಗ ಡಾನ್‌ಗಳು ಇದ್ದರು. ಈಗ ಯಾರು ಇಲ್ಲ. ನಮ್ಮದು ನೇರವಾದ ರಾಜಕೀಯ (Politics). ಗೂಂಡಾಗಿರಿ ರಾಜಕೀಯ ಬಿಜೆಪಿ ಮಾಡೊಲ್ಲ. ಕೇಸರಿ ಶಾಲು ಹಾಕಿದ ಕೂಡಲೇ ಅವರು ಬಿಜೆಪಿ (BJP) ಅವರು ಅಲ್ಲ. ಕೇಸರಿ ಜೊತೆ ಹಸಿರು, ಕಮಲ ಗುರುತಿನ ಶಾಲು ಇದ್ದರೆ ಮಾತ್ರ ಅವರು ಬಿಜೆಪಿ ಅವರು. ಅನೇಕ ಸ್ವಾಮೀಜಿಗಳು, ಮುಸ್ಲಿಮರೂ ಕೇಸರಿ ಹಾಕ್ತಾರೆ. ಹಾಗಾದರೆ ಅವರು ಬಿಜೆಪಿ ಆಗ್ತಾರಾ? ಪಕ್ಷದ ಸದಸ್ಯತ್ವ ಕಡ್ಡಾಯವಾಗಿ ಆಗಿದ್ದರೆ ಮಾತ್ರ ಅವರು ಬಿಜೆಪಿ ಅಂತ ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ (Dk Shivakumar), ಸಿದ್ದರಾಮಯ್ಯ (Siddaramaiah) ಜೊತೆ ರೌಡಿಗಳು ನಿಂತಿರೋದು ನೂರಾರು ಫೋಟೋಗಳು ಇವೆ. ಕಾಂಗ್ರೆಸ್ ಪಕ್ಷದ್ದು ರೌಡಿಗಳ ಜಾತಕ. ಅದನ್ನ ಮೊದಲು ನೋಡಿಕೊಳ್ಳಲಿ ಅಂತ ಕಿಡಿಕಾರಿದರು. ಇದನ್ನೂ ಓದಿ: IAS ಆಕಾಂಕ್ಷಿ ಅಂತಾ ಬಿಲ್ಡಪ್; ಬೆತ್ತಲೆ ವೀಡಿಯೋ ಇಟ್ಕೊಂಡು ಯುವಕನಿಗೆ 40 ಲಕ್ಷ ಪಂಗನಾಮ – ಖತರ್ನಾಕ್ ಲೇಡಿ ಅರೆಸ್ಟ್
ಫೈಟರ್ ರವಿ ಪಕ್ಷ ಸೇರ್ಪಡೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ಜೊತೆ ಮಾತಾಡುತ್ತೇನೆ. ರೌಡಿ ಹಿನ್ನೆಲೆ, ಸಮಾಜಘಾತುಕವಾಗಿರೋದು ಕಂಡುಬಂದಲ್ಲಿ. ಅಂತಹವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.