– ಗೋವಾದಲ್ಲಿ ಸಂಘ ಪರಿವಾರ, ಬಿಜೆಪಿ ಜಗಳದಿಂದ ಹಿನ್ನಡೆ – ಶೋಭಾ ಕರಂದ್ಲಾಜೆ
ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತದಲ್ಲಿ ಕರ್ನಾಟಕದಲ್ಲಿರೋ ಕಾಂಗ್ರೆಸ್ ಕೂಡ ಅಳಿಸಿಹೋಗುತ್ತೆ. ಬಿಜೆಪಿ ಖಂಡಿತ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಪರಿಷತ್ ಸದಸ್ಯ ಗೋ ಮಧುಸೂದನ್ ಹೇಳಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯ ಈ ಎಲ್ಲಾ ಸಾಧನೆಗೆ ಮೋದಿ, ಅಧ್ಯಕ್ಷರಾದ ಅಮಿತ್ ಷಾ ಅವರನ್ನ ಅಭಿನಂದಿಸಬೇಕು. ದೇಶದ ಜನ ನೋಟ್‍ಬ್ಯಾನ್ ಒಪ್ಪಿಕೊಂಡಿದ್ದಾರೆ. ಮೋದಿಯವರನ್ನ, ಅವರ ಕಾರ್ಯಕ್ರಮವನ್ನ ಒಪ್ಪಿಕೊಂಡಿದ್ದಾರೆ. 2019ರ ಚುನಾವಣೆಗೆ ಇದೊಂದು ದ್ಯೋತಕ. 2019 ರಿಂದ 2024ರವರೆಗೆ ಮತ್ತೊಂದು ಅವಧಿವರೆಗೆ ಮೋದಿ ಅವರ ಆಡಳಿತ ಭಾರತಕ್ಕೆ ಖಚಿತವಾಗಿ ದೊರಕಲಿದೆ ಎಂಬ ವಿಶ್ವಾಸವಿದೆ ಅಂದ್ರು
ಸಂಸದೆ ಶೋಭಾ ಕರಂದ್ಲಾಜೆ ಕೂಡ ಬಿಜೆಪಿ ಮೇಲುಗೈ ಸಾಧಿಸಿರೋ ಬಗ್ಗೆ ಪ್ರತಿಕ್ರಿಯಿಸಿದ್ದು, 26 ವರ್ಷಗಳ ನಂತರ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಡಿಮಾನಿಟೈಸೇಷನ್ ನಂತರ ಚುನಾವಣೆ ನಡೆದಿರೋದು. ಇದ್ರಿಂದ ಗೊತ್ತಾಗುತ್ತೆ ಮೋದಿಯ ಜೊತೆ ಜನರಿದ್ದಾರೆ. ಪಂಜಾಬ್ ಫಲಿತಾಂಶದ ಬಗ್ಗೆ ಹೆಚ್ಚಿಗೆ ನಿರೀಕ್ಷಿಸಿರಲಿಲ್ಲ. ಗೋವಾದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಜಗಳ ದಿಂದ ಹಿನ್ನಡೆಯಾಗಿದೆ. ಡಿವೈಡ್ ಆದ್ರೆ ಈ ರೀತಿ ಆಗುತ್ತೆ ಎಂಬುದಕ್ಕೆ ಇದು ನಮಗೆ ಪಾಠ ಅಂತ ಹೇಳಿದ್ರು.